ಮೊದಲ ಬಾರಿ ಪರ್ಸನಲ್ ವಿಚಾರದ ಬಗ್ಗೆ ರಿವೀಲ್ ಮಾಡಿದ ನಟಿ ಹಿತಾ ಚಂದ್ರುಶೇಖರ್. ನೆಟ್ಟಿಗರಿಗೆ ಖಡಕ್ ಉತ್ತರ............
ಕಾಲ್ ಕೆಜಿ ಪ್ರೀತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹಿತಾ ಚಂದ್ರುಶೇಖರ್ ಇದೀಗ ಜಾಹೀರಾತು ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ 2 ಲಕ್ಷ 27 ಸಾವಿರ ಫಾಲೋವರ್ಸ್‌ನ ಹೊಂದಿದ್ದಾರೆ. ಆಗಾಗ ಫಾಲೋವರ್ಸ್ ಜೊತೆ ಮಾತನಾಡಲು Ask me anything ಎಂದು ಫೋಸ್ಟ್ ಹಾಕುತ್ತಾರೆ. ಸದಾ ಮ್ಯಾನಿಫೆಸ್ಟ್, affirmationಗಳ ಬಗ್ಗೆ ಹಂಚಿಕೊಳ್ಳುವ ನಟಿ ಮೊದಲ ಬಾರಿಗೆ ಪರ್ಸನಲ್ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ನೆಟ್ಟಿಗನೊಬ್ಬ 'ಮಕ್ಕಳು ಮಾಡಿಕೊಳ್ಳುವುದಕ್ಕೆ ಪ್ಲ್ಯಾನ್ ಮಾಡುತ್ತಿದ್ದೀರಾ?' ಎಂದು ಕೇಳಿದ್ದಾರೆ. ಅದಕ್ಕೆ ಹಿತಾ ಸೂಕ್ಷ್ಮವಾಗಿ ಉತ್ತರ ಕೊಟ್ಟಿದ್ದಾರೆ. 'ಸದ್ಯಕ್ಕೆ ಅದರ ಬಗ್ಗೆ ಪ್ಲ್ಯಾನ್ ಇಲ್ಲ. ನನಗೆ ನನ್ನ ಸ್ವಂತ ಮಕ್ಕಳು ಅಂತ ಬೇಡ ನನಗೆ ಮಕ್ಕಳು ಬೇಕು ಅನಿಸಿದಾಗ ನಾನು ದತ್ತು ತೆಗೆದುಕೊಳ್ಳುವುದಕ್ಕೆ ರೆಡಿಯಾಗಿರುವೆ. ಇದು ನಮ್ಮ ಪರ್ಸನಲ್ ಆಯ್ಕೆ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ನಾನು ಇದರ ಬಗ್ಗೆ ಮೊದಲ ಬಾರಿ ಹೇಳಿಕೊಳ್ಳುತ್ತಿರುವೆ' ಎಂದು ಹಿತಾ ಬರೆದುಕೊಂಡಿದ್ದರು.

ಬಹಿರಂಗವಾಗಿ ಹಿತಾ ಉತ್ತರ ಕೊಡುತ್ತಿದ್ದಂತೆ ಅಭಿಮಾನಿಗಳಿಗೆ ಯಾಕೆ ಈ ನಿರ್ಧಾರ ಕಾರಣ ಏನು ಎಂದು ಮೆಸೇಜ್‌ಗಳು ಹರಿದು ಬಂದಿದೆ. 'ಈ ಕಾರಣಕ್ಕೆ ನಾನು ಪರ್ಷನಲ್ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಹಿಂದೇಟು ಹಾಕುವುದು. ನನ್ನ ಜೀವನದ ಬಗ್ಗೆ ನಾನು ಆಗಲೇ ಸಾಕಷ್ಟು ಹಂಚಿಕೊಂಡಿರುವೆ.ನಾನು ಕಾರಣ ಹೇಳುವುದರಿಂದ ನಿಮ್ಮ ಜೀವನದಲ್ಲಿ ಯಾವ ಬದಲಾವಣೆಗಳು ಆಗುವುದಿಲ್ಲ ಅಥವಾ ಹೇಳಿದ ತಕ್ಷಣ ನಾನು ಬದಲಾಗುವುದಿಲ್ಲ. ಅಷ್ಟೆ' ಎಂದು ಮೆಸೇಜ್‌ಗೆ ಉತ್ತರ ಕೊಟ್ಟಿದ್ದಾರೆ.
ಟ್ರಿಪ್ ಎಂಜಾಯ್ ಮಾಡುತ್ತಿರುವ Hita Chandrashekar, ಬ್ಯೂಟಿಫುಲ್ ಫೋಟೋಗಳಿವು!
ಇವತ್ತು ಮತ್ತೊಂದು ಸ್ಟೋರಿಯಲ್ಲಿ 'Owen ಮಕ್ಕಳನ್ನು ಹೇಗೆ ಹಿಡಿದುಕೊಳ್ಳುತ್ತಾರೆ? ನನಗೆ ಆಗುವುದಿಲ್ಲ. ನನಗೆ ಲೋ ಕೀ ಆತಂಕ ಶುರುವಾಗುತ್ತದೆ' ಎಂದು ಬರೆದುಕೊಂಡಿದ್ದಾರೆ.
ನಟಿಯರು ನೇಮ್ ಅಂಡ್ ಫೇಮ್ ಮಾಡುವ ಸಮಯದಲ್ಲಿ ಮದುವೆಯಾದರೆ ಜನರು ಕೇಳುವುದು ಒಂದೇ ಪ್ರಶ್ನೆ ಮದ್ವೆ ಆದ್ಮೇಲೆ ಕೆಲಸ ಮಾಡ್ತೀರಾ ಎಂದು. ಮದುವೆ ಆಗಿ ಒಂದು ವರ್ಷ ಆಗುತ್ತಿದ್ದಂತೆ ಮಕ್ಕಳು ಯಾವಾಗ ಎಂದು. ಮಕ್ಕಳು ಆಗುವವರೆಗೂ ಯಾಕೆ ಮಕ್ಕಳು ಮಾಡಿಕೊಳ್ಳುತ್ತಿಲ್ಲ ಎಂದು. ಹೀಗೆ ಒಂದೊಂದೇ ಪ್ರಶ್ನೆಗಳು ಬೆಳೆಯುತ್ತದೆ. ನೂರಾರು ಜನರ ನಡುವೆ ಕೆಲಸ ಮಾಡಿ ಅವರಿಂದ ಹೆಸರು ಪಡೆದಿರುವ ಕಾರಣ ಅವರು ನಮ್ಮವರು ಎನ್ನುವ ಭಾವೆನೆಯಲ್ಲಿ ಕೆಲವರು ಹೇಳಬಹುದು ಆದರೆ ತೀರ ಪರ್ಸನಲ್ ವಿಚಾರಗಳು ಕೇಳುವುದರಿಂದ ಅವರ ಪ್ರೈವಸಿಗೂ ತೊಂದರೆ ಆಗಬಹುರು.

ಹಿತಾ ತುಂಬಾನೇ ಬೋಲ್ಡ್ ಹುಡುಗಿ ನಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಮುಂದಿಡುತ್ತಾರೆ. ವಾಹಿನಿಯಲ್ಲಿ ಪ್ರಸಾರವಾಗುತ್ತರುವ ಮದುವೆ ಕಾರ್ಯಕ್ರಮದಲ್ಲಿ ಪತಿ ಕಿರಣ್ ಜೊತೆ ಭಾಗಿಯಾಗಿ ತಮ್ಮ ಲವ್ ಸ್ಟೋರಿ ಹಂಚಿಕೊಂಡಿದ್ದರು.'ನಾವು ಮದ್ವೆಯಾಗಿ ಮೂರು ವರ್ಷಗಳಾವೆ. ಎಷ್ಟು ಜನ ಇನ್ನೂ ನಮ್ಮ ಲವ್ ಸ್ಟೋರಿ (Love story) ಬಗ್ಗೆ ಕೇಳುತ್ತಾರೆ. ನಾವು ಹೇಳಿದರೆ ಜನರು ನಂಬುವುದಿಲ್ಲ. ನಾವು ಡೈರೆಕ್ಟ್ ಮದುವೆ ಆಗಿದ್ದು, ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ವಿ. ಒಂದೇ ಸಿನಿಮಾದಲ್ಲಿ ಕೆಲಸ ಮಾಡ್ತಿದ್ವಿ. ನಮ್ಮಿಬ್ಬರ ನಡುವೆ ನಿಷ್ಕಲ್ಮದ ಸ್ನೇಹ ಇತ್ತು. ಇಬ್ಬರೂ ಯಾವತ್ತೂ ಫ್ಲರ್ಟ್ (Flirt) ಮಾಡಿಲ್ಲ. ಒಂದು ಮಾತು ಹೇಳುತ್ತಾರೆ, ಗೊತ್ತಿರದ ವ್ಯಕ್ತಿಗಿಂತ, ಗೊತ್ತಿರುವ ದೆವ್ವ ಒಳ್ಳೆಯದು ಅಂತ ಹೇಳುತ್ತಾರೆ,' ಎಂದು ಹಿತಾ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಮುಂಬೈ ಪ್ರತಿಭಾವಂತರಿಗೆ ಒಳ್ಳೆಯ ಜಾಗ: ಹಿತಾ ಚಂದ್ರಶೇಖರ್
'ಆ ಸಮಯದಲ್ಲಿ ಮದುವೆ ಅಗಬೇಕು, ಎಂದು ಹಿತಾಗೆ ಕ್ಲಾರಿಟಿ ಇತ್ತು. ಮದುವೆ ಆಗಬಾರದು ಅನ್ನೋದು ನನಗೆ ಇತ್ತು. ಎರಡು ವರ್ಷದವರೆಗೂ ನಾವು ಸ್ನೇಹಿತರಾಗಿದ್ವಿ. ಹಾಗೆ ನಾನು ಕೇಳಿದೆ ಮದುವೆ ಕಥೆ ಏನಾಯ್ತು, ಅಂತ ಆಗ ಇನ್ನೂ ಹುಡುಕುತ್ತಿದ್ದಾರೆ ಅಂತ ಹೇಳಿದ್ಲು. ಅದಕ್ಕೆ ನೀನು ಬಾಂಬೆನಲ್ಲಿ (Bombay) ಇದಿದ್ರೆ ಸುಲಭ ಆಗಿತ್ತು, ಅಂತ ಹೇಳಿದೆ. ಅದಕ್ಕೆ ಅವಳು ಕರೆದು ನೋಡು ಬರ್ತೀನಿ, ಅಂತ ಹೇಳಿದ್ಲು. ಅಲ್ಲಿಂದ ಶುರುವಾಯ್ತು. ಆಮೇಲೆ ಮದುವೆ ಪ್ಲ್ಯಾನಿಂಗ್ ಆಯ್ತು,' ಎಂದು ಕಿರಣ್ ಹೇಳಿದ್ದಾರೆ.

'ನಮ್ಮಿಬ್ಬರ ನಡುವೆ ತುಂಬಾನೇ ಹೊಂದಾಣಿಕೆ ಇದೆ. ನಮ್ಮ ಅಪ್ಪ, ಅಮ್ಮ ಅವರ ಅಪ್ಪ ಅಮ್ಮ, ನಮ್ಮನ್ನ ಬೆಳೆಸಿರುವ ರೀತಿಯಲ್ಲಿ ತುಂಬಾನೇ ಹೊಂದಾಣಿಕೆ ಇದೆ. ನಮ್ಮ ಫ್ಯಾಮಿಲಿ ಬ್ಯಾಗ್ರೌಂಡ್ (Family background) ಒಂದೇ ರೀತಿ ಇರೋದು. ಅದರಿಂದ ನಮ್ಮ ಸ್ನೇಹಿ ಬೆಳೆಯಿತು, ಇಬ್ಬರೂ ಒಂದೇ ಕೆಲಸ ಮಾಡ್ತಿದ್ವಿ, ಎಲ್ಲಾ ಹೊಂದಾಣಿಕೆ ಇದೆ. ಎಷ್ಟೋ ಸಂದರ್ಭವನ್ನು ಇಬ್ಬರೂ ಒಂದೇ ರೀತಿ ಹ್ಯಾಂಡಲ್ ಮಾಡಿದ್ದೀವಿ,' ಎಂದು ಹಿತಾ ಹೇಳಿದ್ದಾರೆ.
'ಸಣ್ಣ ಮಕ್ಕಳು ಪ್ರಶ್ನೆ ಕೇಳುತ್ತಾರೆ, ಇದು ಯಾಕೆ ಇದು ಹೇಗೆ ಅಂತಾ. ಇವನು ಅದೇ ರೀತಿ ತುಂಬಾ ಪ್ರಶ್ನೆ ಕೇಳ್ತಾರೆ. ಅಂದ್ರೆ ನಮಗೆ ಯೋಚನೆ ಮಾಡುವ ಶಕ್ತಿ ಕೊಡುತ್ತದೆ. ಈ ಗುಣ ಅವರಿಂದ ನನಗೆ ಬಂದಿದೆ. ಒಂದು ನಿಮಿಷ ನಿಂತ್ಕೊಂಡು ಈ ರೀತಿಯೂ ಥಿಂಕ್ ಮಾಡಬಹುದು, ಎಂದು ನನಗೆ ಹೇಳಿಕೊಟ್ಟಿದ್ದಾರೆ.' ಎಂದು ಹಿತಾ ತಮಾಷೆ ಮಾಡಿದ್ದಾರೆ.
