47 ವರ್ಷಕ್ಕೆ ಕಾಲಿಟ್ಟ ಕಿಚ್ಚ ಸುದೀಪ್‌ ಹುಟ್ಟುಹಬ್ಬವನ್ನು ಕುಟುಂಬದವರ ಜೊತೆ ಸರಳವಾಗಿ ಆಚರಿಸಿಕೊಂಡಿದ್ದಾರೆ. ಕೊರೋನಾ ವೈರಸ್‌ನಿಂದ ಯಾರಿಗೂ ತೊಂದರೆ ಆಗಬಾರದು ಎಂದು ಅಭಿಮಾನಿಗಳಿಗೆ ಮನೆ ಬಳಿ ಬಾರದಂತೆ ಮನವಿಯನ್ನೂ ಮಾಡಿಕೊಂಡಿದ್ದರು. ಹುಟ್ಟು ಹಬ್ಬದ ದಿನ ಜೋಗಿ ಪ್ರೇಮ್ ಸುದೀಪ್‌ ಅಭಿಮಾನಿಗಳಿಗೆ ಸರ್ಪ್ರೈಸ್‌ ನ್ಯೂಸ್‌ ನೀಡಿದ್ದಾರೆ. ಏಕ್‌ ಲವ್‌ ಯಾ ಚಿತ್ರದ ನಂತರ ಶುರುವಾಗಲಿರುವ ಸ್ಟಾರ್ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.

ದರ್ಶನ್- ಸುದೀಪ್‌ ಸಂಬಂಧೀಕರು? ಒಳ್ಳೆ ಹುಡುಗ ಪ್ರಥಮ್‌ ಬಿಡಿಸಿಟ್ಟ ಸಂಬಂಧ! 

ಮತ್ತೆ ಒಟ್ಟಾದ ಪ್ರೇಮ್- ಕಿಚ್ಚ:
'ಹಾಯ್‌, ಎಲ್ಲರೂ ನನ್ನ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಕೇಳುತ್ತಲೇ ಇದ್ದೀರಾ. ಅದಕ್ಕೆ ನಾನು ಇವತ್ತು ಉತ್ತರಿಸುತ್ತಿರುವೆ. ನನ್ನ ಡಾರ್ಲಿಂಗ್ ಸುದೀಪ್‌ ಜೊತೆ ಮತ್ತೆ ಸಿನಿಮಾ ಮಾಡುತ್ತಿರುವೆ. ಅವರ ಹುಟ್ಟು ಹಬ್ಬದ ದಿನವೇ ಹೇಳಬೇಕೆಂದು ಕಾಯುತ್ತಿದ್ದೆ. ನೀವು ಎಂದೂ ಕಿಚ್ಚನನ್ನು ಈ ಹೊಸ ಲುಕ್‌ನಲ್ಲಿ ನೋಡಿರುವುದಿಲ್ಲ. ಇದು ಹೊಸ ಅವತಾರ' ಎಂದು ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚನಿಗೆ ವಿಶ್ ಮಾಡಿ ಬರೆದುಕೊಂಡಿದ್ದಾರೆ.

 

ಚಿತ್ರದ ಬಗ್ಗೆ ಜೋಗಿ ಪ್ರೇಮ್‌ ಮಾತನಾಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ. ಇದು ಡಿಫರೆಂಟ್ ಪಾತ್ರ ಆಗಿರುವ ಕಾರಣ ತಯಾರಿ ಮಾಡಿಕೊಳ್ಳಲು ಕನಿಷ್ಠ  6 ರಿಂದ 8 ತಿಂಗಳು ಬೇಕಾಗುತ್ತದೆ ಎಂದಿದ್ದಾರೆ. ಸುದೀಪ್‌ ಲುಕ್ ರೆಡಿ ಮಾಡಲು 3 ತಿಂಗಳು ಬೇಕಾಗುತ್ತದೆ, ಎಂಬ ಸುಳಿವು ನೀಡುವ ಮೂಲಕ ಸುದೀಪ್ ಲುಕ್ ಡೆಫರೆಂಟ್ ಆಗಿರುತ್ತೆ ಎಂಬುದನ್ನು ಹೇಳಿದ್ದಾರೆ. ಡಿಸೆಂಬರ್‌ ಕೊನೆಯ ವಾರದಲ್ಲಿ ಲುಕ್‌ ಬಿಡುಗಡೆ ಮಾಡಿ, 2021 ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. 

ಮಲ್ಟಿ ಲ್ಯಾಂಗ್ವೇಜ್ ಸಿನಿಮಾ:
ಈ ಸಿನಿಮಾ ಪ್ರೇಮ್‌ ಅವರಿಗೆ ತುಂಬಾ ವಿಶೇಷವಾಗಿರುವ ಕಾರಣ, ಭಾರತದಲ್ಲಿರುವ ಎಲ್ಲ ಭಾಷೆಗಳಲ್ಲೂ ರಿಲೀಸ್‌ ಮಾಡಬೇಕೆಂದು ಕೊಂಡಿದ್ದಾರಂತೆ.  ಯುನಿವರ್ಸಲ್‌ ಸ್ಟೋರಿಯನ್ನು ತುಂಬಾನೇ ಸಮಯ ಕೊಟ್ಟು ರೆಡಿ ಮಾಡಿದ್ದಾರೆ. ಮೊದಲ ಬಾರಿ ಕಥೆ ಕೇಳಿದ ಸುದೀಪ್‌  'ಮೈ ಜುಂ ಎನಿಸುತ್ತದೆ' ಎಂದು ಹೇಳಿದರಂತೆ.  ಸದ್ಯಕ್ಕೆ ಏಕ್‌ ಲವ್‌ ಯಾ ಸಿನಿಮಾ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭಗೊಂಡಿವೆ. ಇದು ಮುಗಿದ ನಂತರ ಸುದೀಪ್‌ ಅಣ್ಣ ಜೊತೆ ಸಿನಿಮಾ ಶುರು ಮಾಡಲಿದ್ದಾರಂತೆ.

"

ಈ ಹಿಂದೆ ತೆರೆ ಕಂಡ 'ವಿಲನ್‌' ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಮತ್ತು ಸುದೀಪ್‌ ಒಟ್ಟಾಗಿ ಕಾಣಿಸಿಕೊಂಡಿದ್ದರು. ಬಾಕ್ಸ್ ಆಫೀಸಿನಲ್ಲಿ ಧೂಳ್  ಎಬ್ಬಿಸಿದ ಸಿನಿಮಾ ಟಾಕ್‌ ಆಫ್‌ ದಿ ಟೌನ್‌ ಆಗಿತ್ತು. ಈ ಸಿನಿಮಾದಲ್ಲೂ ಸುದೀಪ್‌ ಜೊತೆ ಮತ್ತೊಬ್ಬ ಸ್ಟಾರ್ ನಟ ಇರಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ. ಸಾಮಾನ್ಯವಾಗಿ ಪ್ರೇಮ್‌ ನಿರ್ದೇಶನದ ಚಿತ್ರದಲ್ಲಿ ಯಾರಾದರೂ ಪರಭಾಷಾ ನಟಿಯರು ಇದ್ದೇ ಇರುತ್ತಾರೆ ಈಗಾಗಲೆ ಆ್ಯಮಿ ಜಾಕ್ಸನ್‌ ಹಾಗೂ ಸನ್ನಿ ಲಿಯೋನ್ ಅವರನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ ಪ್ರೇಮ್.

"