ಸಾವು, ಮಗ ಅನಾಥ ಆಗೋದು... ಮೇಘನಾ ಅಳೋದು...ಮೊದಲೇ ಸುಳಿವು ಕೊಟ್ಟಿದ್ರಾ ಚಿರಂಜೀವಿ ಸರ್ಜಾ?: ರಘುರಾಮ್ ಹೇಳಿಕೆ ವೈರಲ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಿರ್ದೇಶಕ ರಘುರಾಮ್ ಸಂದರ್ಶನ. ಮೇಘನಾ ರಾಜ್- ಚಿರಂಜೀವಿ ಸರ್ಜಾ ಜೊತೆ ನಡೆದ ಘಟನೆ ಇದು....

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ರಘುರಾಮ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಯುಟ್ಯೂಬ್ ಚಾನೆಲ್ ಆರಂಭಿಸಿ ಹಿರಿಯ ಕಲಾವಿದರು ತೆರೆಯಿಂದ ಮರೆಯಾಗಿರುವವರನ್ನು ಸಂಪರ್ಕಿಸಿ ಸಂದರ್ಶನ ಮಾಡುತ್ತಾರೆ. ಈ ನಡುವೆ ತಮ್ಮ ಜೀವನದಲ್ಲಿ ಮರೆಯಲಾಗದ ಘಟನೆ ಹಂಚಿಕೊಂಡಿದ್ದಾರೆ.
ನಿರ್ಮಾಪಕ ಸೂರಪ್ಪ ಬಾಬು ಅವರು ಒಮ್ಮೆ ನಿರ್ದೇಶಕ ರಘು ರಾಮ್ ಅವರನ್ನು ಭೇಟಿ ಮಾಡುತ್ತಾರೆ ಆಗ ಮಹೇಶ್ ಎಂಬುವವರು ಚಿರಂಜೀವಿ ಸರ್ಜಾಗೆ ಕಥೆ ಹೇಳುವಂತೆ ಸೂಚಿಸುತ್ತಾರೆ. ಚಿರು ಸಂಪರ್ಕ ಮಾಡಿಕೊಂಡು ನಿವಾಸಕ್ಕೆ ಭೇಟಿ ನೀಡಿ ರಘು ಕಥೆ ಹೇಳುತ್ತಾರೆ. ಕಥೆ ಇಷ್ಟ ಆಗದ ಕಾರಣ ನನಗೆ ಇಷ್ಟ ಆಗಿಲ್ಲ ಬೇರೆ ಕಥೆ ಟ್ರೈ ಮಾಡೋಣ ಎಂದು ಚಿರು ನೇರವಾಗಿ ಹೇಳುತ್ತಾರೆ. ಹೀಗೆ ಒಮ್ಮೆ ಚಿರು ಜೊತೆ ರಘು ಊಟ ಮಾಡುವಾಗ ಒಂದು ಕಥೆ ರೆಡಿಯಾಗಿದೆ ನೀವು ಮೇಘನಾ ಜೋಡಿಯಾಗಿ ನಟಿಸಿದರೆ ಸೂಪರ್ ಆಗಿರುತ್ತದೆ ಎಂದು ಸಲಹೆ ಕೊಟ್ಟರಂತೆ.
ಮದ್ವೆಯಾಗಿ 6 ತಿಂಗಳು ಅಂತ ರಕ್ತದಲ್ಲಿ ಪತಿ ಚಿತ್ರ ಬಿಡಿಸಿದ 'ಜೊತೆ ಜೊತೆಯಲಿ' ಶಿಲ್ಪಾ; ಹುಚ್ಚಾಟ ಎಂದ ನೆಟ್ಟಿಗರು
ಮೊದಲು ಕಥೆ ಕೇಳಿದ ಚಿರಂಜೀವಿ ಸರ್ಜಾ ತಬ್ಬಿಕೊಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 2019ರಲ್ಲಿ ನಡೆದ ಘಟನೆ ಇದಾಗಿದ್ದು ಜನವರಿ 14ರಂದು ಹಬ್ಬದ ದಿನ ಚಿರು ಮತ್ತೊಮ್ಮೆ ಕರೆ ಮಾಡಿ ಮೇಘನಾ ರಾಜ್‌ಗೆ ಕಥೆ ಹೇಳುವಂತೆ ಒತ್ತಾಯ ಮಾಡಿದ್ದಾರೆ. ಜೆಪಿ ನಗರದಲ್ಲಿರುವ ಸುಂದರ್ ರಾಜ್ ನಿವಾಸಕ್ಕೆ ಭೇಟಿ ನೀಡಿ ರಘು ರಾಮ್ ಕಥೆ ಹೇಳುತ್ತಾರೆ. ಕಥೆ ಕೇಳಿದ ತಕ್ಷಣ ಮೇಘನಾ ಎದ್ದು ರೂಮಿಗೆ ಹೋಗುತ್ತಾರೆ ಅವರ ಹಿಂದೆ ಅವರ ತಾಯಿ ಪ್ರಮೀಳಾ ಕೂಡ ಹೋಗುತ್ತಾರಂತೆ. ರೂಮಿನಿಂದ ಕಣ್ಣೀರಿಡುತ್ತಾ ಮೇಘನಾ ರಾಜ್ ರೂಮಿನಿಂದ ಹೊರ ಬಂದು ಅದ್ಭುತವಾಗಿದೆ ಎನ್ನುತ್ತಿದ್ದರು ಅಷ್ಟರಲ್ಲಿ ಚಿರು ಬಂದು ಬಿಟ್ಟರಂತೆ...ಇಬ್ಬರಿಗೂ ಕಥೆ ಇಷ್ಟ ಆಗಿದೆ ಸಿನಿಮಾ ಮಾಡಲು ಸಣ್ಣ ಪುಟ್ಟ ಪ್ಲ್ಯಾನ್ ಮಾತುಕತೆ ಶುರು ಮಾಡಿದ್ದಾರೆ.
ರಘುರಾಮ್ ಹೇಳಿದ ಕಥೆ ಕೊನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಸಾಯುತ್ತಾರೆ ಮಗು ಅನಾಥವಾಗುತ್ತದೆ. ಈ ಸಮಯದಲ್ಲಿ ಪ್ರಮೀಳಾ ಅವರು ಕಥೆ ಕೊನೆಯಲ್ಲಿ ಕೊಂಚ ಬದಲಾವಣೆ ಮಾಡಬೇಕು ಮದುವೆಯಾಗಿ ಒಂದು ವರ್ಷ ಅಗಿದೆ ಆಗಲೇ ನೆಗೆಟಿವ್ ಮಾಡುವುದು ಬೇಡ ಎನ್ನುತ್ತಾರೆ. ಅಷ್ಟರಲ್ಲಿ ಚಿರು ಏನ್ ಆಗಲ್ಲ ಆಂಟಿ ಇದು ಸಿನಿಮಾ ಅಷ್ಟೆ ಕಥೆ ಪ್ರಕಾರ ಘಟನೆ ನಡೆಯುವುದು ಅಷ್ಟೆ ನಾನು ಏನು ರಿಯಲ್ ಜೀವನದಲ್ಲಿ ಸತ್ತು ಹೋಗುತ್ತೀನಾ ಅಥವಾ ನನ್ನ ಮಕ್ಕಳು ಅನಾಥರಾಗುತ್ತಾರಾ ಎಂದು ಚಿರು ಹೇಳುತ್ತಾರಂತೆ. ಕಥೆ ಮುಗಿಸಿಕೊಂಡು ರಘು ರಾಮ್ ಕಾರಿನ ಕಡೆದು ನಡೆದುಕೊಂಡು ಬರುವಾಗ ಒಂದು ಸಲಹೆ ಕೊಟ್ಟರಂತೆ. ನಿಮ್ಮ ಕಥೆ ಪ್ರಕಾರ ಒಂದು ಶೂಟಿಂಗ್ ಮಾಡೋಣ ಮತ್ತೊಂದರಲ್ಲಿ ನಾನು ಖುಷಿಯಾಗಿ ಜೀವನ ನಡೆಸುತ್ತಿರುವುದು ಮಾಡೋಣ ಎಂದು ಹೇಳುತ್ತಾರೆ ಅದಕ್ಕೆ ರಘು ಒಪ್ಪಿಕೊಂಡು ಹೊರಟರಂತೆ.
ಈ ಕನಸು ಹುಟ್ಟಿದ್ದು ಚಿರುನಿಂದ, ಈಗ ಕನಸು ನನಸಾಗಿದೆ: ಮೇಘನಾ ರಾಜ್
2019ರಲ್ಲಿ ಈ ಘಟನೆ ನಡೆಯಿತ್ತು 2020ರಲ್ಲಿ ಚಿರು ನಮ್ಮನ್ನು ಬಿಟ್ಟು ಹೋದರು. ಚಿರು ಘಟನೆ ನಂಬಲು ಆಗುತ್ತಿಲ್ಲ. ಮೇಘನಾ ಪುತ್ರನನ್ನು ಬೆಳೆಸುತ್ತಿರುವ ರೀತಿಗೆ ಸಖತ್ ಖುಷಿಯಾಗಿದೆ. ನಾನು ಹೇಳಿದ ಕಥೆಗೂ ನಿಜ ಜೀವನದಲ್ಲಿ ಅವರಿಬ್ಬರು ಇರುವ ರೀತಿಗೂ ಮ್ಯಾಚ್ ಆಗುತ್ತಿತ್ತು. ಯಾಕೆ ಈ ಸಿನಿಮಾ ಮಾಡಲಿಲ್ಲ ಅಂದ್ರೆ ನನ್ನ ತಂಡದಲ್ಲಿದ್ದ ವ್ಯಕ್ತಿ ನಾನು ಸಾಕಿ ಬೆಳೆಸಿದ ಹುಡುಗ ಮೋಸ ಮಾಡಿಬಿಟ್ಟ ಎಂದು ರಘು ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸಂದರ್ಶನ ವೈರಲ್ ಆಗುತ್ತಿದೆ.