ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ನಿರ್ಮಾಪಕ ಎನ್‌ಎಲ್‌ಎನ್ ಮೂರ್ತಿ ಬಿಜಿಎಸ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆಸಿದ್ದಾರೆ.
ವಿನಯ್ ರಾಜ್‌ಕುಮಾರ್ ಅವರ ಅಭಿನಯನದ ಬಹು ನಿರೀಕ್ಷಿತ್ ಸಿನಿಮಾ 'ಗ್ರಾಮಾಯಣ' ನಿರ್ಮಾಣ ಮಾಡಿದ ಮೂರ್ತಿ ನಿನ್ನೆ (ಜುಲೈ 3) ವಿಧಿವಶರಾಗಿದ್ದಾರೆ.
ಹಲವು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಮೂರ್ತಿ ಅವರು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಮೂರ್ತಿ ಅವರ ತಾಯಿಯೂ ಗುರುವಾರ (ಜುಲೈ 2) ಅಸುನೀಗಿದ್ದರು.
'ಏಕ್ ದೋ ತೀನ್' ಖ್ಯಾತಿಯ ಬಾಲಿವುಡ್ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ
ಕಾಮಿಡಿ ಸ್ಟಾರ್ ಶರಣ್ ಜೊತೆ ಸಿನಿಮಾ ಮಾಡಬೇಕೆಂಬ ಆಸೆ ಹೊತ್ತಿದ್ದ ಮೂರ್ತಿ, ಈ ಹಿಂದೆ ಭಗತ್ ರಾಜ್ ಬಳಿ ಚಿತ್ರಕತೆ ಬರೆಸಿದ್ದರು. ಅಷ್ಟೇ ಅಲ್ಲದೆ ಶರಣ್‌ಗೆ ಕಥೆಯೂ ಹೇಳಿ ಆಗಿತ್ತು. ಆದರೆ ಸಿನಿಮಾ ಸೆಟ್ಟೇರುವ ಮುನ್ನವೇ ಮೂರ್ತಿ ಇನ್ನಿಲ್ಲ, ಎಂಬ ಸುದ್ದಿ ಕೇಳಿ ಚಿತ್ರರಂಗ ಶಾಕ್‌ನಲ್ಲಿದೆ.
ಬುಲೆಟ್ ಪ್ರಕಾಶ್ ಬೆನ್ನಲ್ಲೇ ಮತ್ತೊಬ್ಬ ಹಾಸ್ಯ ನಟನನ್ನು ಕಳೆದುಕೊಂಡ ಸ್ಯಾಂಡಲ್‌ವುಡ್!
ವಿನಯ್ ಅಭಿನಯದ ಗ್ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಸಿನಿಮಾ ಚಿತ್ರೀಕರಣ ಇನ್ನೂ ಬಾಕಿ ಉಳಿದಿದೆ.
