ನಿನ್ನ ಬಿಟ್ಟು ಬದಕಲು ಯಾಕೆ ಕಲಿಸಲಿಲ್ಲ ಅಮ್ಮ?; ಭಾವುಕ ಪತ್ರ ಬರೆದ ನಟಿ ವಿಜಯ್‌ ಲಕ್ಷ್ಮಿ ಸಿಂಗ್!

ತಾಯಿ ಪ್ರತಿಮಾ ದೇವಿ ಅಗಲಿ 15 ದಿನಗಳು ಕಳೆದರೂ ನೋವಿನಿಂದ ಹೊರ ಬರಲಾಗos ನಟಿ ವಿಜಯ್ ಲಕ್ಷ್ಮಿ ಸಿಂಗ್ ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ಅಮ್ಮ ಅಗಲಿದ ಘಟನೆ ವಿವರಿಸಿದ್ದಾರೆ...

Kannada Actress vijaylakshmi singh pens down emotional letter to mother prathima devi vcs

ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಪ್ರತಿಮಾ ದೇವಿ ವಯೋ ಸಹಜ ಕಾಯಿಲೆಯಿಂದ ಏಪ್ರಿಲ್ 6ರಂದು ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದರು. 88 ವರ್ಷದ ಪ್ರತಿಮಾ ದೇವಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡು, ಇಳೀ ವಯಸ್ಸಿನಲ್ಲೂ ಇಂಡಿಪೆಂಡೆಂಟ್ ಆಗಿದ್ದರು. ಪ್ರತಿಮಾ ದೇವಿ ಕೊನೆ ಕ್ಷಣಗಳು ಹೇಗಿತ್ತು ಎಂದು ಪುತ್ರಿ ವಿಜಯ್‌ ಲಕ್ಷ್ಮಿ ಬರೆದುಕೊಂಡಿದ್ದಾರೆ.

ವಿಜಯ್‌ ಲಕ್ಷ್ಮಿ ಪೋಸ್ಟ್:
'ನನ್ನ ಮುದ್ದು "ಅಮ್ಮ". ಇಂದಿಗೆ ನೀನು ನಮ್ಮನ್ನ ಅಗಲಿ 15 ದಿನಗಳಾಯಿತು. ನಾನು ಹುಟ್ಟಿದಾಗಿನಿಂದ ನಿನ್ನ ಬಿಟ್ಟು ಬೇರೆ ಇದ್ದಿಲ್ಲ. ಈಗ ನೀನಿರದ ಈ ಜಗತ್ತು ನನಗೆ ಕಷ್ಟ ಎನಿಸುತ್ತಿದೆ. ಎಷ್ಟು ವಿಷಯ ನಿಂಗೆ ಹೇಳಬೇಕು, ಕೆಲವು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಬೇಕು ಅನಿಸುತ್ತೆ, ಆದರೆ ಎಲ್ಲ ವಿಷಯ ಜೀವನದಲಿ ನನಗೆ ಕಲಿಸಿದೆ, ಆದರೆ ನಿನ್ನ ಬಿಟ್ಟು ಬದಕಲು ಯಾಕೆ ಕಲಿಸಲಿಲ್ಲ? ಅಮ್ಮ ಆ ದಿನ ಬಾಲ್ಕನಿಯಲ್ಲಿ ಕೂತು ಮುಂಜಾನೆ ಕಾಫಿ ಸವಿಯುತ್ತ ನೀನು ನಿನ್ನ ಬರ್ತ್ ಡೇ ಸೆಲಬ್ರೇಷನ್ ಇನ್ನೂ 3 ದಿನಗಳಲ್ಲಿ ಅಂತ ರೆಡಿ ಆಗುತ್ತಿದೆ. ಮೊಮ್ಮಕ್ಕಳ ಜೊತೆ ಮೆನು ಡಿಸ್ಕಸ್ ಮಾಡಿದ್ದು, ಕಣ್ಣಿಗೆ ಕಟ್ಟಿದ ಹಾಗಿದೆ. ನೀನು ಸ್ನಾನ ಮಾಡಿ ದೇವರ ಎಲ್ಲ ಫೋಟೋಗಳಿಗೂ ದಾಸವಾಳ ಮುಡಿಸಿ, ದೀಪ ಬೆಳಗಿಸಿ ಸುಮಾರು ಹೊತ್ತು ಮಂತ್ರ ಜಪಿಸುತ್ತ ಕುಳಿತಿದ್ದೆ. ನಂತರ ನಾನೇ ಬಂದು ಹೇಳಿದೆ ಜಾಸ್ತಿ ಅಡುಗೆ ಬೇಡ ಅಂತ. ಇಲ್ಲ ಬರೀ ಸಾರು, ಪಲ್ಯ ಮಾಡ್ತೀನಿ ಅಂದೆ, ಸರಿ ಅಂತ ನಾನು ರೂಮಿನಲ್ಲಿ ಕೆಲಸ ಮುಂದುವರೆಸಿದೆ. ಸುಮಾರು 1.30ಕ್ಕೆ ಮತ್ತೆ ನಿನ್ನ ಬಳಿ ಬಂದು ಹರಿಣಿ ಆಂಟಿಗೆ ಫೋನ್ ಮಾಡ್ಬೇಕು ಅಂದಾಗ ಟೀ ಟೈಮ್ ಸಂಜೆ ಮಾಡೋಣ ಅಂದೆ. ಆಗ ನೀನು ಇಂಗು ಒಗ್ಗರ್ಣೆ ಕೊಡ್ತಾ ಇದ್ದೆ. ಅದೇ ನಾನು ನಿನ್ನನ್ನು  ಕೊನೆಬಾರಿ ನೇರವಾಗಿ ಮಾತನಾಡಿದ್ದು. ನಂತರ ರೂಂನಿಂದ ಬಂದವಳು ನಿನ್ನ ನೋಡಿದಾಗ ಹಾಲ್‌ನಲ್ಲಿ ಇದ್ದ ಸೋಫಾ ಮೇಲೆ 2 ದಿಂಬುಗಳನ್ನು ಇಟ್ಟು ಮಲಗಿದ್ದೆ. ಯಾಕೆ ಮಧ್ಯಾಹ್ನ ಸದಾ ಬಹಾರ್‌ನಲ್ಲಿ ಸಿನೆಮಾ ನೋಡುತಿಲ್ಲವಲ್ಲ ಎಂದೆನಿಸಿತು. ಫ್ಯಾನ್ ಹಾಕಿ ಸೆಕೆ ಜಾಸ್ತಿ ಅಂತ ಮಲಗಿದ್ದಾರೇನೊ ಅನಿಸಿತ್ತು. ಸರಿ ಮಲಗಲಿ 15 ನಿಮಿಷ ಬಿಟ್ಟು ಎಬ್ಬಿಸೋಣ ಅಂದುಕೊಂಡೆ ಆದರೆ ಅಮ್ಮ ಆ ಸಮಯದಲ್ಲಿ ನೀನು ನಿನ್ನ ಕೊನೆ ಪ್ರಯಾಣಕ್ಕೆ ಸಿದ್ದವಾಗಿದ್ದೆ, ಅಂತ ಗೊತ್ತಾಗಲಿಲ್ಲ ಸ್ವಿಚ್ ಆನ್ /ಆಫ್ ಆಗುವುದರಲ್ಲಿ ನೀನೇನೂ ಮಾಡಲು ಆಗೋಲ್ಲ. ಆದರೂ, ಅದು ಹೇಗೆ ? ಸಿನೆಮಾದಲ್ಲಿ ಸ್ಟಾಪ್ ಬ್ಲಾಕ್‌ಲಿ ಮಾಯವಾದಂತೆ ತಿಳಿದವರು ಹೇಳ್ತಾರೆ ಶರಣರನ್ನು ಮರಣದಲ್ಲಿ ಕಾಣು ಅಂತಾರೆ. ಆದರೆ ಹೀಗೆ ತಕ್ಷಣ ನಮ್ಮನ್ನ ಬಿಟ್ಟು ಹೋದರೆ ನಾನು ಹೇಗೆ ಬಾಳಲಿ? ಸಂಕಟ ತಡೆಯಲಾರೆ. ಕಾಲ ಮರೆಸುತ್ತೆ ಅಂತಾರೆ, ಇಲ್ಲ ಇದು ನಿರಂತರ.

Kannada Actress vijaylakshmi singh pens down emotional letter to mother prathima devi vcs

ನಿನ್ನಷ್ಟು ಡಿಸಿಪ್ಲಿನ್, ಜೀವನ ಉತ್ಸಾಹ ನನ್ನಲ್ಲಿ ಇಲ್ಲ. ಆದ್ರೆ ಇನ್ನೂ ಮುಂದೆ ಕಲಿತೀನಿ, ನಿನ್ನ ಹಾಗೆ ಬದುಕುವುದನ್ನು. ಪ್ರಾಮೀಸ್! ನಿನ್ನನ್ನು ನನ್ನಲ್ಲಿ ನೋಡುವಂತೆ ಮಾಡ್ತೀನಿ. ಓಂ ಶಾಂತಿ ಪ್ರತಿಮಾ ದೇವಿ ಶಂಕರ್ ಸಿಂಗ್ 9.4.1933---6.4.2021' ಎಂದು ಬರೆದುಕೊಂಡಿದ್ದಾರೆ.

ಹಿರಿಯ ನಟಿ, ರಾಜೇಂದ್ರ ಸಿಂಗ್ ಬಾಬು ತಾಯಿ ಪ್ರತಿಮಾ ದೇವಿ ಇನ್ನಿಲ್ಲ 

ಫೋಟೋದಲ್ಲಿ ವಿಜಯ್ ಲಕ್ಷ್ಮಿ ಹಾಗೂ ತಾಯಿ ಪ್ರತಿಮಾ ದೇವಿ ಒಂದೇ ಬಣ್ಣದ ಸೀರಿ ತೊಟ್ಟಿದ್ದಾರೆ. 'ಅಮ್ಮ ನನಗೆ ಅಳು ತಡೆದುಕೊಳ್ಳಲು ಆಗುತ್ತಿಲ್ಲ. ಆ ದಿನ ಪದೇ ಪದೇ ಜ್ಞಾಪ ಬರುತ್ತಿದೆ' ಎಂದು ಪ್ರತಿಮಾ ದೇವಿ ಕಿರಿಯ ಮೊಮ್ಮಗಳು ಕಾಮೆಂಟ್ ಮಾಡಿದ್ದಾರೆ.  ಪ್ರತಿಮಾ ದೇವಿ ಅವರ ಪುಣ್ಯ ದಿನದಂದು ಮೊಮ್ಮಕಳು ವೈನಿಧಿ, ವೈ ಸಿರಿ ಹಾಗೂ ವೈಭವಿ ಅಜ್ಜಿಯ ಫೇವರೆಟ್‌ ಸೀರೆ ಧರಿಸಿದ್ದರು.

 

Latest Videos
Follow Us:
Download App:
  • android
  • ios