ʼಮುಕ್ತʼ, ʼಮುಕ್ತ ಮುಕ್ತʼ, ʼಮಗಳು ಜಾನಕಿʼ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಟಿ ಎನ್‌ ಸೀತಾರಾಮ್‌ ಅವರು ಹೀರೋ ಆಗಿದ್ದರಂತೆ. ಈ ವಿಷಯವನ್ನು ಅವರೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಕನ್ನಡದಲ್ಲಿ ಸಾಕಷ್ಟು ರೋಚಕ ಧಾರಾವಾಹಿಗಳನ್ನು ನೀಡಿರುವ ಟಿ ಎನ್‌ ಸೀತಾರಾಮ್‌ ಅವರು ಬರಹಗಾರರು, ನಿರ್ದೇಶಕರು ಎನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಅವರು ಹೀರೋ ಆಗಿದ್ದರು ಎನ್ನೋದು ಗೊತ್ತೇ? ಸುಮಾರು 48-49 ವರ್ಷಗಳ ಹಿಂದೆ ನನ್ನ ಗುರುಗಳಾದ ಲಂಕೇಶ್ ಅವರು ಪಲ್ಲವಿ ಎನ್ನುವ ಚಿತ್ರ ಮಾಡಿದ್ದರು. ಅದರಲ್ಲಿ ನನ್ನನ್ನು ಹೀರೋ ಎಂದು ಆಯ್ಕೆ ಮಾಡಿದ್ದರು. ಅದಕ್ಕೆ ಆ ವರ್ಷ ರಜತ ಕಮಲ ಪ್ರಶಸ್ತಿ ಕೂಡ ಬಂದಿತ್ತು.

ನನ್ನನ್ನು ಮಾಜಿ ಹೀರೋ ಆಗಿದ್ದೆ ಎಂದು ಕಲ್ಪಿಸಿಕೊಳ್ಳಲೂ ಸಾಧ್ಯ ಆಗದಿರಬಹುದು. ಆದರೆ ಅಂದು ಆಗಿದ್ದೆ‌! ಇಂದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆ ಸಿನಿನಾ ಪ್ರದರ್ಶನವಿತ್ತು. ಅದು ನನಗೆ ಅಪರಿಮಿತ ಸಂತೋಷ ತಂದಿತ್ತು. ನಾನು ಹೀರೋ ಆಗಿದ್ದೆ ಎಂದಲ್ಲ. ನೂರಾರು ಜನ ಹೀರೋಗಳಾಗಿದ್ದಾರೆ. ಅವರ ಯೋಗ್ಯತೆಯಲ್ಲಿ ಸಾಸಿವೆ ಕಾಳಿನಷ್ಟು ಕೂಡಾ ನನಗೆ ಯೋಗ್ಯತೆ ಇಲ್ಲದಿರಬಹುದು. ಆದರೆ ಈ ಚಿತ್ರ ನನಗೆ ಅಂದಿನ ದಿನಗಳ ಅತ್ಯಂತ ಪ್ರಿಯವಾದ ನೆನಪುಗಳನ್ನು ಅಷ್ಟೇ ಹಸಿರಾಗಿ ತಂದುಕೊಟ್ಟಿತು. ( ಈಗ ಯೋಚಿಸಿದರೆ ಅದು ಹೀರೋ ಅಲ್ಲ. ಒಂದು ಮುಖ್ಯ ಪಾತ್ರ)

2ನೇ ಮದುವೆಗೆ ಗಂಡು ರೆಡಿ ಇದ್ದ; ಮಗಳ ಆ ಮಾತಿಗೆ ಸಿಂಗಲ್‌ ಆಗಿ ಉಳಿದ ನಟಿ ಉಮಾಶ್ರೀ, ಯಾಕೆ?

ಆಗಿನ್ನೂ ನನಗೆ ಚಿಕ್ಕ ವಯಸ್ಸು. ಮುಗ್ಧತೆ ಇತ್ತು. ತಾರುಣ್ಯದ ಸಾವಿರ ಕನಸುಗಳು ಕಣ್ಣಲ್ಲಿ ದಟ್ಟವಾಗಿ ನಿಂತಿರುತ್ತಿದ್ದವು. ಆರ್ಥಿಕವಾಗಿ ದಯನೀಯ ಸ್ಥಿತಿಯಲ್ಲಿ ಇದ್ದರೂ ಅದು ನನಗೆ ನೋವು ಎನಿಸುತ್ತಿರಲಿಲ್ಲ. ಎಲ್ಲವನ್ನೂ ಗೆದ್ದು ನಿಲ್ಲಬಲ್ಲೆ ಎನ್ನುವ ಎನ್ನುವ ವಿಶ್ವಾಸವಿತ್ತು. ಊರಿನಲ್ಲಿ, ತಿಳಿದವರ ಪೈಕಿ ಮೆಚ್ಚುಗೆಯಿಂದ ನೋಡುತ್ತಿದ್ದವರು...ಎಲ್ಲ ಸೇರಿದ ನೆನಪುಗಳು. ( ನಂತರದ ದಿನಗಳಲ್ಲಿ, ಬದುಕು ತೆಗೆದುಕೊಂಡ ತಿರುವುಗಳಲ್ಲಿ
ಜರ್ಝರಿತನಾಗಿ ಸೋತು ಹೋಗಿದ್ದೆ. ಅದು ಬೇರೆ ವಿಚಾರ)

ಇವೆಲ್ಲ ಯಾರೂ ಕಾಣದ್ದಲ್ಲ. ನಂತರ ನಾನು ಏನೂ ಗೆದ್ದು ನಿಲ್ಲಲಿಲ್ಲ. ಆದರೂ ವಾಸ್ತವದ ಸತ್ಯದ ನಡುವೆಯೂ ಆ ದಿನಗಳ ನೆನಪುಗಳು ನನಗೆ ಅಪರಿಮಿತ ಸಂತೋಷ ಕೊಟ್ಟಿತು. ಇದಕ್ಕಾಗಿ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ಆಯ್ಕೆ ಮಾಡಿದವರಿಗೆ ಥ್ಯಾಂಕ್ಸ್. ನನ್ನ ಈ ಹಳೆಯ ಚಿತ್ರವನ್ನು ನೋಡಲು ಯಾರೂ ಬರಲಾರರು ಎಂದು ಭಾವಿಸಿದ್ದೆ. ಆದರೆ ಚಿತ್ರ ಮಂದಿರ ಕಿಕ್ಕಿರಿದು ತುಂಬಿತ್ತು. ಮೇಷ್ಟ್ರ ಮಗಳು ಕವಿತಾ ಲಂಕೇಶ್, ಮೇಷ್ಟ್ರು ಶ್ರೀಮತಿ ಇಂದಿರಾ ಲಂಕೇಶ್ ಬಂದಿದ್ದರು. ತುಂಬ ಆರ್ದ್ರತೆ ತಂದ ಗಳಿಗೆಗಳು ಇಂದು.

ನಟನೆಗೆ ವಿದಾಯ ಹೇಳಬೇಕು ಅಂತಿದ್ದ ಈ ನಟಿಗೆ ಶಿವಣ್ಣಂಗೆ ನಾಯಕಿಯಾಗುವ ಅವಕಾಶ

ಇಷ್ಟು ವರ್ಷವಾದರೂ ನೀನು ಬದಲಾಗಿಲ್ಲ ಎಂದರು ನಂತರ ಗೆಳೆಯರು. 'ಹೇಗೆ' ಎಂದೆ. 'ಅದೇ ಥರ ಸೊಟ್ಟಕಾಲು ಹಾಕುತ್ತೀಯ' ಎಂದು ನಕ್ಕರು. ನನ್ನ ಜತೆಯಲ್ಲೇ ಕೂತು ಚಿತ್ರ ನೋಡಿದ ಗೆಳೆಯ, ಮಾಜಿ ಶಾಸಕ ಮೋಹನ ಕೊಂಡಜ್ಜಿಗೆ ತುಂಬು ಪ್ರೀತಿ.
ಇದೆಲ್ಲ ದೊಡ್ಡ ವಿಷಯವಲ್ಲ. ಅಂದು ಅನ್ನಿಸಿದಷ್ಟು ಚಿತ್ರ ಚೆನ್ನಾಗಿದೆಯೋ ಇಲ್ಲವೋ ಹೇಳಲಾರೆ. ಆದರೆ ಇಂದಿನ ಆ ಕ್ಷಣದಲ್ಲಿ ದೊಡ್ಡದೆನಿಸಿತು. ಅದಕ್ಕಾಗಿ ಈಚಿತ್ರೋತ್ಸವಕ್ಕೆ, ಈ ಚಿತ್ರ ಆಯ್ಕೆ ಮಾಡಿದವರಿಗೆ ಪ್ರೀತಿಯ ಧನ್ಯವಾದಗಳು. ಈಗ ರಾತ್ರಿ ಒಂದು ಗಂಟೆ. ನಮ್ಮ ಬಗ್ಗೆ ನಮಗೇ ಹೆಚ್ಚು ಪ್ರೀತಿ, ಮರುಕ, ಮೆಚ್ಚುಗಗಳು ಬರುವ ಸಮಯ. ಹೆಚ್ಚು 
ಅನಿಸಿದ್ದರೆ ಕ್ಷಮಿಸಿ.