ಬಾಲಿವುಡ್‌ಗೆ ಜೋಗಿ ಪ್ರೇಮ್ ಕಾಲಿಡೋದು ಕನ್ಪರ್ಮ್; ಹಿಂದಿಯಲ್ಲಿ ಹೀರೋ ಯಾರು?
ಕೆಡಿ ಚಿತ್ರದ ಬಳಿಕ ಪ್ರೇಮ್ ಅವರು ಬಾಲಿವುಡ್‌ನತ್ತ ಹೋಗುತ್ತಿದ್ದಾರೆ. ಈಗ ನಟರು ಹಾಗೂ ನಿರ್ದೇಶಕರು ಕನ್ನಡ ಚಿತ್ರರಂಗದ ಜೊತೆಗೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಕೂಡ ಕೆಲಸ ಮಾಡುವುದು ಹೊಸ ಸಂಗತಿಯೇನೂ ಅಲ್ಲ. ಆದರೆ, ಜೋಗಿ ಪ್ರೇಮ್ ಹೋಗುತ್ತಿರುವುದು ಹೊಸ ವಿಷಯ ಅಷ್ಟೇ. ಈಗ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಟ್ರೆಂಡ್..
ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ (Prem) ಅವರು ಸದ್ಯದಲ್ಲೇ ಬಾಲಿವುಡ್‌ಗೆ ಕಾಲಿಡಲಿದ್ದಾರೆ ಎಂಬ ನ್ಯೂಸ್ ಈಗ ವೈರಲ್ ಅಗುತ್ತಿದೆ. ಈಗ ಅವರು ತಮ್ಮ 'ಕೆಡಿ-ದಿ ಡೆವಿಲ್' ಚಿತ್ರವನ್ನು ನಿರ್ದೇಶಿಸಿದ್ದು, ಸದ್ಯದಲ್ಲೇ ಅದು ತೆರೆಗೆ ಬರಲಿದೆ. ಅಷ್ಟರಲ್ಲೇ ನಿರ್ದೇಶಕ ಪ್ರೇಮ್ ಅವರು ಹೊಸದೊಮದು ಸಮಾಚಾರ ಕೊಟ್ಟಿದ್ದಾರೆ. ಬಾಲಿವುಡ್ ಸಿನಿಮಾರಂಗಕ್ಕೆ ತಾವು ಹೋಗಲಿರುವ ಸುದ್ದಿಯನ್ನು ಕನ್ಫರ್ಮ್ ಮಾಡಿದ್ದಾರೆ. ಈ ಸುದ್ದಿಯೀಗ ಸಕತ್ ವೈರಲ್ ಆಗುತ್ತಿದೆ. ಸದ್ಯಕ್ಕೆ ಯಾವ ಸಿನಿಮಾ, ಯಾರು ಹೀರೋ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ ಪ್ರೇಮ್.
ಕರಿಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರವಸೆ ಮೂಡಿಸಿದ ನಿರ್ದೇಶಕರಾಗಿ ಕಾಲಿಟ್ಟವರು ಪ್ರೇಮ್. 'ಎಕ್ಸ್‌ಕ್ಯೂಸ್ ಮೀ' ಚಿತ್ರ ಕೂಡ ಸೂಪರ್ ಹಿಟ್ ಆಗುವ ಮೂಲಕ ಮತ್ತಷ್ಟು ಖ್ಯಾತಿ ಗಳಿಸಿದ ನಿರ್ದೇಶಕ ಪ್ರೇಮ್ ಅವರು ಬಳಿಕ ಜೋಗಿ ಸಿನಿಮಾ ಮೂಲಕ ರಾತ್ರೋ ರಾತ್ರಿ ಕನ್ನಡದ ಗ್ರೇಟ್ ಡೈರೆಕ್ಟರ್ ಪಟ್ಟ ಗಿಟ್ಟಿಸಿಕೊಂಡರು. ನಂತರ, 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ ನಿರ್ದೇಶನದ ಜೊತೆಗೆ ನಾಯಕ ನಟರೂ, ಗಾಯಕರೂ ಆಗಿ ಜನಮನ್ನಣೆ ಪಡೆದರು.
ಪ್ರೇಮ್-ಧ್ರುವ ಸರ್ಜಾ KD ಸಾಂಗ್ ಔಟ್, ಭಾರೀ ಕಿಕ್ ಕೊಡ್ತಿದೆ 'ಶಿವ ಶಿವಾ' ಹವಾ!
ಸದ್ಯ ಕೆಡಿ-ದಿ ಡೆವಿಲ್ ಚಿತ್ರವನ್ನು (KD-The Devil) ಧ್ರುವ ಸರ್ಜಾ ನಾಯಕತ್ವದಲ್ಲಿ ನಿರ್ದೇಶನ ಮಾಡಿದ್ದು, ಈ ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಜೋಗಿ ಪ್ರೇಮ್ ಹಾಗೂ ನಟ ಧ್ರುವ ಸರ್ಜಾ ಇಬ್ಬರಿಗೂ ಒಂದು ಯಶಸ್ಸು ಈಗ ಖಂಡಿತ ಬೇಕಾಗಿದೆ. ಏಕೆಂದರೆ, ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಚಿತ್ರವು ಹುಟ್ಟಿಸಿದ್ದ ನಿರೀಕ್ಷೆಯನ್ನು ಸುಳ್ಳಾಗಿಸಿದೆ. ಜೋಗಿ ಪ್ರೇಮ್ ಕೂಡ ಸದ್ಯಕ್ಕೆ ಯಾವುದೇ ಹಿಟ್ ಚಿತ್ರ ಕೊಟ್ಟಿಲ್ಲ. ಹೀಗಾಗಿ ಕೆಡಿ ಚಿತ್ರವು ಯಶಸ್ಸು ತಂದು ಕೊಡಲಿ ಎಂದು ಧ್ರುವ ಹಾಗೂ ಪ್ರೇಮ್ ಇಬ್ಬರೂ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
ಇದೀಗ ಬಂದ ಸುದ್ದಿಯ ಪ್ರಕಾರ, ಕೆಡಿ ಚಿತ್ರದ ಬಳಿಕ ಪ್ರೇಮ್ ಅವರು ಬಾಲಿವುಡ್‌ನತ್ತ ಹೋಗುತ್ತಿದ್ದಾರೆ. ಈಗ ನಟರು ಹಾಗೂ ನಿರ್ದೇಶಕರು ಕನ್ನಡ ಚಿತ್ರರಂಗದ ಜೊತೆಗೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಕೂಡ ಕೆಲಸ ಮಾಡುವುದು ಹೊಸ ಸಂಗತಿಯೇನೂ ಅಲ್ಲ. ಆದರೆ, ಜೋಗಿ ಪ್ರೇಮ್ ಹೋಗುತ್ತಿರುವುದು ಹೊಸ ವಿಷಯ ಅಷ್ಟೇ. ಈಗ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಟ್ರೆಂಡ್ ಆಗಿರುವಂತೆ ಕನ್ನಡ ಚಿತ್ರರಂಗದವರು ಬೇರೆ ಕಡೆಗಳಲ್ಲೂ ಮಿಂಚುತ್ತಿರುವುದು ಸಾಮಾನ್ಯ ಸಂಗತಿಯೇ ಆಗಿದೆ.
ಕನ್ನಡದ ಗ್ರೇಟ್ ಡೈರೆಕ್ಟರ್ ಉಪೇಂದ್ರ 'UI' ಪ್ರೆಸೆಂಟೇಶನ್‌ನಲ್ಲಿ ಎಡವಿದ್ರಾ?
ಜೋಗಿ ಪ್ರೇಮ್ ಬಾಲಿವುಡ್ ಸಿನಿಮಾ ನಿರ್ದೇಶನ ಮಾಡಿ ಅಲ್ಲಿಯೂ ಸಕ್ಸಸ್ ಕಾಣಲಿ ಎಂಬುದೇ ಕನ್ನಡಿಗರ ಹಾರೈಕೆ ಎನ್ನಬಹುದು. ಸದ್ಯ ಕೆಡಿ ಚಿತ್ರದ ಸಾಂಗ್ ರಿಲೀಸ್ ಆಗಿದ್ದು, ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಆದರೆ, ಈ ಸಾಂಗ್ ಭಾರೀ ಜನಪ್ರಿಯತೆಯನ್ನೇನೂ ಪಡೆದಿಲ್ಲ. ಆದರೆ, ಮುಂದೆ ಚಿತ್ರದ ಪ್ರೀಮಿಯರ್ ಶೋ, ಹಾಡುಗಳು ಜನಮೆಚ್ಚುಗೆ ಪಡೆಯಬಹುದು, ಸಿನಿಮಾ ಕೂಡ ಉತ್ತಮ ರೆಸ್ಪಾನ್ಸ್ ಪಡೆಯಬಹುದು ಎಂದು ಪ್ರೇಮ್ ಹಾಗೂ ಧ್ರುವ ಸರ್ಜಾ ಫ್ಯಾನ್ಸ್ ಕಾಯುತ್ತಿದ್ದಾರೆ. ನಿರೀಕ್ಷೆ ನಿಜವಾಗಬಹುದೇ? ಕಾಲ ಕೊಡುವ ಉತ್ತರಕ್ಕೆ ಕಾಯಬೇಕಷ್ಟೇ!