ವಿವಿಧ ರಾಜ್ಯಗಳಲ್ಲಿ ಕನ್ನಡ ಸಿನಿ ಪ್ರೇಮಿಗಳು ಜೂನಿಯರ್ ಚಿರುನನ್ನು ಬರ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಚೆನ್ನೈನಲ್ಲಿ ನೆಲೆಸಿರುವ ನಟ ಅರ್ಜುನ್ ಸರ್ಜಾ ಮತ್ತು ಕುಟುಂಬ ನಿನ್ನೆ ಬೆಂಗಳೂರಿಗೆ ಆಗಮಿಸಿ ಮೇಘನಾ ಹಾಗೂ ಜೂನಿಯರ್‌ನನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ. 3-4 ತಿಂಗಳುಗಳ ಬಳಿಕ ಮಾಧ್ಯಮದ ಎದುರು ಮಾತನಾಡಿದ್ದಾರೆ.

'ಚಿರು, ನಿನ್ನ ಹಾಗೆ ನಮ್ಮ ಮಗುವನ್ನು ಬೆಳೆಸ್ತೀನಿ' ಮೇಘನಾ ಭಾವುಕ ಮಾತು, ವಿಡಿಯೋ ವೈರಲ್ 

ಅರ್ಜುನ್ ಸರ್ಜಾ ಮಾತುಗಳು:

'ಮೇಘನಾ ಸೀಮಂತ ಸಮಯದಲ್ಲಿ ನಾನು ಹಾಗೆ ಸುಮ್ಮನೆ ಹಾರ್ಟಿಲಿ ವೆಲ್ಕಂ  ಜೂನಿಯರ್ ಚಿರು ಅಂತ ಹಾಡಿ ಹೇಳಿದ್ವಿ. ಆದರೆ ನಿಜಕ್ಕೂ ನಮಗೂ ಗೊತ್ತಿರಲಿಲ್ಲ ಗಂಡು ಮಗುವಾಗುತ್ತದೆ ಎಂದು.  ಕಳೆದ 3-5 ತಿಂಗಳು ನಮ್ಮ ಮನೆಯಲ್ಲಿ ಪ್ರತಿಯೊಬ್ಬರಿಗೂ ಜೀರ್ಣಿಸಿಕೊಳ್ಳಲಾಗದಷ್ಟು ನೋವಾಗಿದೆ. ಈಗ ಎಲ್ಲರ ಮುಖದಲ್ಲಿ ಕಾಂತಿ ಬಂದಿದೆ ಸಣ್ಣ ನಗು ಕಾಣಿಸಿಕೊಂಡಿದೆ. ಈ ಸಮಯದಲ್ಲಿ ಚಿರು ಇರಬೇಕಿತ್ತು ತುಂಬಾನೇ ಸಂಭ್ರಮ ಪಡುತ್ತಿದ್ದ. 36 ವರ್ಷಗಳ ಹಿಂದೆ ನಾನು ಶೂಟಿಂಗ್ ಅರ್ಧಕ್ಕೆ ಬಿಟ್ಟು ಚಿರು ನೋಡಲು ಬಂದಿದ್ದೆ, ನನ್ನ ತಾಯಿ ಕರೆ ಮಾಡಿ ಬಾರೋ ನಿನ್ನ ತಂಗಿಗೆ ಗಂಡು ಮಗುವಾಗಿದೆ ಎಂದು ಹೇಳಿದ್ದರು. ಈಗ ಅವನ ಮಗನನ್ನು ನೋಡಲು ಬಂದಿರುವೆ. ಬಹುಷಃ ಇನ್ನು 20 ವರ್ಷಗಳಲ್ಲಿ ನಾನೇ ನಮ್ಮ ಜೂನಿಯರ್‌ನನ್ನು ಲಾಂಚ್ ಮಾಡ್ತಿನಿ' ಎಂದು ಅರ್ಜುನ್ ಸರ್ಜಾ ಮಾತನಾಡಿದ್ದಾರೆ.

ಆಶಾ ರಾಣಿ ಹಾಗೂ ಪುತ್ರಿ ಐಶ್ವರ್ಯ ಮಾತುಗಳು:

ತುಂಬಾನೇ ಖುಷಿ ಆಗುತ್ತಿದೆ. ಮಗು ಬಂದಿರೋದು ಎಲ್ಲರಿಗೂ ಸಂತೋಷ. ನಾನು ಅಜ್ಜಿ ಆಗಿರೋ ಸಂಭ್ರಮ ಹೇಳೋಕೆ ಆಗಲ್ಲ' ಎಂದು ಆಶಾ ರಾಣಿ, ಅರ್ಜುನ್ ಸರ್ಜಾ ಪತ್ನಿ ಮಾತನಾಡಿದ್ದಾರೆ.

ಜೂ. ಚಿರುಗೆ ವೆಲ್ಕಂ ಎಂದ ಜಗ್ಗೇಶ್; ಎಲ್ಲವೂ ರಾಯರ ಆಶೀರ್ವಾದ!

'ನಾನು ಹೆಣ್ಣು ಮಗು ಆಗಬಹುದು ಎಂದು ಗೆಸ್ ಮಾಡಿದ್ದೆ ಯಾಕಂದ್ರೆ ಮೇಘನಾ ತುಂಬಾನೇ ಮುದ್ದಾಗಿ ಕಾಣಿಸುತ್ತಿದ್ದರು. ಈಗ ಮಗು ನೋಡಿಕೊಂಡು ಬಂದೆ ತುಂಬಾನೇ ಮುದ್ದಾಗಿದ್ದಾನೆ. ಚಿರಂಜೀವಿಯಂತೆಯೇ ಕಾಣಿಸುತ್ತಾರೆ. ಮೂಗು ಮಾತ್ರ ಸೇಮ್ ಚಿರುನಂತೆಯೇ ಇದೆ. ನಮ್ಮೆಲ್ಲರಿಗೂ ತುಂಬಾನೇ ಖುಷಿಯಾಗಿದೆ' ಎಂದು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಮಾತನಾಡಿದ್ದಾರೆ. 

ಚಿರು ಮಗು ನೋಡಲು ಬಂದ ಸೃಜನ್ ಹಾಗೂ ಗಿರಿಜಾ  ಲೋಕೇಶ್ 

ಸರ್ಜಾ ಹಾಗೂ ಸುಂದರ್ ರಾಜ್‌ ಕುಟುಂಬಕ್ಕೆ ತುಂಬಾನೇ ಆತ್ಮೀಯರಾದ ಲೋಕೇಶ್‌ ಕುಟುಂಬವೂ ಆಸ್ಪತ್ರೆಗೆ ಭೇಟಿ ನೀಡಿದರು. ಪುಟ್ಟ ಕಂದಮ್ಮನನ್ನು ನೋಡಿ ಗಿರಿಜಾ ಲೋಕೇಶ್ ಸಂಭ್ರಮಿಸಿದ್ದಾರೆ. ಮಗುವಿನ ಮೂಗು ಚಿರಂಜೀವಿ ರೀತಿಯೇ ಇದೆ, ನನ್ನ ಗೆಳೆಯ ಮತ್ತೆ ಹುಟ್ಟಿಬಂದ ಎಂದು ಸೃಜನ್ ಮಾತನಾಡಿದ್ದಾರೆ.

"