Asianet Suvarna News Asianet Suvarna News

ಸಿನಿಮಾ ಆಗಲಿದೆ ಸೈನೈಡ್‌ ಮೋಹನ್ ಕತೆ;ಪೊಲೀಸ್‌ ಆಫೀಸರ್‌ ಆಗಿ ಪ್ರಿಯಾಮಣಿ!

ದೇಶದಲ್ಲೇ ಸಂಚಲನ ಮೂಡಿಸಿದ್ದ ಬಂಟ್ವಾಳ ಮೂಲದ ಸೈನೈಡ್‌ ಕಿಲ್ಲರ್‌ ಮೋಹನನ ಕತೆ ಸಿನಿಮಾ ಆಗುತ್ತಿದೆ. ಪ್ರಿಯಾಮಣಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ಬರುತ್ತಿರುವ ಈ ಪ್ಯಾನ್‌ ಇಂಡಿಯಾ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಾಜೇಶ್‌ ಟಚ್‌ರಿವರ್‌. ಪ್ರದೀಪ್‌ ನಾರಾಯಣ್‌ ಎಂಬುವವರು ನಿರ್ಮಾಣದ ಹೊಣೆ ಹೊತ್ತಿದ್ದು, ‘ಸೈನೈಡ್‌’ ಹೆಸರಿನಲ್ಲೇ ಚಿತ್ರ ಸೆಟ್ಟೇರುತ್ತಿದೆ.

Kannada Cyanide mohan biography priyamani to play cop role vcs
Author
Bangalore, First Published Oct 1, 2020, 9:21 AM IST
  • Facebook
  • Twitter
  • Whatsapp

ಯಾರು ಈ ಸೈನೈಡ್‌ ಮೋಹನ?

20 ಮಂದಿ ಯುವತಿಯರನ್ನು ಸೈನೈಡ್‌ ಕೊಟ್ಟು ಸಾಯಿಸಿದ ಸರಣಿ ಕೊಲೆಗಾರ. ಹೆಣ್ಣು ಮಕ್ಕಳನ್ನು ಪ್ರೀತಿಸುವ ನಾಟಕವಾಡಿ ಅವರಿಗೆ ಗರ್ಭನಿರೋಧಕ ಮಾತ್ರೆಗಳು ಎಂದು ಹೇಳಿ ಸೈನೈಡ್‌ ತಿನ್ನಿಸಿ ಕೊಲೆ ಮಾಡುತ್ತಿದ್ದ. ಬಂಟ್ವಾಳದ ಮೂಲದ ಈತ 2009ರಲ್ಲಿ ಯುವತಿಯೊಬ್ಬಳ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧಿತನಾಗಿ 2012ರಲ್ಲಿ ಅದರ ವಿಚಾರಣೆ ಆರಂಭಗೊಂಡಿತ್ತು. ಬೆಂಗಳೂರು, ಮೈಸೂರು, ಮಂಗಳೂರು, ಕಾಸರಗೋಡು, ಬಂಟ್ವಾಳ ಹೀಗೆ 20 ಪ್ರಕರಣಗಳು ಈತನ ಮೇಲೆ ದಾಖಲಾಗಿದ್ದು, 6 ಪ್ರಕರಣಗಳಲ್ಲಿ ಮರಣದಂಡನೆ, 10 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್‌ ತೀರ್ಪು ನೀಡಿತ್ತು.

ಅಂತರ್‌ಧರ್ಮೀಯ ಮದುವೆ, ಮತಾಂತರದ ಬಗ್ಗೆ ಪ್ರಿಯಾಮಣಿ ಹೇಳಿದ್ದಿಷ್ಟು

Kannada Cyanide mohan biography priyamani to play cop role vcs

ಪ್ರಿಯಾಮಣಿ, ಯಶ್‌ಪಾಲ್‌ ಶರ್ಮಾ

ಈ ಚಿತ್ರ ಜನವರಿ ತಿಂಗಳಿನಿಂದ ಬೆಂಗಳೂರು ಮಂಗಳೂರು, ಮಡಿಕೇರಿ, ಗೋವಾ, ಹೈದರಾಬಾದ್‌, ಕಾಸರಗೋಡು ಮುಂತಾದ ಕಡೆ ಚಿತ್ರೀಕರಣ ಆರಂಭಿಸಲಿದ್ದು, ಪೊಲೀಸ್‌ ಅಧಿಕಾರಿಗಳಾಗಿ ಹಿಂದಿಯಲ್ಲಿ ಯಶ್‌ ಪಾಲ್‌ ಶರ್ಮಾ, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಪ್ರಿಯಾಮಣಿ ನಟಿಸಲಿದ್ದಾರೆ. ‘ಉತ್ತಮ್‌ ವಿಲನ್‌’ ಹಾಗೂ ‘ವಿಶ್ವರೂಪಂ’ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದ ಸದಾತ್‌ ಸೈನೂದ್ದಿನ್‌ ಛಾಯಾಗ್ರಾಹಣ ಮಾಡಲಿದ್ದಾರೆ. ಹಾಲಿವುಡ್‌ನ ಜಾಜ್‌ರ್‍ ಜೋಸಪ್‌ ಸಂಗೀತ ನೀಡಲಿದ್ದಾರೆ. ಶಶಿಕುಮಾರ್‌ ಸಂಕಲನ, ಗೋಕುಲ್‌ ದಾಸ್‌ ಕಲಾ ನಿರ್ದೇಶನ ಮಾಡಲಿದ್ದಾರೆ.

ಪ್ರಿಯಾ ಮಣಿ 56ನೇ ಸಿನಿಮಾ ರೆಡಿ: ಟೈಟಲ್‌ನಲ್ಲೇ ಇದೆ ವಿಶೇಷ..! 

ದೇಶಾದ್ಯಾಂತ ತೀವ್ರ ಕುತೂಹಲ ಮೂಡಿಸಿದ್ದ ಸೈನೈಡ್‌ ಮೋಹನನ ಕತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೇ ಮೇಕಿಂಗ್‌ ಮಾಡುತ್ತಿದ್ದು, ಇಲ್ಲಿ ಸೈನೈಡ್‌ ಮೋಹನನ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆಂಬುದು ಸದ್ಯಕ್ಕೆ ಗುಟ್ಟಾಗಿದೆ.

"

 

Follow Us:
Download App:
  • android
  • ios