ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಚಿತ್ರಕ್ಕೆ ಆರು ಗೀತೆ ರಚಿಸಿರುವ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಈ ಸಂದರ್ಭ ಮಾತನಾಡಿ,‘ಅಟೋ ರಾಮು ಬಹುಮುಖ ಪ್ರತಿಭೆ. ಸೆಟ್‌ನಲ್ಲೇ ಡೈಲಾಗ್‌, ಸನ್ನಿವೇಶ ರಚಿಸಿ ಅಚ್ಚರಿ ಹುಟ್ಟಿಸುತ್ತಾರೆ. ರಾಜ್ಯದಲ್ಲಿ ಐದೂವರೆ ಲಕ್ಷದಷ್ಟುಅಟೋ ಚಾಲಕರಿದ್ದು, ಅವರೆಲ್ಲ ಒಮ್ಮೆ ಈ ಸಿನಿಮಾ ನೋಡಿದರೂ ಬಂಡವಾಳ ವಾಪಾಸ್‌ ಬರುತ್ತದೆ’ ಎಂದರು.

ಚಿತ್ರ ವಿಮರ್ಶೆ : ಸ್ಕೇರಿ ಫಾರೆಸ್ಟ್‌ 

ಅಟೋ ರಾಮು ಮಾತನಾಡಿ, ‘ಇದರಲ್ಲಿ ನನ್ನ ಜೊತೆಗೆ ಮಹೇಂದ್ರ ಮನ್ನೋತ್‌ ಅವರೂ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ನಾನು ಶಂಕರ್‌ನಾಗ್‌ ಅಭಿಮಾನಿ. ಸಿನಿಮಾ ಮಾಡಬೇಕೆಂಬುದು ಬಹು ದಿನಗಳ ಕನಸು. ಈಗ ಸಾಕಾರಗೊಂಡು ಚಿತ್ರ ಮಾಚ್‌ರ್‍ನಲ್ಲಿ ಬರಲು ಸಿದ್ಧವಿದೆ’ ಎಂದರು.

ದಿವ್ಯ ಸುಶ್ಮಾ ಕ್ರಿಯೇಶನ್‌ನಡಿ ಸಿನಿಮಾ ನಿರ್ಮಿಸಲಾಗಿದೆ. ಸಂಗೀತ ನಿರ್ದೇಶಕ ರಿಷಬ್‌ ರತ್ನಂ, ಗಾಯಕ ಅಜಯ್‌ವಾರಿಯರ್‌, ನಾಯಕಿ ಯೋಜಶ್ರೀ, ಡಿಂಗ್ರಿ ನಾಗರಾಜ್‌ ಮತ್ತಿತರರು ಉಪಸ್ಥಿತರಿದ್ದರು.