Asianet Suvarna News Asianet Suvarna News

ಆರ್‌ಸಿಬಿಗೆ ಜೈಕಾರ ಕೂಗಿದ ಸ್ಯಾಂಡಲ್‌ವುಡ್‌;ಅನೇಕ ವಿಡಿಯೋ ಹಾಡುಗಳು ಬಿಡುಗಡೆ!

ಐಪಿಎಲ್‌ ಆರಂಭವಾದಾಗಿನಿಂದಲೂ ಒಬ್ಬರೋ ಇಬ್ಬರೋ ಕನ್ನಡ ತಾರೆಯರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರವಾಗಿ ಅಭಿಮಾನ ತೋರಿಸುತ್ತಲೇ ಬಂದಿದ್ದಾರೆ. ಆದರೆ ಈ ಬಾರಿ ಮಾತ್ರ ಸ್ಯಾಂಡಲ್‌ವುಡ್‌Êನ ಬಹುತೇಕರು ನಮ್ಮ ಬೆಂಬಲ ಆರ್‌ಸಿಬಿಗೆ ಎಂದಿದ್ದಾರೆ. ಬರೀ ಬಾಯಿ ಮಾತಲ್ಲ ಬೆಂಬಲ ತೋರಿಸುವುದರ ಬದಲಾಗಿ ಹೊಸತಾಗಿ ಹಾಡು ಮಾಡುವುದರ ಮೂಲಕ ವಿಶಿಷ್ಟರೀತಿಯಲ್ಲಿ ತಮ್ಮ ತಂಡದ ಪರವಾಗಿ ನಿಂತಿದ್ದಾರೆ.

kannada cinema actor supports Ipl rcb team vcs
Author
Bangalore, First Published Sep 22, 2020, 9:19 AM IST

ಸಲಗ ತಂಡದ ಸ್ಪೆಷಲ್‌ ಟೀಸರ್‌

‘ಸಲಗ’ ಚಿತ್ರತಂಡ ‘ಆಲ್‌ವೇಸ್‌ ಆರ್‌ಸಿಬಿ’ ಎನ್ನುವ ಸ್ಪೇಷಲ್‌ ಟೀಸರ್‌ ಬಿಡುಗಡೆ ಮಾಡಿದೆ. ಇದರಲ್ಲಿ ಡಾಲಿ ಧನಂಜಯ್‌ ಮತ್ತು ದುನಿಯಾ ವಿಜಯ್‌ ಮುಖ್ಯವಾಗಿ ಕಾಣಿಸಿಕೊಂಡಿದ್ದು, ಆರ್‌ಸಿಬಿ ತಂಡಕ್ಕೆ ಶುಭಕೋರಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಸಲಗ ಚಿತ್ರತಂಡ ವಿಶೇಷ ಪೋಸ್ಟರ್‌ ಮಾಡಿ ಟೀಮ್‌ ಆರ್‌ಸಿಬಿಗೆ ಆಲ್‌ ದಿ ಬೆಸ್ಟ್‌ ಹೇಳಿದ್ದರು.

IPL 2020: ಚಹಾಲ್ ಸ್ಪಿನ್ ಮೋಡಿಗೆ SRH ತಬ್ಬಿಬ್ಬು, RCBಗೆ ಸಿಕ್ತು ಗೆಲುವು!

kannada cinema actor supports Ipl rcb team vcs

ಯಲ್ಲೋಬೋರ್ಡ್‌ ತಂಡದ ಕನ್ನಡ ಆ್ಯಂಥಮ್‌

ಆರ್‌ಸಿಬಿ ತಂಡ ಕನ್ನಡ ಹಿಂದಿ ಮತ್ತು ಇಂಗ್ಲಿಷ್‌ ಒಟ್ಟಾಗಿಸಿ ಮಾಡಿದ್ದ ಹಾಡಿನ ಸಾಹಿತ್ಯ ಬದಲಾಯಿಸಿ ಕನ್ನಡದಲ್ಲಿಯೇ ಸಾಹಿತ್ಯ ಬರೆದು ಆರ್‌ಸಿಬಿಗೆ ಕನ್ನಡ ಆ್ಯಂಥಮ್‌ ಅನ್ನು ತಯಾರು ಮಾಡಿದೆ ‘ಯಲ್ಲೋ ಬೋರ್ಡ್‌’ ಚಿತ್ರತಂಡ. ‘ಗೋಲ್ಡನ್‌ ಬಾಯ್‌್ಸ ಬಂದ್ರೂ ಬೋಲ್ಡ್‌ ಆಗಿ, ಚಾಲೆಂಜ್‌ ಮಾಡೋಕೆ ರೆಡಿಯಾಗಿ’ ಎನ್ನುವ ಹಾಡು ಆರ್‌ಸಿಬಿ ಅಭಿಮಾನಿಗಳ ಮನಗೆದ್ದಿದೆ. ಆದ್ವಿಕ್‌ ಸಾಹಿತ್ಯ ಮತ್ತು ಸಂಗೀತ, ಗಿರಿ ಮಹೇಶ್‌ ಸಂಕಲನ, ದಿ ಬಿಗ್‌ ಲಿಟಲ್‌ ತಂಡದ ನೇತೃತ್ವದಲ್ಲಿ ಈ ಹಾಡು ಬಿಡುಗಡೆಗೊಂಡಿದೆ. ‘ಆರ್‌ಸಿಬಿ ಆಡಳಿತ ಹಿಂದಿ, ಇಂಗ್ಲಿಷ್‌ನಲ್ಲಿ ಬಿಡುಗಡೆ ಮಾಡಿರುವ ಹಾಡಿನ ಸಾಹಿತ್ಯ ಬದಲಾಯಿಸಿ ಕನ್ನಡ ಸಾಹಿತ್ಯ ಸೇರಿಸಬೇಕು ಎಂದು ನಿರ್ಧಾರ ಮಾಡಿ ಈ ಹಾಡು ಮಾಡಿದ್ದೇವೆ, ಇದನ್ನು ಈಗಾಗಲೇ ಆರ್‌ಸಿಬಿ ತಂಡಕ್ಕೆ ಕಳಿಸಿ, ಅವರಿಂದ ಫೀಡ್‌ಬ್ಯಾಕ್‌ಗೆ ಕಾಯುತ್ತಿದ್ದೇವೆ’ ಎನ್ನುತ್ತಾರೆ ‘ಯಲ್ಲೋ ಬೋರ್ಡ್‌’ ನಿರ್ದೇಶಕ ತ್ರಿಲೋಕ್‌ ರೆಡ್ಡಿ.

 

ಅಣು ಅಣುವಲಿ ಆರ್‌ಸಿಬಿ

ಹೈದಾ ಸ್ಟುಡಿಯೋ ಮೂಲಕ ಮಾಧುರಿ ಪರಶುರಾಮ್‌ ಅವರು ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳಾದ ವಿಜಯ ರಾಘವೇಂದ್ರ, ಶ್ರೀನಿ, ಪ್ರಣೀತಾ ಸುಭಾಷ್‌, ಅದಿತಿ ಪ್ರಭುದೇವ, ಅಮೃತ ಅಯ್ಯಂಗಾರ್‌, ಸಂಜನಾ ಆನಂದ್‌, ವಿಕ್ಕಿ, ಪ್ರಭು ಮುಂಡ್ಕೂರ್‌ ಅವರನ್ನು ಸೇರಿಸಿಕೊಂಡು ‘ಅಣು ಅಣುವಲಿ ಆರ್‌ಸಿಬಿ, ಕಣ ಕಣದಲಿ ಆರ್‌ಸಿಬಿ, ಮನ ಮನದಲೂ ಆರ್‌ಸಿಬಿ’ ಎನ್ನುವ ವಿಡಿಯೋ ಸಾಂಗ್‌ ಬಿಡುಗಡೆ ಮಾಡಿದ್ದಾರೆ. ಅನಿರುದ್‌್ಧ ಶಾಸ್ತ್ರಿ ಸಂಗೀತ ನೀಡಿ, ಸಾಹಿತ್ಯ ಬರೆದಿದ್ದಾರೆ. ಮದ್ವೇಶ್‌ ಭಾರದ್ವಾಜ್‌, ಅನಿರುದ್‌್ಧ ಶಾಸ್ತ್ರಿ, ಮೈತ್ರಿ ಅಯ್ಯರ್‌ ದನಿಯಾಗಿದ್ದಾರೆ. ಇವರ ಈ ಕಾರ್ಯಕ್ಕೆ ‘ತ್ರಿಕೋನ’, ‘ಫ್ಯಾಮಿಲಿ ಪ್ಯಾಕ್‌’, ‘ಸಲಗ’, ‘ಪ್ರಾರಂಭ’ ಚಿತ್ರತಂಡಗಳು ನೆರವಾಗಿ ನಿಂತಿವೆ.

Follow Us:
Download App:
  • android
  • ios