ಕಡೂರು ಬಸ್ ನಿಲ್ದಾಣದಲ್ಲಿ ಅರೆನಗ್ನವಾಗಿ ವಿದೇಶಿ ಪ್ರಜೆ ಹುಚ್ಚಾಟ; ಹಿಡಿಯಲು ಓಡೋಡಿ ಪೊಲೀಸರೇ ಸುಸ್ತು!
ವಿದೇಶಿ ಪ್ರಜೆಯೊಬ್ಬ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಅರೆನಗ್ನವಾಗಿ ಓಡಾಡಿ ಹುಚ್ಚಾಟ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಚಿಕ್ಕಮಗಳೂರು (ಮೇ.10): ವಿದೇಶಿ ಪ್ರಜೆಯೊಬ್ಬ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಅರೆನಗ್ನವಾಗಿ ಓಡಾಡಿ ಹುಚ್ಚಾಟ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಅಬ್ರಾಡ್ ಪ್ರಜೆಯಾಗಿರುವ ವ್ಯಕ್ತಿ. ಮೈಮೇಲಿನ ಬಟ್ಟೆ ಕಳಚಿ, ಸೊಂಟಕ್ಕೆ ಪ್ಲಾಸ್ಟಿಕ್ ಚೀಲ ಸುತ್ತಿಕೊಂಡು ಹುಚ್ಚನಂತೆ ವರ್ತಿಸಿದ್ದಾನೆ. ಬಸ್ ನಿಲ್ದಾಣ, ಕಡೂರು ಪಟ್ಟಣವೆಲ್ಲ ಓಡಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದು ಪೊಲೀಸರ ಗಮನಕ್ಕೆ ಬಂದ ವಿದೇಶಿ ಪ್ರಜೆಯನ್ನು ಹಿಡಿಯಲು ಬಂದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಿದ್ದಾನೆ. ಬಸ್ ನಿಲ್ದಾಣದ ಸುತ್ತಲು ಪೊಲೀಸರನ್ನೇ ಮಟಮಟ ಮಧ್ಯಾಹ್ನದಲ್ಲಿ ಓಡಾಡಿಸಿ ಹುಚ್ಚಾಟ ಮಾಡಿದ್ದಾನೆ. ಅವನನ್ನು ಹಿಡಿಯಲು ಹಿಂದೆ ಓಡಿ ಓಡಿ ಸುಸ್ತಾದ ಪೊಲೀಸರು. ಕೊನೆಗೂ ಹರಸಾಹಸ ಪಟ್ಟು ಹಿಡಿದ ಪೊಲೀಸರು. ಪರ್ಷಿಯನ್ ಮಾತನಾಡುತ್ತಿದ್ದು ಇದು ಪೊಲೀಸರಿಗೆ ಅರ್ಥವಾಗದ ಹಿನ್ನೆಲೆ ಕಡೂರು ಪೊಲೀಸರು ಆತನಿಗೆ ಊಟ ಮಾಡಿಸಿ, ಬಟ್ಟೆ ಕೊಡಿಸಿ ಬೆಂಗಳೂರು ಟ್ರೈನ್ ಹತ್ತಿಸಿ ಕೊನೆಗೂ ಅಲ್ಲಿಂದ ಸಾಗಹಾಕಿದ್ದಾರೆ.