ಒಂದು ಸಿನಿಮಾದಲ್ಲಿ ಹತ್ತಾರು ಸೀನ್‌ಗಳಿರುತ್ತವೆ. ಆ ಸೀನ್‌ಗಳನ್ನು ಹತ್ತಾರು ಶಾಟ್‌ಗಳನ್ನಾಗಿ ವಿಭಾಗಿಸಿ ಚಿತ್ರೀಕರಣ ನಡೆಸುತ್ತಾರೆ. ಚಿತ್ರೀಕರಣ ನಡೆಸಲು ವರ್ಷಗಟ್ಟಲೆ ತೆಗೆದುಕೊಳ್ಳುವುದೂ ಇದೆ. ಆದರೆ ‘ರಕ್ತಗುಲಾಬಿ’ ಸಿನಿಮಾ ಮಾತ್ರ ಒಂದೇ ಒಂದು ಕಟ್‌ ಇಲ್ಲದೆ, ಒಂದೇ ಶಾಟ್‌ನಲ್ಲಿ ಚಿತ್ರೀಕರಿಸಿದ ಸಿನಿಮಾ. 

ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಚಿತ್ರೀಕರಿಸಿದ ಚಿತ್ರವಿದು. ಅದೇ ಕಾರಣಕ್ಕೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್, ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ.

ಇದೊಂದು ಕ್ರೈಂ ಥ್ರಿಲ್ಲರ್‌. ಬ್ಯಾಂಕ್‌ ಉದ್ಯೋಗಿಯಾಗಿದ್ದ ರಾಬಿ ಸಿನಿಮಾ ವ್ಯಾಮೋಹದಿಂದ ನಿರ್ದೇಶಿಸಿದ ಚಿತ್ರ. ಮಾಚ್‌ರ್‍ 5ರಂದು ಬಿಡುಗಡೆಯಾಗಲಿದೆ.

ಚಿತ್ರ ವಿಮರ್ಶೆ : ಸ್ಕೇರಿ ಫಾರೆಸ್ಟ್‌ 

ವಿಕ್ರಮಾದಿತ್ಯ ನಾಯಕನಾಗಿ, ಶಿವಾನಿ ನಾಯಕಿಯಾಗಿ ನಟಿಸಿದ್ದಾರೆ. ಮಾಣಿಕ್ಯ, ವಿನೋದ್‌ ಪ್ರಧಾನ ಪಾತ್ರದಲ್ಲಿದ್ದಾರೆ. ಪ್ರಜತ್‌ ಸಂಗೀತ ನಿರ್ದೇಶಿಸಿದ್ದಾರೆ. ಪೌಲ್‌ ಡಿಐ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಲೋಹಿತ್‌ ಕುಲಕರ್ಣಿ.

3 ತಿಂಗಳು ತರಬೇತಿ ಪಡೆದು ರಿಹರ್ಸಲ್‌ ನಡೆಸಿ ಕೊನೆಗೆ ಎಲ್ಲವೂ ಸರಿ ಇದೆ ಎಂದು ಮನದಟ್ಟಾದ ನಂತರವೇ ಸಕಲೇಶಪುರದ ಬಳಿಯ ಒಂದು ಹಳ್ಳಿಯಲ್ಲಿ ಎರಡು ಗಂಟೆಗಳ ಕಾಲ ಶೂಟಿಂಗ್‌ ಮಾಡಿದ್ದಾರೆ. ನಂತರ ಬಹಳ ಸಮಯ ತೆಗೆದುಕೊಂಡು ಎಡಿಟಿಂಗ್‌, ಸಂಗೀತ ಇತ್ಯಾದಿ ಕೆಲಸ ಮಾಡಿದ ಶ್ರಮವನ್ನು ನಿರ್ದೇಶಕರು ಎಳೆಎಳೆಯಾಗಿ ಹೇಳಿಕೊಂಡರು.

ತಂಡದಲ್ಲಿರುವ ಬಹುತೇಕರು ಸಿನಿಮಾರಂಗಕ್ಕೆ ಹೊಸಬರು. ಹಾಗಾಗಿ ಅವರೆಲ್ಲರೂ ಕನ್ನಡ ಪ್ರೇಕ್ಷಕರ ಆಶೀರ್ವಾದ ಕೇಳಿದರು.