ಇದು ಸಂತೂರ್‌ ಹುಡುಗಿಯ ಮೊದಲ ಮಾತು.

ಕನ್ನಡಕ್ಕೆ ಬಂದಿದ್ದೀರಿ, ಸಿನಿಮಾ ಜರ್ನಿ ಹೇಗಿದೆ ಎಂಬ ಪ್ರಶ್ನೆಯೊಂದಿಗೆ ಮಾತಿಗಿಳಿದರೆ, ಕನ್ನಡ ಸಿನಿಮಾ ನೋಡುವ ಮೂಲಕ ಕನ್ನಡ ಸಿನಿಮಾ ಜಗತ್ತಿಗೆ ಕನೆಕ್ಟ್ ಆಗಿದ್ದ ನಂಟಿನ ವಿವರ ಕೊಡುತ್ತಾರೆ ಈ ಮುಂಬೈ ಚೆಲುವೆ. ಇವರು ಹೆಸರು ಆಕಾಂಕ್ಷ ಶರ್ಮಾ. ಟಿವಿ ಗಳಲ್ಲಿ ಕಾಣುವ ಸಂತೋರ್‌ ಸೋಪಿನ ಜಾಹೀರಾತು ನೋಡಿದವರಿಗೆ ಈ ಮುದ್ದು ಮುಖದ ಚೆಲುವೆಯ ಪರಿಚಯ ಇದ್ದೇ ಇರುತ್ತದೆ. ಚಂದನದ ಕಾಂತಿಯ ಮೈ ಬಣ್ಣವಾಗಿಸುವ ಸಂತೋರ್‌ ಸೋಪಿನ ಜಾಹೀರಾತಿನಲ್ಲಿ ಒಂದು ಮಗುವಿನೊಂದಿಗೆ ಫೋಸು ಕೊಟ್ಟಮಾಡೆಲಿಂಗ್‌ ಬೆಡಗಿ ಇವರು. ಇದೀಗ ಕನ್ನಡಕ್ಕೂ ಬಂದಿದ್ದಾರೆ. ರವಿಚಂದ್ರನ್‌ ಪುತ್ರ ವಿಕ್ರಮ್‌ ಅಭಿನಯದ ಚೊಚ್ಚಲ ಚಿತ್ರ ‘ತ್ರಿವಿಕ್ರಮ’ದಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ.

ವಾರ ಕಾಲ ತ್ರಿವಿಕ್ರಮನ ಪ್ರೇಮೋತ್ಸವ, ಒಂದೊಂದು ದಿನಕ್ಕೂ ಒಂದೊಂದು ವಿಶೇಷ!

ಈಗಾಗಲೇ ಈ ಚಿತ್ರಕ್ಕೆ ಚಿತ್ರೀಕರಣವೂ ಮುಗಿದಿದೆ. ಚಿತ್ರತಂಡದೊಂದಿಗೆ ರಾಜಸ್ಥಾನ, ದಾಂಡೇಲಿ, ಗೋವಾ ಸೇರಿದಂತೆ ವಿವಿಧೆಡೆ ಶೂಟಿಂಗ್‌ ಟೂರ್‌ ಮುಗಿಸಿಕೊಂಡು ಬಂದಿದ್ದು, ಚಿತ್ರದಲ್ಲಿನ ತಮ್ಮ ಪಾತ್ರದ ಜತೆಗೆ ಚಿತ್ರೀಕರಣದ ಅನುಭವ ಅವರಿಗೆ ಥ್ರಿಲ್‌ ಕೊಟ್ಟಿದೆ. ಹೇಗಿದೆ ಸಿನಿಮಾ ಜರ್ನಿ ಅಂತ ಮಾತು ಶುರು ಮಾಡಿದರೆ, ವೆಲ್‌, ತುಂಬಾ ಚೆನ್ನಾಗಿದೆ ಎನ್ನುವ ಮಾತುಗಳ ಮೂಲಕ ಇಲ್ಲಿಗೆ ಬಂದ ಬಗೆ, ಚಿತ್ರೀಕರಣದ ಅನುಭವದ ಕತೆ ಬಿಚ್ಚಿಡುತ್ತಾರೆ ಆಕಾಂಕ್ಷ ಶರ್ಮಾ.

‘ಇನ್‌ಸ್ಟಾಗ್ರಾಮ್‌ನಲ್ಲಿ ನನ್ನ ಫೋಟೋಗಳನ್ನು ನೋಡಿ, ನಿರ್ದೇಶಕರು ಫೋನ್‌ ಮೂಲಕ ಸಂಪರ್ಕ ಮಾಡಿದ್ದರು. ಆ ನಂತರ ಮುಂಬೈಗೆ ಬಂದು, ಕತೆ ಮತ್ತು ಚಿತ್ರದಲ್ಲಿನ ನನ್ನ ಪಾತ್ರದ ವಿವರ ಕೊಟ್ಟರು. ಆರಂಭದಲ್ಲಿ ನನಗೆ ಕತೆ ಮತ್ತು ಪಾತ್ರ ಎರಡು ಇಷ್ಟವಾದವು. ಆನಂತರ ಆಡಿಷನ್‌ ಮಾಡಿದರು. ನನಗೂ ದಕ್ಷಿಣ ಭಾರತ ಚಿತ್ರೋದ್ಯಮದತ್ತ ಬರುವ ಆಸೆಯಿತ್ತು. ಅಲ್ಲಿಯೇ ಆಯ್ಕೆ ನಡೆಯಿತು. ಅದಕ್ಕೆ ಇದೊಂದು ನೆಪವಾಯಿತು. ಒಪ್ಪಿಕೊಂಡು ಇಲ್ಲಿಗೆ ಬಂದೆ’ ಎನ್ನುತ್ತಾರೆ. ಎಂಟ್ರಿಯಲ್ಲೇ ಅವರಿಗೆ ಕನ್ನಡದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರನ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕಿದೆ. ಅದು ಅವರಿಗೂ ಖುಷಿ ಕೊಟ್ಟಿದೆ.

ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು 'ತ್ರಿವಿಕ್ರಮ'ನ ಆಟ; ವಿಶೇಷತೆಗಳು ಇಲ್ಲಿವೆ!

‘ರವಿಚಂದ್ರನ್‌ ಅವರ ಬಗ್ಗೆ ಕೇಳಿ ತಿಳಿದುಕೊಂಡೆ. ಅವರ ಪುತ್ರನ ಮೊದಲ ಸಿನಿಮಾದ ಮೂಲಕ ನಾನು ಕೂಡ ಕನ್ನಡಕ್ಕೆ ಎಂಟ್ರಿ ಆಗುತ್ತಿರುವುದು ಸಾಕಷ್ಟುಖುಷಿ ಕೊಟ್ಟಿದೆ’ ಎನ್ನುವುದು ಆಕಾಂಕ್ಷ ಶರ್ಮಾ ಅವರ ಮಾತು. ಇನ್ನು ಚಿತ್ರದಲ್ಲಿನ ಪಾತ್ರದ ಮೇಲೂ ಅವರಿಗೆ ಸಾಕಷ್ಟುಭರವಸೆ ಇದೆ. ಇದೊಂದು ಲವ್‌ ಸ್ಟೋರಿ ಸಿನಿಮಾ. ಆ್ಯಕ್ಷನ್‌, ಥ್ರಿಲ್ಲರ್‌ ಜತೆಗೆ ಸೆಂಟಿಮೆಂಟ್‌ ಕೂಡ ಇಲ್ಲಿವೆ. ಹಾಗೆಯೇ ಬರೀ ನಾಯಕ ಪ್ರಧಾನ ಸಿನಿಮಾ ಇದಲ್ಲ. ನಾಯಕನಿಗೆ ಇರುವಷ್ಟೇ ಪ್ರಾಮುಖ್ಯತೆ ನಾಯಕಿಗೂ ಇದೆ. ಆ್ಯಕ್ಷನ್‌ ಮಾಡಿದ್ದೇನೆ. ನನ್ನ ಮಟ್ಟಿಗೆ ಸಿನಿಮಾ ಎಂಟ್ರಿಗೆ ಇದು ಸರಿಯಾದ ಆಯ್ಕೆ ಎನ್ನುವ ಭಾವನೆ ನನ್ನದು’ ಎನ್ನುವ ಮೂಲಕ ದಕ್ಷಿಣ ಭಾರತದ ಚಿತ್ರೋದ್ಯಮಲ್ಲಿ ನಟಿ ಎನ್ನುವುದಕ್ಕಿಂತ ಫರ್‌ಪಾರ್ಮೆನ್ಸ್‌ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕೆನ್ನುವ ಮಹಾದಾಸೆ ಹೊತ್ತಿದ್ದಾರೆ ಮುಂಬೈ ಬೆಡಗಿ ಆಕಾಂಕ್ಷ ಶರ್ಮಾ.