ಕಿಚ್ಚನ ‘ಕೋಟಿಗೊಬ್ಬ 3’ಗೆ ಯು/ಎ ಸರ್ಟಿಫಿಕೇಟ್‌. ಚಿತ್ರ ಬಿಡುಗಡೆ ಬಗ್ಗೆ ನಿರ್ಮಾಪಕ ಸೂರಪ್ಪ ಬಾಬು ಮಾತು...

ನಟ ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, ಯಾವುದೇ ಕಟ್‌ ಹಾಗೂ ಮ್ಯೂಟ್‌ ಇಲ್ಲದೆ ಸೆನ್ಸಾರ್‌ ಮಂಡಳಿಯಿಂದ ‘ಯು/ಎ’ ಸರ್ಟಿಪಿಕೆಟ್‌ ನೀಡಲಾಗಿದೆ. ನಿರ್ಮಾಪಕ ಸೂರಪ್ಪ ಬಾಬು ಚಿತ್ರದ ಬಿಡುಗಡೆಗೆ ಮತ್ತಷ್ಟುತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದರ ಮೊದಲ ಹಂತವಾಗಿ ಇಂದು (ಅ.7) ಚಿತ್ರದ ಟ್ರೇಲರ್‌ ಆನಂದ್‌ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗುತ್ತಿದೆ. ನಂತರ ಪ್ರೀ ರಿಲೀಸ್‌ ಈವೆಂಟ್‌ ಮಾಡಲಾಗುತ್ತಿದೆ. ‘ನಮ್ಮ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್‌ ಮಂಡಳಿ ಕೂಡ ಖುಷಿ ಆಗಿದೆ. ಕಟ್‌ ಅಥವಾ ಮ್ಯೂಟ್‌ ಇಲ್ಲದೆ ಯು/ಎ ಸರ್ಟಿಪಿಕೆಟ್‌ ಕೊಟ್ಟಿದ್ದಾರೆ. ಅಂದರೆ ಎಲ್ಲ ವಯೋಮಾನದವರು ಈ ಚಿತ್ರವನ್ನು ನೋಡಬಹುದು. ಆ್ಯಕ್ಷನ್‌, ಮನರಂಜನೆ, ಅದ್ದೂರಿ ಮೇಕಿಂಗ್‌, ತಾಂತ್ರಿಕತೆಯ ವೈಭವ ಈ ಚಿತ್ರದ ಹೈಲೈಟ್‌’ ಎನ್ನುತ್ತಾರೆ ನಿರ್ಮಾಪಕ ಸೂರಪ್ಪ ಬಾಬು.

ಕೋಟಿಗೊಬ್ಬ 3 ಚಿತ್ರಮಂದಿರಗಳಲ್ಲಿ ಮದಗಜ ಟೀಸರ್ ಪ್ರದರ್ಶನ!

ಶಿವಕಾರ್ತಿಕ್‌ ನಿರ್ದೇಶನದ ಈ ಚಿತ್ರವನ್ನು ನಾಡ ಹಬ್ಬ ದಸರಾ ಹಬ್ಬದ ಅಂಗವಾಗಿ ರಾಜ್ಯದಲ್ಲೇ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ‘ಈಗ ನಾವು ಅಂದುಕೊಂಡಿರುವುದು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಎಂಬುದು. ಪ್ರೀ ರಿಲೀಸ್‌ ಈವೆಂಟ್‌ ನಂತರ ಚಿತ್ರಮಂದಿರಗಳ ಸಂಖ್ಯೆ ಮತ್ತಷ್ಟುಹೆಚ್ಚಾಗಬಹುದು. ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡುತ್ತಿದ್ದೇವೆ. ಹೊರ ರಾಜ್ಯದಲ್ಲೂ ಕೆಲವು ಕಡೆ ಸಿನಿಮಾ ಬಿಡುಗಡೆ ಆಗುತ್ತಿದೆ’ ಎಂಬುದು ಸೂರಪ್ಪ ಬಾಬು ಮಾತು.

"

ಅಕ್ಟೋಬರ್ 14 (October 14th)ರಂದು ಬಿಡುಗಡೆ ಆಗುತ್ತಿರುವ ಕೋಟಿಗೊಬ್ಬ 3 (Kotigobba 3) ಸಿನಿಮಾ ಈಗಾಗಲೆ ಪೈರಸಿ ಬಲೆಯಲ್ಲಿ ಸಿಲುಕಿ ಕೊಂಡಿದೆ. ಕೋಟಿಗೋಬ್ಬ 3 ಸಿನಿಮಾವನ್ನು ಮೊಬೈನ್‌ನಲ್ಲಿ ನೋಡಬೇಕು ಎಂದರೆ ಈ ಲಿಂಕ್ ಫಾಲೋ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಚಿತ್ರತಂಡದ ಗಮನಕ್ಕೆ ಈ ವಿಷಯ ಬಂದ ತಕ್ಷಣವೇ ಜಾಕ್ ಮಂಜು (Jack Manju) ಅವರು ಗೃಹ ಸಚಿವ (Home Minister) ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. 

ಕಿಚ್ಚ ಸುದೀಪ್ 'ಕೋಟಿಗೊಬ್ಬ 3' ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ಲೀಕ್?

ಈಗಾಗಲೇ ಕಿಚ್ಚನ ಲುಕ್ ಹಾಗೂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್‌ ಮಾಸ್ ಹಾಗೂ ಕಾಮಿಡಿ ಎಲಿಮೆಂಟ್‌ ಹೊಂದಿದ್ದು, ಚಿತ್ರ ಹಿಟ್ ಆಗೇ ಆಗುತ್ತೆ ಎನ್ನುತ್ತಿದ್ದಾರೆ ಕಿಚ್ಚ ಸುದೀಪ್ ಅಭಿಮಾನಿಗಳು. ಕೆಲವು ದಿನಗಳ ಹಿಂದೆ ಸುದೀಪ್ ಚಿತ್ರದ ಡಬ್ಬಿಂಗ್ ಮುಗಿಸಿದ್ದಾರೆ. ಬಿಡುಗಡೆ ತಡವಾಗುತ್ತಿರುವ ಕಾರಣ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುವಂತೆ ಪ್ರತಿಷ್ಠಿತ ಓಟಿಟಿ ಪ್ಲಾಟ್‌ಫಾರ್ಮ್ 35 ಕೋಟಿ ರೂ. ಆಫರ್ ನೀಡಿತ್ತು. ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲೇ ಬೇಕೆಂದು ಚಿತ್ರತಂಡ ನಿರ್ಧರಿಸಿದೆ.