'ಅಂಬಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ ಎಪಿ ಅರ್ಜುನ್‌ ಮೇ. 7ರಂದು ಗಂಡು ಮಗುವಿಗೆ ತಂದೆಯಾಗಿದ್ದಾರೆ. ಪತ್ನಿ ಅನ್ನಪೂರ್ಣ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ.

 

ಹಲವು ವರ್ಷಗಳಿಂದ ಅರ್ಜುನ್ ಹಾಗೂ ಅನ್ನಪೂರ್ಣ ಪ್ರೀತಿಸುತ್ತಿದ್ದು ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ  2020 ಮೇ10ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

'ಅದ್ಧೂರಿ'ಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಿಸ್' ನಿರ್ದೇಶಕ ಎಪಿ ಅರ್ಜುನ್!

'ಹಾಯ್ ಎಲ್ಲರಿಗೂ. ನನ್ನ ಜೀವನದ ಅತ್ಯಂತ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳುತ್ತಿರುವೆ. ನಾನು ಇಂದು ಮಧ್ಯಾಹ್ನ ಕುಟುಂಬಕ್ಕೆ ಗಂಡು ಮಗುವನ್ನು ಬರ ಮಾಡಿಕೊಂಡಿದ್ದೀವಿ.  ದೇವರ ದಯೆಯಿಂದ ಮಗು ಹಾಗೂ ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ. ನೀಮ್ಮೆಲ್ಲರ ಪ್ರೀತಿ, ಹಾರೈಕೆಗೆ ಧನ್ಯವಾದಗಳು' ಎಂದು ಅರ್ಜುನ್ ಬರೆದುಕೊಂಡಿದ್ದಾರೆ.