ಅದಿತಿ ಮದುವೆ ಆಗುತ್ತಿರುವ ಹುಡುಗ ಯಾರು? ಎಷ್ಟು ವರ್ಷಗಳಿಂದ ಗೊತ್ತು? ಎಷ್ಟು ಲವ್ ಮಾಡಿದ್ದಾರೆ? ಮೊದಲ ಬಾರಿ ಪರ್ಸನಲ್‌ ಲೈಫ್‌ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ...

ಸ್ಯಾಂಡಲ್‌ವುಡ್‌ ಶಾನೆ ಟಾಪ್‌ ಆಗಿರುವ ಹುಡುಗಿ ಅದಿತಿ ಪ್ರಭುದೇವ ಇದೀಗ ಟೇಕನ್‌ ಎಂದು ತಿಳಿಯುತ್ತಿದ್ದಂತೆ ಹುಡುಗರ ಹಾರ್ಟ್‌ ಬ್ರೇಕ್ ಆಗಿದೆ. ಬಾಗ್ಲು ತೆಗೆ ಮೇರಿ ಜಾನ್‌ ಎಂದು ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡುತ್ತಿರುವ ಚೆಲುವೆ, ಮೊದಲ ಬಾರಿ ತಮ್ಮ ಪ್ರೀತಿ, ಮದುವೆ ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಅದಿತಿ ಮಾತು:
'ನಾನು ಯುಟ್ಯೂಬ್ ಶುರು ಮಾಡಿದ್ದೀನಿ ಆದರೆ ಈ ರೇಂಜ್‌ಗೆ ಥಂಬ್‌ನೇಲ್ ಹಾಕುವುದಿಲ್ಲ. ಏಳೆಂಟು ವರ್ಷದ ಲವ್ ಅಂತೆ, ಸದ್ಯ ಎರಡು ಮಕ್ಕಳು ಮಾಡಿಲ್ಲ ನನಗೆ. ಇಲ್ಲ ಅಂದ್ರೆ ಮಕ್ಕಳನ್ನೂ ಮಾಡಿರುತ್ತಿದ್ದರು. ಅವರಿಗೆ ನಾಮಕರಣವನ್ನೂ ಮಾಡಿ ಅವರಿಗೆ ಹೆಸರಿಟ್ಟು ಓ ಅದಿತಿಗೆ ಮದುವೆ ಆಗಿ ಮಕ್ಕಳಿದ್ವಂತೆ. ಅಮೇಲೆ ಸಿನಿಮಾಗೆ ಬಂದ್ರು ಅಂತಾನೂ ಹೇಳ್ತಿದ್ರು. ನಿಜವಾಗ್ಲೂ ನಾವು ಅಕ್ಟೋಬರ್‌ನಲ್ಲಿ ಭೇಟಿ ಮಾಡಿದ್ದು. ಫ್ಯಾಮಿಲಿ ಸ್ನೇಹಿತರೊಬ್ಬರು ಭೇಟಿ ಮಾಡಿಸಿದ್ದು. ನಮ್ಮ ಮನೆಯವರಿಗೆ ಇಷ್ಟ ಆಯ್ತು. ಅವರ ಮನೆಯವರಿಗೂ ಇಷ್ಟ ಆಯ್ತು. ಎಲ್ಲಾ ನೋಡಿ, ಮಾಡಿ ಆದ್ಮೇಲೆ ಓಕೆ ಆಗಿರುವುದು,' ಎಂದು ಅದಿತಿ ಗಾಳಿ ಮಾತುಗಳ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

'ಮೂರು ತಿಂಗಳು ಇರ್ಲಿ, ಮೂರು ವರ್ಷ ಅಂತ ಹೇಳ್ತಾರೆ. ಅಂದ್ರೆ ಏಳು ವರ್ಷ ಅಂತಾರೆ. ಹಾಗೆಲ್ಲಾ ಏನೂ ಇಲ್ಲ. ಇದು ಸಂಪೂರ್ಣವಾಗಿ ಪೋಷಕರು ನೋಡಿ ಮಾಡುತ್ತಿರುವ ಅರೇಂಜ್ಡ್‌ ಮ್ಯಾರೇಜ್. ಅವರು ಕಡೆಯಿಂದ ಏನು ಅಂತ ನೀವು ಅವ್ರನ್ನೇ ಕೇಳಬೇಕು. ಈಗ ನಾನು ಅವರನ್ನು ಇಷ್ಟ ಪಡ್ತೀದಿನಿ. ಎಂಗೇಜ್‌ಮೆಂಟ್ ಆದ್ಮೇಲೆ ಲವ್ ಮಾಡಲೇಬೇಕು,' ಎಂದು ಅದಿತಿ ಖಾಸಗಿ ಯೂ ಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Aditi prabhudeva Youtube earnings ಯುಟ್ಯೂಬ್‌ ಹಣದಲ್ಲಿ EMI ಕಟ್ಟುತ್ತಿರುವ ನಟಿ

'ಅದಿತಿ ಅವರು 40 ಸಾವಿರ ಸಂಬಳ ಇದ್ರೆ ಸಾಕು ಅಂತ ಹೇಳುತ್ತಿದ್ರು. ಈಗ ನೋಡಿದರೆ ಬ್ಯುಸಿನೆಸ್ ಮ್ಯಾನ್‌ನ ಮದುವೆ ಆಗ್ತಿದ್ದಾರೆ. ಹೀರೋಯಿನ್‌ಗಳು ಬರೀ ಡೈವ್‌ಗಳು ಅಂತಾರೆ. ಅಲ್ಲ ನನಗೆ ಮದುವೆ ಅಂದ್ರೆ ಯಾರನ್ನಾದರೂ ಇಷ್ಟ ಪಟ್ಟು ಮದುವೆ ಆಗಬಹುದಿತ್ತು. ಆದರೆ ನನ್ನ ತಲೆಯಲ್ಲಿ ಏನಿತ್ತು ಅಂದ್ರೆ ಒಂದು ಗುಂಪಿನ ಜನ ನನ್ನ ನೋಡ್ತಾರೆ. ನನ್ನ ಫಾಲೋ ಮಾಡ್ತಾರೆ. ಯಾರಿಗೂ ಕೂಡ ನಾನು ತೆಗೆದುಕೊಳ್ಳುವ ನಿರ್ಧಾರ ಅಸಹ್ಯ ಅನಿಸಬಾರದು, ಆಭಾಸ ಎನಿಸಬಾರದು. ಈಗ ನಾನು ಹೇಳುವುದು, ಮುಂದೆ ನಾನು ಭೂಮಿ ತಾಯಿ ಜೊತೆ ಕೆಲಸ ಮಾಡ್ತೀನಿ. ಪ್ರಾಣಿಗಳ ಜೊತೆ ಒಡನಾಟ ಇಟ್ಕೊಳ್ತೀನಿ. ನನ್ನ ಜೀವನ ಅದೇ. ಆ ತರ ಮನಸ್ಸು ಎಷ್ಟು ಜನರಿಗೆ ಇರುತ್ತೆ? ಬೆಂಗಳೂರು ಬಿಟ್ಟು ಊರಿಗೆ ಹೋಗಿ, ಪ್ರಾಣಿ ನೋಡ್ಕೊಳ್ತೀನಿ. ಅದು ಇದು ಅಂದ್ರೆ, ಯಾವ ಹುಡುಗ ಒಪ್ಪಿಕೊಳ್ಳುತ್ತಾರೆ?' ಎಂದು ಅದಿತಿ ಪ್ರಶ್ನೆ ಮಾಡಿದ್ದಾರೆ.

'ನಾನು ಆಯ್ಕೆ ಮಾಡುವ ಹುಡುಗನಲ್ಲಿ ಈ ರೀತಿ ಗುಣ ಇರಬೇಕು ಎಂದು ಹೇಳಿ ನಾನು ಹುಡುಕುವುದಕ್ಕೆ ಸಮಯ ತೆಗೆದುಕೊಂಡೆ. ಎಲ್ಲಾ ಹುಡುಗರೂ ಅಂತ ನಾನು ಹೇಳುವುದಿಲ್ಲ. ಆದರೆ ನನ್ನ ಮೆಂಟಾಲಿಟಿಗೆ ಹೊಂದುವುದಿಲ್ಲ. ಆದರೆ ಈಗ ನಾನು ಒಪ್ಪಿಕೊಂಡಿರುವ ಹುಡುಗ ಸಂಪೂರ್ಣವಾಗಿ plantationನಲ್ಲಿ ಇದ್ದಾರೆ. ಏನೇ ಬ್ಯುಸಿನೆಸ್ ಮಾಡುತ್ತಿದ್ದರೂ, ಅವರ ಗಮನ ಅದರ ಮೇಲಿದೆ. ಸುಮ್ಮನೆ ಫಾರಿನ್ ಹುಡುಗನ ಮದ್ವೆ ಆಗಿ ಅಲ್ಲಿಗೆ ಹೋಗಿ...ನನಗೆ ಆ ಮನಸ್ಥಿತಿ ಇಲ್ಲ. ನನಗೆ ನನ್ನ ಕರ್ನಾಟಕದಲ್ಲೇ ಇರಬೇಕು. ಇಲ್ಲಿ ಅಕ್ಕಿನೋ, ಕಾಫಿನೋ ಬೆಳೆದುಕೊಂಡು ಇರಬೇಕು ಅಂತ ಆಸೆ. ಅದಕ್ಕೆ ಅವರನ್ನು ಒಪ್ಪಿಕೊಂಡಿರುವುದು' ಎಂದಿದ್ದಾರೆ ಅದಿತಿ.