Asianet Suvarna News Asianet Suvarna News

ಕಾರಿನಲ್ಲಿ ಮಾಸ್ಕ್ ಹಾಕದ ಕಾರಣ ದಂಡ ಕಟ್ಟಿದ ನಿರ್ದೇಶಕ; ಇದೆಲ್ಲಾ ಪಬ್ಲಿಕ್ ನ್ಯೂಸೆನ್ಸ್?

ಕಾರಿನಲ್ಲಿ ಮಾಸ್ಕ್‌ ಧರಿಸದೇ ಪ್ರಯಾಣ ಮಾಡುತ್ತಿದ್ದ ಕಾರಣ ನಿರ್ದೇಶಕ ಗುರುದತ್‌ಗೆ ಪೊಲೀಸರು ದಂಡ ಹಾಕಿದ್ದಾರೆ.
 

Kannada director raghuram posts about police mask fine vcs
Author
Bangalore, First Published Oct 22, 2020, 2:07 PM IST

ಕೊರೋನಾ ಸೋಂಕಿನಿಂದ ಜನರು ಸಾರ್ವಜನಿಕ ಸ್ಥಳಗಳಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯ. ಇದು ಸರ್ಕಾರದ ನಿಯಮವೂ ಹೌದು. ಆದರೆ ಕಾರಿನಲ್ಲಿ ಕಿಟಕಿ ಹಾಕಿದ್ದರೂ ಮಾಸ್ಕ್ ಧರಿಸಬೇಕಾ?

ನಿರ್ದೇಶಕನ ಬಾಲ್ಯ ಫೋಟೋ ಹಿಂದಿದೆ 'ಮಿನುಗುತಾರೆ' ನಟಿ ಬರವಣಿಗೆ! 

ಸ್ಯಾಂಡಲ್‌ವುಡ್‌ ಹೆಸರಾಂತ ನಿರ್ದೇಶಕ ಗುರುದತ್ ಹಾಗೂ ಚಾಲಕ ಬೆಂಗಳೂರಿನ ಗುಟ್ಟಹಳ್ಳಿ ಮಾರ್ಗವಾಗಿ ಕಾರಿನಲ್ಲಿ ಚಲಿಸುತ್ತಿರುವಾಗ ಪೊಲೀಸರು ಅಡ್ಡಹಾಕಿ ಮಾಸ್ಕ್‌ ಧರಿಸದ ಕಾರಣ ದಂಡ ವಿಧಿಸಿದ್ದಾರೆ. ಈ ವಿಚಾರದ ಬಗ್ಗೆ ನಟ ಕಮ್ ನಿರ್ದೇಶಕ ರಘುರಾಮ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

ದಂಡ ಕಟ್ಟಿರುವ ರಸೀದಿಯ ಫೋಟೋವನ್ನು ಶೇರ್ ಮಾಡಿದ್ದಾರೆ. 'ನಮ್ಮ ಕಾರಿನಲ್ಲಿ ಮಾಸ್ಕ್ ಇಲ್ಲದೇ ಕಿಟಕಿ ಹಾಕೊಂಡು ಹೋದ್ರೆ ಇದು ಪಬ್ಲಿಕ್ ನ್ಯೂಸೆನ್ಸ್ ಆ? ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಹಾಗೂ ಅದು ಎಲ್ಲರ ಜವಾಬ್ದಾರಿಯೂ ಹೌದು. ಆದರೆ ನಮ್ಮದೇ ಕಾರಿನಲ್ಲಿ ಮಾಸ್ಕ್ ಧರಿಸದೇ ಕಿಟಕಿ ಹಾಕಿದ್ದರೆ ಅದು ಹೇಗೆ ಪಬ್ಲಿಕ್ ನ್ಯೂಸೆನ್ಸ್ ಅಗುತ್ತದೆ? ಎತ್ತ ಸಾಗುತ್ತಿದೆ ನಮ್ಮ ಕಾನೂನು?' ಎಂದು ರಘುರಾಮ್ ಬರೆದಿದ್ದಾರೆ.

SIIMA Award ನಲ್ಲಿ 'ಟಗರು'ಗಿಲ್ಲ ಮನ್ನಣೆ; ನಿರ್ದೇಶಕ ಫುಲ್ ಗರಂ! 

'ಕೊರೋನಾದಿಂದ ಜನರು ನರಳುತ್ತಿದ್ದರೆ ಸರ್ಕಾರ ಮಾನವೀಯತೆ ಕಳೆದುಕೊಂಡು, ಹಣ ಲೂಟಿ ಮಾಡುತ್ತಿರುವುದೇಕೆ'?' ಭ್ರಷ್ಟಾಚಾರಕ್ಕೊಂದು ದಾರಿ ಹಿಡಿದಿದ್ದಾರೆ,' ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ರಘುರಾಮ್‌ ಅವರ ಮಾತಿಗೆ ಬೆಂಬಲ ನೀಡಿದ್ದಾರೆ.

Follow Us:
Download App:
  • android
  • ios