ಸೇಡಿನ ಕಥಾಹಂದರದ ಹಾರರ್ ಚಿತ್ರ. ನಾಳೆ ಬಿಡುಗಡೆ ಆಗುತ್ತಿದೆ ಇದು ಆಕಾಶವಾಣಿ ಬೆಂಗಳೂರು ನಿಲಯ......
ಎಂ. ಹರಿಕೃಷ್ಣ ನಿರ್ದೇಶನದ ‘ಇದು ಆಕಾಶವಾಣಿ ಬೆಂಗಳೂರು ನಿಲಯ’ ಹಾರರ್ ಚಿತ್ರ ಅ.8ಕ್ಕೆ ಬಿಡುಗಡೆಯಾಗಲಿದೆ. ನಿಖಿತಾ ಸ್ವಾಮಿ ಚಿತ್ರದ ನಾಯಕಿ. ರಣವೀರ್ ಪಾಟೀಲ್ ನಾಯಕ.
ಚಿತ್ರ ಬಿಡುಗಡೆ ಪ್ರಯುಕ್ತ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಹರಿಕೃಷ್ಣ, ‘ಸಿನಿಮಾದ ಟೈಟಲ್‌ಗೂ ಆಕಾಶವಾಣಿ ಬೆಂಗಳೂರಿಗೂ ಯಾವುದೇ ಸಂಬಂಧ ಇಲ್ಲ. ಆಕಾಶ ಅಂತ ಹೀರೋ ಹೆಸ್ರು, ವಾಣಿ ಅಂತ ನಾಯಕಿ ಹೆಸ್ರು. ಇಲ್ಲಿ ಮನೆಯೂ ಒಂದು ಪಾತ್ರದಂತಿರುವ ಕಾರಣ ನಿಲಯವೂ ಶೀರ್ಷಿಕೆಯಲ್ಲಿ ಸೇರಿಕೊಂಡಿದೆ. ಆಕಾಶವಾಣಿಯ ಟ್ಯೂನ್ ಚಿತ್ರದಲ್ಲಿ ಅಲರಾಂ ಟ್ಯೂನ್ ಆಗಿ ಬರುತ್ತದಷ್ಟೇ. ಹಾರರ್ ಜಾನರ್‌ನ ಈ ಚಿತ್ರದಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.
350+ ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3: ಸೂರಪ್ಪ ಬಾಬು
ನಾಯಕಿ ನಿಖಿತಾ ಸ್ವಾಮಿ ಮಾತನಾಡಿ, ‘ನನ್ನದು ಅನಾಥ ಹಳ್ಳಿ ಹುಡುಗಿಯ ಪಾತ್ರ. ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲೆಂದು ಹಳ್ಳಿಯಿಂದ ಬೆಂಗಳೂರಿಗೆ ಬರುವ ಹುಡುಗಿಯ ಬದುಕು ಹೇಗೆ ಬದಲಾಗುತ್ತೆ ಅನ್ನೋದು ಕತೆ’ ಎಂದರು. ರಣವೀರ್ ಇದರಲ್ಲಿ ಹೀರೋ ಜೊತೆಗೆ ದೆವ್ವವಾಗಿಯೂ ಕಾಣಿಸಿಕೊಂಡಿದ್ದಾರೆ. ‘ಮೂರು ಶೇಡ್‌ಗಳಲ್ಲಿ ನನ್ನ ಪಾತ್ರವಿದೆ. ದೆವ್ವದ ಪಾತ್ರದಲ್ಲಿ ನಟಿಸೋದು ಸವಾಲಿನದಾಗಿತ್ತು. ಇದೀಗ ಚಿತ್ರ ಬಿಡುಗಡೆಯಾಗುತ್ತಿದ್ದು, ಹೊಸಬರಿಗೆ ಥಿಯೇಟರ್ ಕೊಟ್ಟು ಚಿತ್ರರಂಗ ಸಪೋರ್ಟ್ ಮಾಡಬೇಕು’ ಎಂದರು.
ಧ್ರುವ ಸರ್ಜಾ ಮಾರ್ಟಿನ್ ಪೋಸ್ಟರ್ ಬಿಡುಗಡೆ!
ನಿರ್ಮಾಪಕ ಶಿವಾನಂದಪ್ಪ ಬಳ್ಳಾರಿ ಹಿರಿಯ ಕಲಾವಿದರಿಗೆ ‘ಓಲ್ಡ್ ಆರ್ಟಿಸ್ಟ್ ವೆಲ್‌ಫೇರ್ ಫಂಡ್’ ಸ್ಥಾಪಿಸುವುದಾಗಿ ಘೋಷಿಸಿದರು. ಹಿರಿಯ ನಟ ಟೆನಿಸ್ ಕೃಷ್ಣ, ಸಂಭಾಷಣೆ ಬರೆದ ವಿಜಯಕುಮಾರ್, ಕಲಾವಿದರಾದ ನಾರಾಯಣ ಸ್ವಾಮಿ, ದಿವ್ಯಾ, ಸಂಕಲನಕಾರ ಪವನ್ ಕುಮಾರ್, ಸಂಗೀತ ನಿರ್ದೇಶಕ ರವೀಶ್, ಸಾಹಿತ್ಯ ನೀಡಿದ ಶಿವರಾಜ್ ಗುಬ್ಬಿ ವೇದಿಕೆಯಲ್ಲಿ ಇದ್ದರು
