ಅಮೃತಾ ಅಯ್ಯಂಗಾರ್‌, ರಾಚೆಲ್‌ ಡೇವಿಡ್‌, ರಚನಾ ಇಂದರ್‌ ಮತ್ತಿತರ ನಟಿಯರು ಮೈ ಬಳುಕಿಸಿದ್ದಾರೆ. ಲಾಕ್‌ಡೌನ್‌ ಡೈರೀಸ್‌ ಅನ್ನೋ ಹ್ಯಾಶ್‌ಟ್ಯಾಗ್‌ನಲ್ಲಿ ಈ ಡ್ಯಾನ್ಸ್‌ನ ವೀಡಿಯೋವನ್ನು ಮಿಲನಾ ನಾಗರಾಜ್‌ ಅಪ್‌ಲೋಡ್‌ ಮಾಡಿದ್ದಾರೆ. ಕಳೆದ ಲಾಕ್‌ಡೌನ್‌ನಲ್ಲಿ ಸಾಕಷ್ಟುಮಂದಿ ಸಿನಿಮಾ ತಾರೆಯರು ಮನೆಯಲ್ಲಿ ಮೊಬೈಲ್‌ನಲ್ಲೇ ಹಾಡು, ವೀಡಿಯೋಗಳನ್ನು ಚಿತ್ರೀಕರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು. ಇದೂ ಆ ಥರದ ಪ್ರಯತ್ನ. ಈ ಬಗ್ಗೆ ಮಾತನಾಡಿದ ನಟಿ ಮಿಲನಾ ನಾಗರಾಜ್‌, ‘ಎಲ್ಲರೂ ಮನೆಯಲ್ಲಿದ್ದುಕೊಂಡೇ ಮೊಬೈಲ್‌ ಮೂಲಕ ಈ ಹಾಡಿಗೆ ಡ್ಯಾನ್ಸ್‌ ಮಾಡಿದೆವು. ಡಾರ್ಲಿಂಗ್‌ ಕೃಷ್ಣ ಅವರು ಎಡಿಟಿಂಗ್‌ ಮಾಡಿದರು. ಸ್ವಲ್ಪ ದಿನಗಳ ಹಿಂದೆ ರಿಲೀಸ್‌ ಆಗಿರುವ ಹಾಡಿಗೆ ಇನ್ನಷ್ಟುಪ್ರಚಾರ ಕೊಡೋಣ ಎನ್ನುವ ನಿಟ್ಟಿನಲ್ಲಿ ಈ ಹಾಡು’ ಎಂದರು.

ಮಿಲನಾ ನಾಗರಾಜ್‌ ರಿಯಲ್ ಲೈಫ್‌ ಸ್ಟೋರಿ ತೆರೆ ಮೇಲೆ; 'ಮಿಲಿ'ಗೆ ಕೃಷ್ಣ ನಿರ್ದೇಶನ! 

ಈಗ ಎಲ್ಲಾ ಕಡೆ ನೋವು, ಬೇಸರ, ವಿಷಾದಗಳೇ ತುಂಬಿಹೋಗಿದೆ. ಇಂಥಾ ಟೈಮ್‌ನಲ್ಲಿ ಎಲ್ಲರನ್ನೂ ಸ್ವಲ್ಪ ಚಿಯರ್‌ಅಪ್‌ ಮಾಡೋಣ ಅಂತ ಈ ಡ್ಯಾನ್ಸ್‌ ವೀಡಿಯೋ ಮಾಡಿದೆವು. ಉಳಿದಂತೆ ಲಾಕ್‌ಡೌನ್‌ನಲ್ಲಿ ಒಂದಿಲ್ಲೊಂದು ಚಟುವಟಿಕೆಯಲ್ಲಿ ಮುಳುಗಿದ್ದೇವೆ.- ಮಿಲನಾ ನಾಗರಾಜ್‌, ನಟಿ

ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ನಿರ್ಮಾಣದ ಲವ್‌ ಮಾಕ್‌ಟೇಲ್‌ 2 ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣ ಜೊತೆಗೆ ರಾಚೆಲ್‌ ನಾಯಕಿಯಾಗಿದ್ದಾರೆ. ಕಳೆದ ವಾರ ರಿಲೀಸ್‌ ಆಗಿರುವ ‘ಈ ಪ್ರೇಮ’ ಹಾಡನ್ನು ರಾಘವೇಂದ್ರ ಕಾಮತ್‌ ಬರೆದಿದ್ದು ರಮ್ಯಾ ಗಾಯಕಿಯಾಗಿದ್ದಾರೆ. ನಕುಲ್‌ ಅಭಯಂಕರ್‌ ಸಂಗೀತವಿದೆ. ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣವಷ್ಟೇ ಬಾಕಿ ಇದೆ.