ಬುಲೆಟ್ ಪ್ರಕಾಶ್ ಬೆನ್ನಲ್ಲೇ ಮತ್ತೊಬ್ಬ ಹಾಸ್ಯ ನಟನನ್ನು ಕಳೆದುಕೊಂಡ ಸ್ಯಾಂಡಲ್‌ವುಡ್!

First Published 2, Jul 2020, 12:17 PM

ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗ ಬುಲೆಟ್ ಪ್ರಕಾಶ್ ಎಂಬ ಅದ್ಭುತ ಹಾಸ್ಯ ಕಲಾವಿದನನ್ನು ಕಳೆದುಕೊಂಡಿತ್ತು. ಅದಾದ ನಂತರ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣದ ನೋವಲ್ಲಿರುವಾಗಲೇ, ಇದೀಗ ಮತ್ತೊಬ್ಬ ಪ್ರತಿಭಾನ್ವಿತ ಹಾಸ್ಯ ನಟನನ್ನು ಕನ್ನಡಿಗರು ಕಳೆದುಕೊಂಡಿದ್ದಾರೆ.

ಅಸ್ತಮಾ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ರಾಜಗೋಪಾಲ್‌ (69) ಕೊನೆ ಉಸಿರೆಳೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮಿಮಿಕ್ರಿ ಹಾಗೂ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿದ್ದ ನಟ ರಾಜಗೋಪಾಲ್ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.

ಕೆಲ ವರ್ಷಗಳಿಂದ ಅಸ್ತಮಾ ಮತ್ತು ಕಿಡ್ನಿ ವೈಫಲ್ಯ ಸಮಸ್ಯೆ ಇತ್ತು.

ಕೆಂಗೇರಿ ಬಳಿಯ ವಲಗರ ಹಳ್ಳಿಯ ಬಿಡಿಎ ಬಡಾವಣೆಯಲ್ಲಿ ವಾಸವಿರುವ ರಾಜಗೋಪಾಲ್ ಪತ್ನಿ ಹಾಗೂ ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಾಜಗೋಪಾಲ್ ಸ್ಯಾಂಡಲ್‌ವುಟ್‌ ಸ್ಟಾರ್‌ ನಟರಾದ ವಿಷ್ಣುವರ್ಧನ್, ಅಂಬರೀಷ್, ಪ್ರಭಾಕರ್ ಹಾಗೂ ಅನೇಕ ದಿಗ್ಗಜರೊಂದಿಗ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.

ಕೆಲವು ವರ್ಷಗಳಿಂದ ಅವಕಾಶವಿಲ್ಲದೇ, ಜೀವನ ನಿರ್ವಹಣೆಗೂ ಕಷ್ಟ ಪಡುತ್ತಿದ್ದರು.

ಸಾಯಿ ಪ್ರಕಾಶ್‌ ನಿರ್ದೇಶನದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ರಾಜಗೋಪಾಲ್‌ ಆರ್ಕೆಸ್ಟ್ರಾಗಳಲ್ಲಿ ಮಿಮಿಕ್ರಿ ಮಾಡಿ ಹೆಸರು ಮಾಡಿದ್ದರು.

ಕನ್ನಡ ಚಿತ್ರರಂಗ ಇಂದು ಅದ್ಭುತ ಹಾಸ್ಯ ಕಲಾವಿದನನ್ನು ಕಳೆದುಕೊಂಡಿದೆ. ರಾಜಗೋಪಾಲ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

loader