ವೈರಸ್‌ ಸದ್ದು ಅಡಗುವ ತನಕ ‘ಗಾಳಿ​ಪ​ಟ-2’ ಚಿತ್ರಕ್ಕೆ ವಿದೇಶಿ ಪ್ರಯಾ​ಣದ ಶೂಟಿಂಗ್‌ ಭಾಗ್ಯ ದೊರ​ಯಲ್ಲ. ಯೋಗ​ರಾಜ್‌ ಭಟ್‌ ನಿರ್ದೇ​ಶಿಸಿ, ಸೂರಜ್‌ ಪ್ರೊಡ​ಕ್ಷ​ನ್‌​ನಲ್ಲಿ ರಮೇಶ್‌ ರೆಡ್ಡಿ ನಂಗ್ಲಿ ನಿರ್ಮಾಣ ಮಾಡು​ತ್ತಿ​ರುವ ಈ ಚಿತ್ರಕ್ಕೆ ಈಗಾ​ಗಲೇ 32 ದಿನ​ಗಳ ಕಾಲ ಕುದುರೆಮುಖ ಸುತ್ತ​ಮುತ್ತ ಶೂಟಿಂಗ್‌ ಮಾಡ​ಲಾ​ಗಿದೆ.

ಕುದುರೆಮುಖದಲ್ಲಿ 'ಗಾಳಿಪಟ' ಹಾರಿಸಿದ ಗಣೇಶ್-ದಿಗಂತ್-ಪವನ್!

‘ಇನ್ನೂ 30 ದಿನ ಶೂಟಿಂಗ್‌ ಬಾಕಿ ಇದೆ. ಆದರೆ, ಕೊರೋನಾ ಎಫೆ​ಕ್ಟ್​ನಿಂದ ಶೂಟಿಂಗ್‌ ನಿಲ್ಲಿ​ಸಿ​ದ್ದೇವೆ. ಈಗ ಶೂಟಿಂಗ್‌ ಆಗಿ​ರುವ ಬಗ್ಗೆ ಹೇಳ​ಬೇಕು ಎಂದರೆ ‘ಗಾಳಿ​ಪಟ’ ಚಿತ್ರದ ಒಂದು ಸಣ್ಣ ಎಳೆ ಪಾರ್ಟ್‌-2ನಲ್ಲೂ ಮುಂದು​ವ​ರೆ​ಯ​ಲಿದೆ. ಈ ಕಾರ​ಣಕ್ಕೆ ಮೊದಲ ಭಾಗ​ದಲ್ಲಿ ಇದ್ದ ಪ್ರಮುಖ ಕಲಾ​ವಿ​ದರೂ ‘ಗಾಳಿ​ಪ​ಟ-2’ ಚಿತ್ರ​ದಲ್ಲೂ ಮುಂದು​ವ​ರೆ​ದಿ​ದ್ದಾರೆ. ಅನಂತ್‌​ನಾಗ್‌, ಪದ್ಮಜಾ ರಾವ್‌, ಸುಧಾ​ ಬೆ​ಳ​ವಾಡಿ, ರಂಗಾ​ಯಣ ರಘು ಪೋಷಕ ಪಾತ್ರ​ಗ​ಳಲ್ಲಿ ಕಾಣಿ​ಸಿ​ಕೊಂಡಿ​ದ್ದಾರೆ. ಏಳು ಹಾಡು​ಗ​ಳನ್ನು ಒಳ​ಗೊಂಡಿ​ದ್ದು, ಒಂದು ಕಲ​ರ್‌​ಫುಲ್‌ ಆಲ್ಬಂ ಸಿನಿಮಾ ಆಗ​ಲಿದೆ. ನನ್ನ ಮತ್ತು ಗಣೇಶ್‌ ಕಾಂಬಿ​ನೇ​ಷ​ನ್‌ನ ಈ ಸಿನಿಮಾ ಅದ್ದೂ​ರಿ​ಯಾಗಿ ಮೂಡಿ ಬರಲು ಕಾರಣ ನಿರ್ಮಾ​ಪಕ ರಮೇಶ್‌ ರೆಡ್ಡಿ ಕಾರ​ಣ’ ಎನ್ನು​ತ್ತಾರೆ ಯೋಗ​ರಾಜ್‌ ಭಟ್‌.

ಗಾಳಿ​ಪ​ಟ-2 ಚಿತ್ರ​ತಂಡ ವಿದೇ​ಶಕ್ಕೆ ತೆರ​ಳ​ಬೇ​ಕಿತ್ತು. ಈ ತಯಾರಿ ಮಾಡಿ​ಕೊ​ಳ್ಳು​ವಾಗ ಸಿಂಪಲ್‌ ಸುನಿ ನಿರ್ದೇ​ಶ​ನ​ದಲ್ಲಿ ‘ಸಖತ್‌’ ಒಂದು ಶೆಡ್ಯೂಲ್‌ ಮುಗಿ​ಸಿ​ದೆ. ಆದರೆ, ವಿದೇ​ಶಕ್ಕೆ ಹೋಗ​ಬೇಕು ಎನ್ನು​ವ​ಷ್ಟ​ರಲ್ಲಿ ಕೊರೋನಾ ಎಫೆಕ್ಟ್ ಶುರು​ವಾ​ಗಿದೆ. ಹೀಗಾಗಿ ಚಿತ್ರೀ​ಕ​ರಣ ಮುಂದೂ​ಡಿ​ದ್ದೇವೆ.- ಗಣೇಶ್‌

ವೈಭವಿ ಶ್ಯಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಮೆನನ್‌ ಚಿತ್ರದ ನಾಯ​ಕಿ​ಯರು. ನಿಶ್ವಿಕಾ ನಾಯ್ಡು ವಿಶೇಷ ಪಾತ್ರಧಾರಿ.

'ಗಾಳಿಪಟ 2'ಗೆ ನಾಯಕಿಯರು ಬದಲಾದರು!

‘ಹಿಂದಿ ಸೇರಿ​ದಂತೆ ನನ್ನ ನಿರ್ಮಾ​ಣ​ದಲ್ಲಿ ಮೂರು ಚಿತ್ರ​ಗಳು ಇವೆ. ಈ ಪೈಕಿ ರಮೇಶ್‌ ಅರ​ವಿಂದ್‌ ಅವರೇ ನಟಿಸಿ, ನಿರ್ದೇ​ಶಿ​ಸು​ತ್ತಿ​ರುವ ‘100’ ಚಿತ್ರಕ್ಕೆ ಶೂಟಿಂಗ್‌ ಮುಗಿ​ದಿದೆ. ಕೊರೋನಾ ಹೋದ ಮೇಲೆ ಈ ಚಿತ್ರ ತೆರೆಗೆ ಬರ​ಲಿ​ದೆ. ಇದೇ ಚಿತ್ರದ ಹಿಂದಿ ಅವ​ತ​ರ​ಣಿಕೆ ಚಿತ್ರಕ್ಕೆ ಪೋಸ್ಟ್‌ ಪ್ರೊಡ​ಕ್ಷನ್‌ ನಡೆ​ಯು​ತ್ತಿದೆ. ‘ಗಾಳಿ​ಪ​ಟ-2’ ಚಿತ್ರ ವಿದೇ​ಶಕ್ಕೆ ಹೋಗ​ಬೇ​ಕಿತ್ತು. ಸದ್ಯಕ್ಕೆ ನಿಲ್ಲಿ​ಸ​ಲಾ​ಗಿದೆ. ನಿರ್ಮಾ​ಪ​ಕ​ನಾಗಿ ತುಂಬಾ ತೃಪ್ತಿ ಮತ್ತು ಖುಷಿ​ಯಿಂದ ಮಾಡಿ​ರುವ ಚಿತ್ರ​ಗ​ಳಿವು.’ ಎಂಬುದು ನಿರ್ಮಾ​ಪ​ಕ ರಮೇಶ್‌ ರೆಡ್ಡಿ ನಂಗ್ಲಿ ಮಾತು.