ಮನೆ ಮಗಳಂತೆ ಮೇಘನಾ ರಾಜ್‌ ಅವರನ್ನು ಪ್ರೀತಿಸುತ್ತಿರುವ ಸಿನಿ ಪ್ರೇಮಿಗಳು ಹಾಗೂ ಕಲಾಬಂಧುಗಳು ಅಕ್ಟೋಬರ್ 4ರಂದು ಜೆಪಿ ನಗರದ ನಿವಾಸದಲ್ಲಿ ಸರಳ ಸೀಮಂತ ಕಾರ್ಯಕ್ರಮ ಮಾಡಿದ್ದರು. ಆ ನಂತರ ಸರ್ಜಾ ಕುಟುಂಬದವರು ಅಕ್ಟೋಬರ್ 5ರಂದು ಮೇಘನಾಗಾಗಿ ಬೇಬಿ ಶವರ್ ಆಯೋಜಿಸಿದ್ದರು.

ಚಿರು ನೆರಳಿನಲ್ಲಿ ಮೇಘನಾಗೆ ಸೀಮಂತ, ಮನೆ ಮಂದಿಯೆಲ್ಲ ಭಾಗಿ 

ಚಿರಂಜೀವಿ ಸರ್ಜಾಗೆ ಪತ್ನಿ ಸೀಮಂತದ ನಂತರ ಬೇಬಿ ಶವರ್ ಮಾಡಬೇಕೆಂಬ ಆಸೆ  ಇತ್ತಂತೆ. ಆ ಆಸೆಯನ್ನು ತಮ್ಮ ಧ್ರುವ ಸರ್ಜಾ ಈಡೇರಿಸಿದ್ದಾರೆ. ಕಲರ್‌ಫುಲ್ ಗುಲಾಬಿಗಳ ನಡುವೆ ಚಿರಂಜೀವಿ ಫೋಟೋ ಇರುವ ಬ್ಯಾಗ್ರೌಂಡ್ ಅಲಂಕಾರ ಮಾಡಿಸಲಾಗಿತ್ತು. ಪೀಚ್ ವಿತ್ ಫ್ಲೋರಲ್‌ ಬಣ್ಣದ ವಸ್ತ್ರದಲ್ಲಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ.

ವಿಷೇಶವೆನೆಂದರೆ ಅಕ್ಟೋಬರ್ 6 (ಇಂದು) ಧ್ರುವ ಸರ್ಜಾ ಹುಟ್ಟುಹಬ್ಬವಿರುವ ಕಾರಣ ಅಲ್ಲೇ ಅಡ್ವಾನ್ಸ್ ಆಗಿ ಧ್ರುವಗೆ ಕೇಕ್‌ ಕಟ್ ಮಾಡಿಸಲಾಗಿತ್ತು. ಬೇಬಿ ಶವರ್ ಕಾರ್ಯಕ್ರಮದಲ್ಲಿ ಸುಂದರ್ ರಾಜ್‌ ಕುಟುಂಬದವರು, ಸರ್ಜಾ ಕುಟುಂಬದವರು ಹಾಗೂ ಆಪ್ತ ಸ್ನೇಹಿತ್ತರು ಭಾಗಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಧ್ರುವ ಹಾಗೂ ಮೇಘನಾ ಒಟ್ಟಾಗಿ ನಿಂತಿರುವ ಫೋಟೋ ವೈರಲ್ ಆಗುತ್ತಿದೆ.

"