Drishya 2: ರಾಜೇಂದ್ರ ಪೊನ್ನಪ್ಪ ಕೌಶಲ್ಯತೆ ಮೈನವಿರೇಳಿಸುತ್ತದೆ ಎಂದ ಸಿಂಪಲ್ ಸುನಿ
ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅಭಿನಯದ ಬಹುನಿರೀಕ್ಷಿತ 'ದೃಶ್ಯ 2' ಚಿತ್ರದ ಬಗ್ಗೆ ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಸಿಂಪಲ್ ಸುನಿ ಟ್ವೀಟರ್‌ನಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ವಿ.ರವಿಚಂದ್ರನ್ (V.Ravichandran) ಅಭಿನಯದ ಬಹುನಿರೀಕ್ಷಿತ 'ದೃಶ್ಯ 2' (Drishya 2) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಗುರುವಾರ (ಡಿ.9) ರಾತ್ರಿಯೇ ಈ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದು 'ದೃಶ್ಯ 2' ವೀಕ್ಷಿಸಿದ್ದಾರೆ. ಉಪೇಂದ್ರ, ಡಾಲಿ ಧನಂಜಯ್, ಮೇಘನಾ ರಾಜ್, ಧ್ರುವ ಸರ್ಜಾ, ಪ್ರೇರಣಾ, ಸಿಂಪಲ್ ಸುನಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು ಸಿನಿಮಾ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಸಿಂಪಲ್ ಸುನಿ (Simple Suni) 'ದೃಶ್ಯ 2' ಚಿತ್ರದ ಟ್ವೀಟರ್‌ನಲ್ಲಿ (Twitter) ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಹೌದು! 'ಸಖತ್' (Sakath) ಸಿನಿಮಾ ಸಕ್ಸಸ್‌ನಲ್ಲಿರುವ ನಿರ್ದೇಶಕ ಸಿಂಪಲ್ ಸುನಿ 'ದೃಶ್ಯ 2' ಸಿನಿಮಾವನ್ನು ವೀಕ್ಷಿಸಿ, ಇದೊಂದು ಕುತೂಹಲ ಭರಿತ ಕೌಟುಂಬಿಕ ಚಿತ್ರ, ರವಿಚಂದ್ರನ್ 'ರಾಜೇಂದ್ರ ಪೊನ್ನಪ್ಪ'ರಾಗಿದ್ದಾರೆ. ಮತ್ತು ಅವರ ಕೌಶಲ್ಯತೆ ಮತ್ತೇ ಮೈನವಿರೇಳಿಸುತ್ತದೆ. ಎಲ್ಲರ ಅಭಿನಯ ಹಾಗೂ ತಾಂತ್ರಿಕವಾಗಿ ಚಿತ್ರ ಅತ್ಯುತ್ತಮ ಎಂದು ಟ್ವೀಟ್ (Tweet) ಮಾಡಿದ್ದಾರೆ. ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅಭಿನಯದ 'ಸಖತ್' ಚಿತ್ರವನ್ನು ರವಿಚಂದ್ರನ್ ವೀಕ್ಷಿಸಿದ್ದು, ಚಿತ್ರದಲ್ಲಿ ಸಾಕಷ್ಟು ಹಾಸ್ಯ ಇದ್ದು, 2 ಗಂಟೆಗಳ ಕಾಲ ಮಸ್ತ್ ಮಜಾ ಮಾಡಬಹುದು. ಹಾಗೂ ಸಿಂಪಲ್ ಸುನಿ ಡೈರೆಕ್ಷನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
Drishya 2: 'ಮಳೆಬಿಲ್ಲೇ ಮರೆಯಾಗುವೇ ನೀ ಏಕೆ' ಎಂದು ಹಾಡಿದ ರಾಜೇಂದ್ರ ಪೊನ್ನಪ್ಪ
ರವಿಚಂದ್ರನ್ ನಟನೆಯ 'ದೃಶ್ಯ' (Drishya) ಸಿನಿಮಾ 2014ರ ಜೂನ್ 20ರಂದು ಬಿಡುಗಡೆಯಾಗಿ ಕನ್ನಡ ಸಿನಿ ರಸಿಕರನ್ನ ಮೋಡಿ ಮಾಡಿತ್ತು. ಇದೀಗ ದೃಶ್ಯ 2 ತೆರೆಕಂಡಿದ್ದು, ಫಸ್ಟ್‌ಲುಕ್ ಹಾಗೂ ಟ್ರೇಲರ್ಗಳಿಂದ ಕ್ಯೂರಿಯಾಸಿಟಿ ಮೂಡಿಸಿ, 200ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ. ಪಿ. ವಾಸು ನಿರ್ದೇಶನದ ‘ದೃಶ್ಯ 2’ ಸಿನಿಮಾದಲ್ಲಿ ರಾಜೇಂದ್ರ ಪೊನ್ನಪ್ಪ ಕುಟುಂಬದ ಕಥೆಯೇ ಪ್ರಮುಖವಾಗಿದ್ದು, ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. 'ದೃಶ್ಯ' ಮೊದಲ ಭಾಗದಲ್ಲಿ ನಾಯಕಿಯಾಗಿ ನಟಿಸಿದ್ದ ನವ್ಯ ನಾಯರ್ (Navya Nair) ಈ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ಪುತ್ರಿ ಪಾತ್ರದಲ್ಲಿ ಆರೋಹಿ ನಾರಾಯಣ್ (Arohi Narayan) ಕಾಣಿಸಿಕೊಂಡಿದ್ದಾರೆ. ಮುಖ್ಯಪಾತ್ರದಲ್ಲಿ ಹಿರಿಯ ನಟ ಅನಂತನಾಗ್ (Ananth Nag) ನಟಿಸಿದ್ದಾರೆ.
Drishya 2 Trailer: ಕ್ರೇಜಿಸ್ಟಾರ್ ವಿ.ರವಿಚಂದ್ರನ್‌ಗೆ ಕಿಚ್ಚ ಸುದೀಪ್ ಸಾಥ್
ಇತ್ತೀಚೆಗೆ ಚಿತ್ರದ 'ಮಳೆಬಿಲ್ಲೇ' (Malebille) ಎಂಬ ಲಿರಿಕಲ್ ಹಾಡು ಬಿಡುಗಡೆಯಾಗಿತ್ತು. ಅನೂಪ್ ಭಂಡಾರಿ (Anup Bhandari) ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಹರಿಚರಣ್ (Haricharan) ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ. ಅಜನೀಶ್ ಲೋಕನಾಥ್ (Ajaneesh Loknath) ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಹಾಗೂ 'ದೃಶ್ಯ 2' ಚಿತ್ರದ ಟ್ರೇಲರ್ ಕೂಡಾ ಸಾಕಷ್ಟು ಸಸ್ಪೆನ್ಸ್ಗಳಿಂದ ಕೂಡಿದ್ದು, ಇ4 ಎಂಟರ್‌ಟೈನ್‌ಮೆಂಟ್ ಬ್ಯಾನರ್ನಲ್ಲಿ ಚಿತ್ರ ಮೂಡಿಬಂದಿದೆ. ಜಿ.ಎಸ್.ವಿ. ಸೀತಾರಾಂ ಕ್ಯಾಮರಾ ಕೈಚಳಕ, ರವಿ ಸಂತೆಹುಕ್ಲು ಕಲಾ ನಿರ್ದೇಶನ, ಸುರೇಶ್ ಅರಸ್ ಸಂಕಲನ ಹಾಗೂ ಲೋಕೇಶ್ ಬಿ.ಕೆ ಗೌಡ, ಭರತ್ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯುಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.