'ಏಕ್ ಲವ್ ಯಾ' ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಇಡೀ ತಂಡದ ಬಗ್ಗೆ ಮಾತನಾಡಿದ ನಿರ್ದೇಶಕ ಪ್ರೇಮ್.
ಜೋಗಿ ಪ್ರೇಮ್ (Jogi Prem) ನಿರ್ದೇಶನ ಮಾಡಿರುವ ಏಕ್ ಲವ್ ಯಾ (Ek love ya) ಸಿನಿಮಾ ಇದೇ ಫೆಬ್ರವರಿ 24ರಂದು ಬಿಡುಗಡೆಯಾಗುತ್ತಿದೆ. ರಕ್ಷಿತಾ ಪ್ರೇಮ್ (Rakshitha Prem) ಬಂಡವಾಳ ಹಾಕಿರುವ ಈ ಚಿತ್ರಕ್ಕೆ ಸಹೋದರ ರಾಣಾ (Rana) ನಾಯಕನಾಗಿ ಕಾಣಿಸಿಕೊಂಡಿದ್ದು ಅವರಿಗೆ ಜೋಡಿಯಾಗಿ ರಚಿತಾ ರಾಮ್ ಮತ್ತು ರೇಷ್ಮಾ (Reeshma) ನಟಿಸಿದ್ದಾರೆ. ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು. ಈ ವೇಳೆ ನಿರ್ದೇಶಕರು ತಮ್ಮ ತಂಡದ ಬಗ್ಗೆ ಮಾತನಾಡಿದ್ದಾರೆ.
ನಟಿ ರೇಷ್ಮಾ ಆಯ್ಕೆ ಆಗಿದ್ದು ಹೀಗೆ:
'ನಾನು ರಾಣಾಗೆ ಸಿನಿಮಾ ಮಾಡ್ಬೇಕಿದ್ರೆ ಅವರಿಗೆ ಹೊಸ ಹುಡುಗಿ ಹಾಕಲೇಬೇಕಿತ್ತು. ಸುಮಾರು ಜನರನ್ನು ನೋಡಿದೆವು. ಬೆಂಗಳೂರು ಟೈಮ್ಸ್‌ನಲ್ಲಿ ಫ್ರೆಶ್ ಫೇಸ್ ಅಂತ ಇವರ ಮಾಹಿತಿ ಕೊಟ್ಟರು. ಅಯ್ಯೋ ಇದು ಇಂಗ್ಲಿಷ್ (English) ನಂಗೆ ಗೊತ್ತಿಲ್ಲ. ನಾನು ಮಾಹಿತಿ ಕಳುಹಿಸಿ ಅಂತ ಹೇಳಿದೆ. ಮೊದಲು ನಮ್ಮ ಹುಡುಗರು ಮಾತನಾಡಿದರು. ಆಮೇಲೆ ನಾನು ಮಾತನಾಡಿದೆ. ಆಫೀಸ್‌ಗೆ ಎಷ್ಟು ಇನ್ನೋಸೆಂಟ್ ಆಗಿ ಬಂದ್ರು ಅಂದ್ರೆ ನನಗೆ ನೀವು ಚಾನ್ಸ್ ಕೊಡಿ ನಾನು ತುಂಬಾ ಡೆಡಿಕೇಷನ್‌ನಲ್ಲಿ ಮಾಡ್ತೀನಿ ಅಂತ ಪುಟ್ಟ ಮಕ್ಕಳ ರೀತಿ ಸೋಫಾ ಮೇಲೆ ಕುಳಿತುಕೊಂಡು ಕೇಳಿದಳು. ಅದನ್ನು ಕೇಳಿ ನಾನು ಬಾರೋ ಬಡ್ಡಿ ಮಗನೇ ನಾನು ಸಿನಿಮಾ ಮಾಡಿಸ್ತೀನಿ ಅಂದು ಕರೆದುಕೊಂಡೆ. ಸುಮಾರು 3 ತಿಂಗಳ ನಂತರ ಶ್ರಮಿಸಿ ಸಿನಿಮಾ ಮಾಡಿದ್ದಾರೆ. ಈಗ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾಳೆ' ಎಂದು ಪ್ರೇಮ್ ಮಾತನಾಡಿದ್ದಾರೆ.
![]()
ತಾಯಿ ಸೆಂಟಿಮೆಂಟ್ ಇದ್ಯಾ.?
ಪ್ರೇಮ್ ಸಿನಿಮಾ ಅಂದ್ಮೇಲೆ ತಾಯಿ ಸೆಂಟಿಮೆಂಟ್ (Mother sentiment) ಇರುತ್ತದೆ ಆದರೆ ಈ ಸಿನಿಮಾದಲ್ಲಿ ಇಲ್ಲ ಎಂದಿದ್ದಾರೆ ಪ್ರೇಮ್. 'ಏಕ್ ಲವ್ ಯಾ ಸಿನಿಮಾದಲ್ಲಿ ಸೆಂಟಿಮೆಂಟ್ ಅಂದ್ರೆ ಮ್ಯೂಸಿಕ್ ಮೇಲೆ ಎಮೋಷನ್‌ಗಳನ್ನ ಪ್ಲೇ ಮಾಡಿದ್ದೀನಿ. ಲವ್ ಸೆಂಟಿಮೆಂಟ್ (love sentiment) ಕೂಡ ಇದೆ. ತಾಯಿ ಸೆಂಟಿಮೆಂಟ್ ಬಿಟ್ಟು ಬೇರೆ ಎಲ್ಲಾ ಸೆಂಟಿಮೆಂಟ್‌ಗಳನ್ನು ನಾನು ನೀಡಿದ್ದೀನಿ. ಪ್ರತಿ ಸಲ ನಾನು ತಾಯಿ ಸೆಂಟಿಮೆಂಟ್ ಬಗ್ಗೆಯೇ ತೋರಿಸಿದ್ದರೆ akward ಅನಿಸುತ್ತದೆ. ಭೂಮಿ ಮತ್ತು ತಾಯಿನ ವರ್ಣನೆ ಮಾಡುವುದಕ್ಕೆ ಪದಗಳು ಸಿಗುವುದಿಲ್ಲ. ಈ ಸಿನಿಮಾ ರಿಯಲ್ ಘಟನೆ ಅದಕ್ಕೆ ಅದನ್ನು ಕಮರ್ಷಿಯಲ್ ಮಾಡಿ ಸಿನಿಮಾ ಮಾಡಿದ್ದೀನಿ' ಎಂದಿದ್ದಾರೆ.
Ek Love Ya: 'ಮೀಟ್ ಮಾಡೋಣ, ಇಲ್ಲ ಡೇಟ್ ಮಾಡೋಣಾ' ಏಕ್ ಲವ್‌ಯಾ ಸಾಂಗ್ ಹಿಂದಿನ ಪ್ರತಿಭೆ
ಪ್ರೀತಿ ಏಕೆ ಭೂಮಿ ಮೇಲಿದೆ ಸಿನಿಮಾ ಯಶಸ್ಸಿಗೂ ರಿಲೀಸ್ ಆಗುವ ಮುನ್ನವೇ ಯಶಸ್ಸು ಕಾಣುತ್ತಿರುವ ಏಕ್ ಲವ್ ಯಾ ಸಿನಿಮಾಗೂ ವ್ಯತ್ಯಾಸ ಇದ್ಯಾ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದಾರೆ.
'ಯಾವುದಪ್ಪ ಯಶಸ್ಸು? (Success) ನಾನು ಮೇಲಕ್ಕೂ ಇಲ್ಲ ಕೆಳಕ್ಕೂ ಇಲ್ಲ ನಾನು ಒಂದೇ ಸಮದಲ್ಲಿ ಇದ್ದೀನಿ. ಯಶಸ್ಸು ಅನ್ನೋ ಪದಗಳನ್ನು ನಾನು ತೆಗೆದುಕೊಳ್ಳುವುದಿಲ್ಲ. ಇದು ನನ್ನ8 ಸಿನಿಮಾ ಇದು. ಎಲ್ಲಾ ಸಿನಿಮಾಗಳು ಹಣ ಮಾಡಿದೆ. ವಿತರಕರು, ನಿರ್ಮಾಪಕರು ಚಿತ್ರಮಂದಿರ ಮಾಲೀಕರು ಎಲ್ಲರೂ ಹಣ ಮಾಡಿದ್ದಾರೆ ಯಾರಿಗೂ ನನ್ನ ಸಿನಿಮಾಯಿಂದ ಲಾಸ್ ಆಗಿಲ್ಲ. ನಾನು ಸಿನಿಮಾ ಮಾಡುವಾಗ ಹೊಸ ನಿರ್ದೇಶಕನಾಗಿ ಸಿನಿಮಾ ಮಾಡ್ತೀನಿ. ನನಗಿಂತ ಚಿಕ್ಕ ಹುಡುಗರ ಜೊತೆ ಕೆಲಸ ಮಾಡಿ ತುಂಬಾನೇ ಕಲ್ತಿದ್ದೀನಿ. ನಾನು ಅಂತ ಎಂದೂ ಹೇಳುವುದಿಲ್ಲ ನಾವು ಅಂತಾನೇ ಹೇಳೋದು. ನನಗೆ ಸೋಲು ಗೆಲುವು ಇಲ್ಲ ಎಲ್ಲಾನೂ ಒಂದೇ ನನಗೆ'ಎಂದು ಪ್ರೇಮ್ ಮಾತನಾಡಿದ್ದಾರೆ.
