ಫೆ.26 ರಿಂದ ಶುರುವಾಗುವ 12ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಮೂಲಕ ‘ಡೈರೆಕ್ಟರ್‌ ಫಿಲಂ ಬಜಾರ್‌’ ಅಧಿಕೃತವಾಗಿ ಕಾರ್ಯಚಟುವಟಿಕೆ ಶುರುಮಾಡುತ್ತಿದೆ. ಕನ್ನಡ ಸಿನಿಮಾಗಳಿರುವ ಮಾರುಕಟ್ಟೆಯ ಮಾಹಿತಿ,ಮಾರಾಟದ ಹಕ್ಕುಗಳು, ಡಿಜಿಟಲ್‌ ಜತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕನ್ನಡ ಸಿನಿಮಾಗಳಿರುವ ಅವಕಾಶಗಳ ಕುರಿತು ‘ಫಿಲಂ ಬಜಾರ್‌’ ಮೂಲಕ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಸೂಕ್ತ ಮಾಹಿತಿ ನೀಡುವ ಸಂಬಂಧ ಮೂರು ದಿವಸಗಳ ಮಾಹಿತಿ ಕಾರ್ಯಾಗರ ಆಯೋಜಿಸಿದೆ.

2018 ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ- ವಿಡಿಯೋ!

ಫಿಲಂ ಬಜಾರ್‌ ಆರಂಭಿಸುವ ಸಂಬಂಧ ಕರ್ನಾಟಕ ಚಲನಚಿತ್ರ ನಿರ್ದೇಶಕ ಸಂಘ ಶನಿವಾರ ಸಭೆ ನಡೆಸಿತು. ಸಭೆಯ ನಂತರ ಸಂಜೆ ನಿರ್ದೇಶಕ ಸಂಘದ ಸಂಘದ ಅಧ್ಯಕ್ಷ ಟೇಸಿ ವೆಂಕಟೇಶ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಕನ್ನಡ ಸಿನಿಮಾಗಳ ಪರಿಸ್ಥಿತಿ ಇವತ್ತು ಶೋಚನೀಯವಾಗಿದೆ. ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹಾಕಿದ ನಿರ್ಮಾಪಕರು ಸಾಲದ ಹೊರೆ ಹೊತ್ತುಕೊಂಡು ಮನೆ ಸೇರಬೇಕಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಪ್ರಮುಖವಾಗಿ ಹಲವು ನಿರ್ಮಾಪಕರಿಗೆ ಸಿನಿಮಾ ಮಾರುಕಟ್ಟೆಯ ಮಾಹಿತಿ ಕೊರತೆಯೂ ಕಾರಣ. ಅವರಿಗೆ ಮಾಹಿತಿ ಒದಗಿಸುವ ಉದ್ದೇಶದೊಂದಿಗೆ ಈಗ ಶುರುವಾಗುತ್ತಿರುವ ವೇದಿಕೆ ಇದು.

ಹಾಸಿಗೆ ಹಿಡಿದ ಬಾಲಕನ ಆಸೆ ಈಡೇರಿಸ್ತಾರಾ ನಟ ಪುನೀತ್‌ ರಾಜ್‌ಕುಮಾರ್?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಚಲನಚಿತ್ರ ಅಕಾಡೆಮಿ ಸೇರಿದಂತೆ ಚಿತ್ರೋದ್ಯಮ ಎಲ್ಲಾ ಸಂಸ್ಥೆಗಳು ಇದಕ್ಕೆ ಸಹಕಾರ ನೀಡಿವೆ ’ಎಂದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲೇ ಫೆ.26, 27 ಮತ್ತು 28 ರಂದು ನಿರ್ದೇಶಕರ ಸಂಘ ಕಾರ್ಯಾಗಾರ ಆಯೋಜಿಸಿದೆ. ಚಿತ್ರೋತ್ಸವಕ್ಕೆ ಬರುವ ತಜ್ಞರೆಲ್ಲರನ್ನು ಕಾರ್ಯಾಗಾರಕ್ಕೆ ಅಹ್ವಾನಿಸಿದೆ. ಹಾಗೆಯೇ ಮಾಚ್‌ರ್‍ 1 ರಂದು ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ವೇದಿಕೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಸಚಿವರು ಹಾಗೂ ಚಿತ್ರೋದ್ಯಮದ ಗಣ್ಯಾತೀಗಣ್ಯರು ಭಾಗವಹಿಸುತ್ತಿದ್ದಾರೆ. ಅಲ್ಲಿಂದ ನಿರ್ದೇಶಕರ ಸಂಘ ನಿರಂತರವಾಗಿ ಫಿಲಂ ಬಜಾರ್‌ ಚಟುವಟಿಕೆ ನಡೆಸಿಕೊಂಡು ಹೋಗಲು ನಿರ್ಧರಿಸಿದೆ.