ಆಗಸ್ಟ್‌ 15 ರಂದು ಕತಾರ್‌ನಲ್ಲಿ ನಡೆದ ಅದ್ಧೂರಿ ಪ್ರಶಸ್ತಿ ಸಮಾರಂಭದಲ್ಲಿ 8 ಅವಾರ್ಡ್‌ಗಳು ಬಹುಕೋಟಿ ಸಿನಿಮಾ 'ಕೆಜಿಎಫ್' ಪಾಲಾಗಿದ್ದು, 3 ಅವಾರ್ಡ್‌ಗಳು 'ಅಯ್ಯೋಗ' ಚಿತ್ರಕ್ಕೆ, 3 ಟಗರು ಚಿತ್ರಕ್ಕೆ ಹಾಗೂ 1 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಪಾಲಾಗಿದೆ.

ಪ್ರಶಸ್ತಿ ಸಿಕ್ಕ ಖುಷಿಯಲ್ಲಿರುವಾಗಲೇ ಇನ್ನೊಂದು ಖ್ಯಾತೆ ಶುರುವಾಗಿದೆ. ದೇಶದಾದ್ಯಂತ ತೆರೆ ಕಂಡು ಯಶಸ್ಸು ಗಳಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಟಗರು' ಚಿತ್ರಕ್ಕೆ ಕೇವಲ 3 ಪ್ರಶಸ್ತಿ ಬಂದಿರುವುದಕ್ಕೆ ನಟ ಹಾಗೂ ನಿರ್ದೇಶಕ ರಘುರಾಮ್ ಸೈಮಾ ಅವಾರ್ಡ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

SIIMA Awards 2019 ಗೆದ್ದ ಕನ್ನಡ ತಾರೆಯರ ಪಟ್ಟಿ!

'#Award's ಪಡೆದುಕೊಳ್ಳೋದು ಸಂಸ್ಕಾರ. ಕೆಲವರ ಅವಶ್ಯಕತೆಗೆ ಮಿಕ್ಕವರ ಅನಿವಾರ್ಯತೆಗೆ ಪ್ರಶಸ್ತಿಗಳನ್ನು ಕೊಡೋದು ವ್ಯವಹಾರ. ವಿಶ್ವಾದ್ಯಂತ ಜನಪ್ರಿಯವಾಗಿರೋ ಟಗರು ಚಿತ್ರಕ್ಕೆ ,ಹಾಡಿಗೆ ಹಾಡುಗಾರನಿಗೆ, ಸಂಗೀತ ನಿರ್ದೇಶಕನಿಗೆ, ಚಿತ್ರಕಥೆಗೆ, ಗುರುತು ಗೌರವ ಸಿಗದೇ ಇರೋದು @siims ಅವರ ಪಕ್ಷಪಾತ ನಿರ್ಧಾರ. #Tagaru ಎಂದು ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ.