ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ 'ಕಣ್ಣಪ್ಪ'ಚಿತ್ರವು ಕಳೆದ ಏಳು ವರ್ಷಗಳಿಂದ ಬಹಳಷ್ಟು ಸೌಂಡ್ ಮಾಡುತ್ತಿದೆ. ನಟ ವಿಷ್ಣು ಮಂಚು ನಿರ್ಮಾಣದ ಈ ಸಿನಿಮಾ, ಈಗಾಗಲೇ ಬಹಳಷ್ಟು ಘಟಾನುಘಟಿ ಸ್ಟಾರ್‌ಗಳಿಂದ ತುಂಬಿ ಹೋಗಿದೆ. 

ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ 'ಕಣ್ಣಪ್ಪ'ಚಿತ್ರವು ಕಳೆದ ಏಳು ವರ್ಷಗಳಿಂದ ಬಹಳಷ್ಟು ಸೌಂಡ್ ಮಾಡುತ್ತಿದೆ. ನಟ ವಿಷ್ಣು ಮಂಚು ನಿರ್ಮಾಣದ ಈ ಸಿನಿಮಾ, ಈಗಾಗಲೇ ಬಹಳಷ್ಟು ಘಟಾನುಘಟಿ ಸ್ಟಾರ್‌ಗಳಿಂದ ತುಂಬಿ ಹೋಗಿದೆ. ಈಗ ಈ ಕಣ್ಣಪ್ಪ ಚಿತ್ರಕ್ಕೆ ಮತ್ತೊಬ್ಬರು ಪ್ಯಾನ್ ಇಂಡಿಯಾ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ. ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೇಲೆ ಇಡೀ ಭಾರತ ಬಹಳಷ್ಟು ನಿರೀಕ್ಷೆ ಇಟ್ಟಿದೆ. 

ಕಣ್ಣಪ್ಪ ಚಿತ್ರವು ಇನ್ನೂ ನಿರ್ಮಾಣ ಹಂತದಲ್ಲೇ ಇದೆ. ಈಗಾಗಲೇ ಸ್ಟಾರ್‌ ಕಾಸ್ಟ್‌ ವಿಚಾರವಾಗಿಯೇ ಸಾಕಷ್ಟು ಸುದ್ದಿಯಲ್ಲಿದೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಪ್ಪ ಸಿನಿಮಾ. ಈಗ ಇದೇ ಸಿನಿಮಾ ತಂಡಕ್ಕೆ ಇನ್ನೊಬ್ಬ ಸ್ಟಾರ್‌ ನಟನ ಎಂಟ್ರಿಯಾಗಿದೆ. ಅದು ಬೇರಾರು ಅಲ್ಲ, ಪ್ಯಾನ್‌ ಇಂಡಿಯನ್‌ ಹೀರೋ ಪ್ರಭಾಸ್!‌ 

ಹೊಸ ರೂಪದಲ್ಲಿ 'ಡಿಸ್ನಿ+ಹಾಟ್‌ಸ್ಟಾರ್‌'ನಲ್ಲಿ ಸ್ಟ್ರೀಮ್ ಆಗಲಿದೆ ಬಾಹುಬಲಿ; ರಾಜಮೌಳಿ ಹೇಳಿದ್ದೇನು?

ಈಗಾಗಲೇ ಅಕ್ಷಯ್‌ ಕುಮಾರ್‌, ಮೋಹನ್‌ ಬಾಬು, ಮೋಹನ್‌ ಲಾಲ್‌, ಶರತ್‌ಕುಮಾರ್‌, ಕಣ್ಣಪ್ಪ ಚಿತ್ರದ ತಾರಾಬಳಗದಲ್ಲಿದ್ದಾರೆ. ಈಗ ಈ ಸ್ಟಾರ್‌ ತಾರಾಬಳಗಕ್ಕೆ ಪ್ರಭಾಸ್‌ ಅವರ ಎಂಟ್ರಿಯೂ ಆಗಿದೆ. ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ.

ನಟಿ ನಿವೇದಿತಾ ಜೈನ್ ಸಾವು ಆಕಸ್ಮಿಕವೋ, ಕೊಲೆಯೋ; ಪದೇಪದೇ ಚರ್ಚೆ ಆಗುತ್ತಿರುವುದೇಕೆ?

ಮುಖೇಷ್‌ ಕುಮಾರ್‌ ಸಿಂಗ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಣ್ಣಪ್ಪ ಸಿನಿಮಾ, ಬಹುಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿದೆ. ಬಹು ಕೋಟಿ ವೆಚ್ಚದಲ್ಲೂ ಈ ಸಿನಿಮಾ ಮೂಡಿಬರುತ್ತಿದೆ. ಶಿವನ ಪರಮ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ನಟಿಸಲಿದ್ದಾರೆ. 

ಮಳೆಗಾಲಕ್ಕೆ ಬರ್ತಿದಾನೆ ಭಗೀರಥ, ಮಾನ್ಸೂನ್ ಬರೋವರೆಗೂ ಕಾದು ಬರ್ತಿರೋದ್ಯಾಕೆ?

ಕಳೆದ ಏಳು ವರ್ಷಗಳಿಂದ ಈ ಪ್ರಾಜೆಕ್ಟ್‌ ಸಲುವಾಗಿ ವಿಷ್ಣು ಮಂಚು ಶ್ರಮಿಸುತ್ತಿದ್ದಾರೆ. ಅಷ್ಟೇ ಅದ್ದೂರಿಯಾಗಿಯೇ ಅದನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಅದರಂತೆ ಸ್ಟಾರ್‌ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳುತ್ತ ಕುತೂಹಲ ಮೂಡಿಸುತ್ತಿದೆ. ಹಾಲಿವುಡ್‌ನ ಶೆಲ್ಡೋನ್‌ ಚಾವ್‌ ಅವರ ಛಾಯಾಗ್ರಹಣ, ಕೇಚ ಖಂಫಕದೀ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.