ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ್‌ ಮೈಸೂರು ಚಾಮುಂಡೇಶ್ವರಿ ದೇವಿಯ ಅಪ್ಪಟ ಭಕ್ತ, ಪ್ರತಿ ವರ್ಷ ಆಷಾಢ ಶುಕ್ರವಾರದಂದು ತಾಯಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮೂರನೇ ಶುಕ್ರವಾರ ತಾಯಿಯ ಸನ್ನಿಧಿಯಲ್ಲಿ ದರ್ಶನ್ ಕಾಣಿಸಿಕೊಂಡಿದ್ದು, ಪೂಜೆ ಸಲ್ಲಿಸಲು ತೆರಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ತಾಯಿ ಚಾಮುಂಡಿ ದರ್ಶನ ಪಡೆದು, ದೇವಿಗೆ ವಿಶೇಷ ಪೂಜೆ ಸಲ್ಲಿಸದೇ ನಟ ದರ್ಶನ್‌ ಯಾವ ಕೆಲವನ್ನೂ ಆರಂಭಿಸುವುದಿಲ್ಲ. ನಿರ್ಮಾಪಕ ಸಂದೇಶ್ ನಾಗರಾಜ್‌ ಮತ್ತು ಸ್ನೇಹಿತರ ಜೊತೆ ಇದೀಗ ಚಾಮುಂಡೇಶ್ವರ ಸನ್ನಿಧಿಯಲ್ಲಿ ಈ ವೀಡಿಯೋದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕರೊಟ್ಟಿಗೆ ಬಂದ ಕಾರಣ ಇದು ಯಾವುದೋ ಸಿನಿಮಾಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲು ಬಂದಿರಬಹುದು, ಎಂದು ಮಾತನಾಡಿಕೊಳ್ಳಲಾಗುತ್ತಿದೆ. ಆದರೆ ಅಪ್ಪಟ ದಚ್ಚು ಅಭಿಮಾನಿಗಲಿಗೆ ಗೊತ್ತು ಬಾಸ್‌ ತಪ್ಪದೇ ಶುಕ್ರವಾರ ತಾಯಿ ಆಶೀರ್ವಾದ ಪಡೆಯುತ್ತಾರೆಂದು.

ಲಾಕ್‌ಡೌನ್‌ ಸಮಯದಲ್ಲಿ ದೇವಾಲಯಗಳು ಭಕ್ತರ ದರ್ಶನಕ್ಕೆ ಸಮಯ ನಿಗದಿಗೊಳಿಸಿದೆ. ದೇವಿಯ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರೂ ಸಹ ದೇವಸ್ಥಾನಕ್ಕೆ ಆಗಮಿಸಿದ್ದರು. ದರ್ಶನ್ ದೇವಸ್ಥಾನಕ್ಕೆ ತೆರಳಿದಾಗ, ತಮ್ಮ ನೆಚ್ಚಿನ ನಟನನ್ನು ನೋಡಲು ಸಾಮಾಜಿಕ ಅಂತರವನ್ನೂ ಮರೆತು, ಮುತ್ತಿಕೊಂಡಿದ್ದಾರೆ.

ಸದ್ಯಕ್ಕೆ ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಹೈನುಗಾರಿಕೆ ಮಾಡಿಕೊಂಡು ಸಮಯ ಕಳೆಯುತ್ತಿರುವ ದರ್ಶನ್‌, ಅತಿ ಶೀಘ್ರದಲ್ಲಿಯೇ ತಮ್ಮ ಮುಂದಿನ ಚಿತ್ರಕ್ಕೆ ಚಿತ್ರಿಕರಣ ಆರಂಭಿಸುತ್ತಾರೆ.  ರಾಬರ್ಟ್‌ ರಿಲೀಸ್‌ಗೆ ಸಿದ್ಧವಾಗಿದ್ದು, ರಾಜವೀರ ಮದಕರಿ ನಾಯಕ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ. ಇದಾದ ನಂತರ ಸಿಂಧೂರ ಲಕ್ಷ್ಮಣ ಚಿತ್ರದ ಚಿತ್ರೀಕರಣದಲ್ಲಿಯೂ ಕಾಣಿಸಿಕೊಳ್ಳಿದ್ದಾರೆ.

"