ಅಚ್ಯುತ್ ಕುಮಾರ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ 'ಫೋರ್ ವಾಲ್ಸ್' ಚಿತ್ರದ ಫಸ್ಟ್ ಲುಕ್ ಟೀಸರ್ ಸಖತ್ ವೈರಲ್ ಆಗುತ್ತಿದೆ.  

ಇತ್ತೀಚೆಗೆ ಬಿಡುಗಡೆಯಾದ ‘ಫೋರ್ ವಾಲ್ಸ್’ ಚಿತ್ರದ ಫಸ್ಟ್ ಲುಕ್ ಟೀಸರ್ ಸ್ಯಾಂಡಲ್ ವುಡ್ ಸಿನಿರಸಿಕರ ಮನಗೆದ್ದಿದೆ. ಗಾಂದೀನಗರದಲ್ಲಿ ಈ ಸಿನಿಮಾ ಬಗ್ಗೆ ಸಖತ್ ಟಾಕ್ ಕ್ರಿಯೇಟ್ ಆಗಿದೆ. ಚಂದನವನದ ಸ್ಟಾರ್ ನಟ-ನಟಿಯರೂ, ನಿರ್ಮಾಪಕ- ನಿರ್ದೇಶಕರು ಕೂಡ ಟೀಸರ್ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾಯಕ ನಟನಾಗಿ ಅಚ್ಯುತ್ ಕುಮಾರ್ ಹೊಸ ಅವತಾರ ಕಂಡು ಎಲ್ಲರೂ ಸಖತ್ ಥ್ರಿಲ್ ಆಗಿದ್ದಾರೆ.

ಹೀಗೆ ಎಲ್ಲಾ ಕಡೆ ಟಾಕ್ ಕ್ರಿಯೇಟ್ ಮಾಡಿರುವ ಈ ಚಿತ್ರದ ನಿರ್ದೇಶಕ ಎಸ್. ಎಸ್. ಸಜ್ಜನ್. ಮೂಲತಃ ಉತ್ತರ ಕರ್ನಾಟಕದವರು. ರಂಗಭೂಮಿ ಕಲಾವಿದರೂ ಆಗಿರುವ ಇವರು ನೆನಪು ಮತ್ತು ಪ್ರಯೋಗರಂಗ ತಂಡದಲ್ಲಿ ಸಕ್ರಿಯರಾಗಿದ್ದಾರೆ. ಕಮರ್ಶಿಯಲ್ ಸಿನಿಮಾಗಳ ನಡುವೆ ಕಂಟೆಂಟ್ ಬೇಸ್ಡ್ ಸಿನಿಮಾಗಳ ಸವಿಯನ್ನು ಪ್ರೇಕ್ಷಕರಿಗೆ ಉಣಬಡಿಸಬೇಕು ಎಂಬುದು ಇವರ ಮಹದಾಸೆ. ಆ ನಿಟ್ಟಿನಲ್ಲಿ ಇವ್ರ ಪಯತ್ನ ಕೂಡ ಸಾಗಿದೆ. ಇವರ ಮೊದಲ ಸಿನಿಮಾ 2017ರಲ್ಲಿ ತೆರೆಕಂಡ ‘ಮಂತ್ರಂ’. ಆ ನಂತರ ಒಂದಷ್ಟು ಸಮಯ ಮಾಧ್ಯಮ ಲೋಕದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮತ್ತೆ ನಿರ್ದೇಶನಕ್ಕೆ ಮರಳಿದ ಎಸ್ ಎಸ್ ಸಜ್ಜನ್ ಮೃತ್ಯುಂಜಯ ಎಂಬ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ‘ಫೋರ್ ವಾಲ್ಸ್’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಇವರದ್ದೇ.

ಟೀಸರ್ ನೋಡಿ ಚಿತ್ರರಂಗದ ಹಲವಾರು ಮಂದಿ ಕರೆ ಮಾಡಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಚ್ಯುತ್ ಕುಮಾರ್ ಅವರ ಪ್ರೋತ್ಸಾಹ ದೊಡ್ಡದು. ಇದನ್ನೆಲ್ಲ ನೋಡಿದಾಗ ನಮ್ಮ ತಂಡದ ಪರಿಶ್ರಮ ಗೆದ್ದಿದೆ ಎಂಬ ಸಾರ್ಥಕತೆ ಇದೆ ಎನ್ನುತ್ತಾರೆ ನಿರ್ದೇಶಕರು. ತಂದೆ ಮಗನ ಬಾಂದವ್ಯದ ಸುತ್ತ ಹೆಣೆಯಲಾದ ಕಥೆ ಸಿನಿಮಾದಲ್ಲಿದೆ. ಅಚ್ಯುತ್ ಕುಮಾರ್ ಮೂರು ಶೇಡ್ ನಲ್ಲಿ ಕಾಣಸಿಗಲಿದ್ದಾರೆ. ನಾಯಕಿಯಾಗಿ ಡಾ. ಪವಿತ್ರಾ ನಟಿಸಿದ್ದು, ದತ್ತಣ್ಣ, ಡಾ.ಜಾನ್ವಿ ಜ್ಯೋತಿ, ಸುಜಯ್ ಶಾಸ್ತ್ರಿ, ಭಾಸ್ಕರ್ ನೀನಾಸಂ ತಾರಾಬಳಗದಲ್ಲಿದ್ದಾರೆ. ತೆಲುಗಿನ ರುದ್ರಮದೇವಿ, ಗರುಡವೇಗ ಸಿನಿಮಾಗಳಲ್ಲಿ ದುಡಿದ ಅನುಭವ ಇರುವ ವಿಡಿಆರ್ ಕ್ಯಾಮೆರಾ ವರ್ಕ್, ಆನಂದ ರಾಜಾವಿಕ್ರಮ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಎಸ್.ವಿ ಬ್ಯಾನರ್ ನಲ್ಲಿ ಟಿ.ವಿಶ್ವನಾಥ್ ನಾಯ್ಕ್ ನಿರ್ಮಾಣ ಮಾಡಿರುವ ಈ ಚಿತ್ರ ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫೀಕೇಟ್ ಪಡೆದುಕೊಂಡಿದೆ. ದಸರಾದಲ್ಲಿ ಸಿನಿಮಾ ರಿಲೀಸ್ ಮಾಡಬೇಕೆಂಬುದು ಚಿತ್ರತಂಡದ ಪ್ಲ್ಯಾನ್.

YouTube video player