Asianet Suvarna News Asianet Suvarna News

ಐಷಾರಾಮಿ 'ಬಿಎಂಡಬ್ಲ್ಯೂ 520' ಕಾರು ಖರೀದಿಸಿದ ನಿರ್ದೇಶಕ ಸಂತೋಷ್ ಆನಂದ್ ರಾಮ್!

'ರಾಜಕುಮಾರ್' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ದುಬಾರಿ ಕಾರು ಖರೀದಿಸಿದ್ದಾರೆ. ಕಾರಿನ ಮುಂದೆ ಇಡೀ ಕುಟುಂಬಸ್ಥರು ನಿಂತು ಪೋಸ್ ಮಾಡಿರುವ ಫೋಟೋ ವೈರಲ್ ಆಗುತ್ತಿದೆ. 

Kannada director Santhosh Ananddram welcome white BMW 520D car vcs
Author
Bangalore, First Published Aug 31, 2021, 12:06 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಇತ್ತೀಚಿಗೆ ದುಬಾರಿ ಕಾರು ಖರೀದಿಸಿದ್ದಾರೆ. ಇದು ಮೊದಲ ಐಷಾರಾಮಿ ಕಾರು ಆಗಿರುವ ಕಾರಣ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂತಸ ಹಂಚಿ ಕೊಂಡಿದ್ದಾರೆ.

ಬಿಳಿ ಬಣ್ಣದ ಬಿಎಂಡಬ್ಲ್ಯೂ 520ಡಿ  ಕಾರು ಖರೀದಿಸಿದ್ದಾರೆ. ಈ ಕಾರಿನ ಆನ್‌ ರೋಡ್‌ ಬೆಲೆ ಸುಮಾರು 66 ಲಕ್ಷ ರೂ., ಇದರದ್ದೇ ಸ್ಪೋರ್ಟ್  ಲೈನ್ ಟ್ರಿಮ್ ಕಾರು 88 ಲಕ್ಷ ರೂ. ಈ ಕಾರನ್ನು ಖರೀದಿಸಲು ರಿಜಿಸ್ಟ್ರೇಷನ್‌ಗೇ 11 ಲಕ್ಷ ನೀಡಬೇಕು ಎಂದು ಗೂಗಲ್ ಹೇಳುತ್ತದೆ.  ಪತ್ನಿ ಹಾಗೂ ಮುದ್ದಾದ ಮಗುವಿನ ಜೊತೆ ಫೋಟೋ ಹಂಚಿಕೊಂಡ ನಿರ್ದೇಶಕರು, 'ಬಿಎಂಡಬ್ಲ್ಯೂ 520ಡಿ ಮನೆಗೆ ಸ್ವಾಗತ' ಎಂದು ಬರೆದುಕೊಂಡಿದ್ದಾರೆ.

ಲಕ್ಷ್ಮಿ ಹಬ್ಬದ ದಿನ ಆಡಿ ಕ್ಯೂ8 ಕಾರು ಖರೀದಿಸಿದ ರಕ್ಷಿತ್ ಶೆಟ್ಟಿ!

ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ಸೆಲೆಬ್ರಿಟಿಗಳು ಹಾಗೂ ಕಿರುತೆರೆ ಕಲಾವಿದರು ಹೊಸ ಕಾರುಗಳನ್ನು ಖರೀದಿಸುತ್ತಿದ್ದಾರೆ. ಆಡಿ ಕ್ಯೂ 8ಅನ್ನು ರಕ್ಷಿತ್ ಶೆಟ್ಟಿ ಖರೀದಿಸಿದ್ದಾರೆ, ಶೈನ್ ಶೆಟ್ಟಿ ನೀಲಿ ಬಣ್ಣದ ಬಿಎಂಡಬ್ಲ್ಯೂ, ಮೇಘಾ ಶೆಟ್ಟಿ ಕಪ್ಪು ಬಣ್ಣ ಎಂಜಿ ಹೆಕ್ಟರ್ ಹಾಗೂ ಬಿಎಂಬ್ಲ್ಯೂ ಖರೀದಿಸಿದ್ದಾರೆ.

ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ, ರಾಜಕುಮಾರ ಹಾಗೂ ಯುವರತ್ನ ಸಿನಿಮಾ ನಂತರ ಸಂತೋಷ್ ಯಾವ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬುದಿನ್ನೂ ರಿವೀಲ್ ಮಾಡಿಲ್ಲ.

 

Follow Us:
Download App:
  • android
  • ios