ಬಹುಭಾಷಾ ನಟ ದೀಪಕ್ ಹಾಗೂ ಬಹು ಕಾಲದ ಗೆಳತಿ ಸೋನಿಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ವೈರಸ್ ಕಾಟದಿಂದ ಅನೇಕ ಸೆಲೆಬ್ರಿಟಿಗಳಂತೆ ಈ ಜೋಡಿಯೂ ಕೇವಲ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಂಗ್ ಬದಲಾಯಿಸಿಕೊಂಡು, ಸಪ್ತಪದಿ ತುಳಿದಿದ್ದಾರೆ.

ದೀಪಕ್ ಹಾಗೂ ಸೋನಿಯಾ ಮೊದಲು ದೇವಾಲಯದಲ್ಲಿ ಹಿಂದು ಸಂಪ್ರದಾಯದಂತೆ ಮದುವೆಯಾಗಿ, ನಂತರ ಕ್ರೈಸ್ತ ಧರ್ಮದಂತೆ ಚರ್ಚ್‌ನಲ್ಲಿ ಮದುವೆಯಾಗಿದ್ದಾರೆ.

 

'ಮೊದಲು ಮೇನಲ್ಲಿಯೇ ನಾವು ಹಸೆಮಣೆ ಏರಲು ನಿರ್ಧರಿಸಿದ್ದೆವು. 600 ಜನರನ್ನು ಶುಭ ಸಮಾರಂಭಕ್ಕೆ ಆಹ್ವಾನಿಸುವ ಆಸೆಯೂ ಇತ್ತು. ಆದರೆ ಕೊರೋನಾದಿಂದ ಮದುವೆ ಮುಂದಕ್ಕೆ ಹಾಕಿ, ಹಾಕಿ ಈಗ ನೆರವೇರಿದೆ. ಕೇವಲ 250 ಜನರನ್ನು ಕರೆಯುವುದೂ ಕಷ್ಟವಾಯಿತು. ಎಲ್ಲರೂ ಆಪ್ತರು. ಯಾರನ್ನು ಕರೆಯುವುದು, ಯಾರನ್ನು ಬಿಡುವುದು ಎನ್ನುವುದನ್ನು ನಿರ್ಧರಿಸುವುದೇ ಕಷ್ಟವಾಯಿತು. ಲಾಸ್ಟ್‌ ಮೊಮೆಂಟ್‌ವರೆಗೂ ನಾವೇ ಇನ್ನು ಫಿಕ್ಸ್ ಆಗಿರಲಿಲ್ಲ,' ಎಂದು ನಟ ದೀಪಕ್ ಮಾತನಾಡಿದ್ದಾರೆ.

ಅದ್ಧೂರಿ ನಿಶ್ಚಿತಾರ್ಥ ಮಾಡಿಕೊಂಡ 'ಭರಾಟೆ' ನಟ ದೀಪಕ್ ಶೆಟ್ಟಿ!

ದೀಪಕ್ ಮದುವೆ ಫೋಟೋವನ್ನು ಶೇರ್ ಮಾಡಿಕೊಂಡು 'ಓಂ ಶ್ರೀ ನಂದನೇಶ್ವರಾ ನಮೋ ನಮಃ' ಎಂದು ಬರೆದುಕೊಂಡಿದ್ದಾರೆ. ಕ್ರೈಸ್ತ ಸಂಪ್ರದಾಯದಂತೆ ಉಂಗುರ ತೊಡಿಸಿ 'I do' ಎಂದು ಬರೆದಿದ್ದಾರೆ.

ಪೋಷಕ ನಟ ಹಾಗೂ ಖಳನಾಯಕನಾಗಿ ಮಿಂಚಿರುವ ದೀಪಕ್‌ ಮುಂದಿನ ಸಿನಿಮಾ 'ಕೋಟಿಗೊಬ್ಬ 3','ರವಿಚಂದ್ರ' ಹಾಗೂ 'ಗಡಿಯಾರ' ಬಿಡುಗಡೆಯಾಗಬೇಕಿವೆ.