ಕನ್ನಡ ಬಹುನಿರೀಕ್ಷಿತ ಚಿತ್ರ ‘ಪಡ್ಡೆ ಹುಲಿ’ ಈಗಾಗಲೇ ಗಾಂಧಿ ನಗರದಲ್ಲಿ ಸದ್ದು ಮಾಡುತ್ತಿದ್ದು, ಶಿವರಾತ್ರಿ ಹಬ್ಬಕ್ಕೆ ‘ಕಳಬೇಡ...ಕೊಲಬೇಡಾ’ ಎಂಬ ಹಾಡನ್ನು ಕೊಟ್ಟಿದೆ.

ಮಾಡರ್ನ್ ಪ್ರಪಂಚದಲ್ಲಿ ವಚನಗಳಿಗೆ ಜಾಗವೇ ಇಲ್ಲದಂತಾಗಿದೆ. ಈಗಿನ ಜನರೇಶನ್ ನವರನ್ನು ಇಟ್ಟುಕೊಂಡು ಬಸವಣ್ಣನವರ ವಚನಗಳಿಗೆ ಮಾಡರ್ನ್ ರೂಪ ಕೊಟ್ಟಿದ್ದು ಪಡ್ಡೆಹುಲಿ ಚಿತ್ರತಂಡ. ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಹಾಡನ್ನು ಕಂಪೋಸ್ ಮಾಡಿದ್ದಾರೆ.

ರವಿಚಂದ್ರನ್-ಸುಧಾರಾಣಿ ಜೋಡಿ ಮೋಡಿ, ‘ಪಡ್ಡೆ ಹುಲಿ’ ಟ್ರೈಲರ್ ಆರ್ಭಟ

ಮಾಸ್, ಕ್ಲಾಸ್ ಹಾಗೂ ಲವರ್ ಬಾಯ್ ರೀತಿಯಲ್ಲಿ ಕಾಣಿಸಿಕೊಂಡಿರುವ ಶ್ರೇಯಸ್ ಮಂಜು ಖಂಡಿತ ಕನ್ನಡಿಗರ ಮನಸ್ಸಲ್ಲಿ ಮನೆ ಮಾಡುತ್ತಾರೆ. ಶಾಂತಿ , ನೆಮ್ಮದಿ ಹಾಗೂ ಪ್ರೀತಿ ಬಯಸುತ್ತಿರುವ ಪ್ರಪಂಚಕ್ಕೆ ಶ್ರೇಯಸ್ ಸಿನಿಮಾದ ಮೂಲಕ ಮಾರಲ್ ಮೆಸೇಜ್ ಸಿಗುವುದಂತೂ ಗ್ಯಾರಂಟಿ ಎನ್ನುತ್ತಿದೆ ಚಿತ್ರತಂಡ.

ಇನ್ನು ಗಾಯಕ ನಾರಾಯಣ್ ಶರ್ಮಾ ‘ಕಳ್ಳತನ ಮಾಡಬೇಡ, ಕೊಲ್ಲಬೇಡ, ಸುಳ್ಳು ಹೇಳಬೇಡ.. ಬೇರೆಯವರನ್ನು ಕಂಡು ಅಸಹ್ಯ ಪಡಬೇಡ...’ ಎನ್ನುವ ಅರ್ಥಗರ್ಭಿತ ವಚನವದ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.