ಕನ್ನಡ ಚಿತ್ರರಂಗದಲ್ಲಿ ಕೆಲ ವರ್ಷಗಳ ಹಿಂದೆ ಸಿಕ್ಕಾಪಟ್ಟೆ ಹಿಟ್ ಆದ ಸಿನಿಮಾವೇ 'ತಾಜ್‌ಮಹಲ್'. ಆರ್‌ ಚಂದ್ರು ನಿರ್ದೇಶನ ಅಜಯ್ ರಾವ್‌ ಹಾಗೂ ಪೂಜಾ ಗಾಂಧಿ ಕಾಂಬಿನೇಷ್‌ನಲ್‌ ಕಿಮಿಸ್ಟ್ರಿ ನೋಡಿ ವೀಕ್ಷಕರು ಫುಲ್ ಫಿದಾ ಆಗಿದ್ದರು. ಆದರೆ ಈ ಸಿನಿಮಾ ತಯಾರಿ ಆಗುವ ಸಮಯದಲ್ಲಿ ಏನೆಲ್ಲಾ ಆಗಿತ್ತು? ಮೊದಲು ಆಯ್ಕೆ ಆದ ನಟ ಯಾರು ಎಂದು ಖಾಸಗಿ ವೆಬ್‌ಸೈಟ್‌ವೊಂದಕ್ಕೆ ತಿಳಿಸಿದ್ದಾರೆ.

ತಾಜ್‌ ಮಹಲ್ ಚಿತ್ರದಲ್ಲಿ ಅಜಯ್ ರಾವ್‌ಗೂ ಮೊದಲು ಸುನೀಲ್ ಆಯ್ಕೆ ಆಗಿದ್ದರಂತೆ. ಚಿತ್ರಕಥೆಯನ್ನೂ ಒಪ್ಪಿಕೊಂಡಿದ್ದರು, ಆದರೆ ಸ್ಕ್ರಿಪ್ಟ್ ವಿಚಾರದಲ್ಲಿ ಗೊಂದಲ ಉಂಟಾದ ಕಾರಣ ತಂಡದಿಂದ ಹೊರ ಬಂದರು ಎನ್ನಲಾಗಿದೆ. 'ಸ್ಕ್ರಿಪ್ಟ್‌ನಲ್ಲಿ ತಪ್ಪುಗಳಿವೆ. ಸಣ್ಣ ತಪ್ಪುಗಳನ್ನು ನಿಭಾಯಿಸದೆ ನೀನು ದೊಡ್ಡ ಸಿನಿಮಾ ಹೇಗೆ ಮಾಡಲು ಸಾಧ್ಯ? ನೀನು ಧಾರಾವಾಹಿ ಮಾಡಿರುವುದನ್ನು ನೋಡಿದ್ದೇನೆ.  ಒಂದು ಸಿನಿಮಾ ಮಾಡು ಆಮೇಲೆ ಒಟ್ಟಿಗೆ ಸಿನಿಮಾ ಮಾಡೋಣ. ಈಗ ಈ ಚಿತ್ರ ನಾನು ಮಾಡೋಕೆ ಆಗಲ್ಲ' ಎಂದು ಆತ್ಮೀಯವಾಗಿ ಹೇಳಿದ್ದರಂತೆ.

ಈ ಚಿತ್ರಕಥೆಗೆ ಮೊದಲು 'ಉರಿ ಬಿಸಿಲು' ಎಂಬ ಶೀರ್ಷಿಕೆ ಇಡಲಾಗಿತ್ತು. ಆರ್‌ ಚಂದ್ರು ಒಂದು ದಿನ ಉತ್ತರ ಭಾರತ ಪ್ರವಾಸ ಹೋಗಿದ್ದರು ಆಗ ತಾಜ್ ಮಹಲ್ ನೋಡಿ ನಮ್ಮ ಚಿತ್ರಕ್ಕೆ ಇದೇ ಹೆಸರು ಇಡಬೇಕೆಂದು ನಿರ್ಧರಿಸಿದರಂತೆ.  ಒಂದು ಸಿನಿಮಾ ಹಿಟ್ ಆಗಲು ಎಷ್ಟೆಲ್ಲಾ ಕಷ್ಟವಿರುತ್ತದೆ ರಿಲೀಸ್‌ ಆಗಿ ಸೂಪರ್ ಹಿಟ್‌ ಆದ ದಿನ ಸಿಗುವ ಪ್ರತಿಫಲ ಎನ್ನ ನೋವನ್ನು ನೀಗಿಸುತ್ತದೆ.