Asianet Suvarna News Asianet Suvarna News

Honorary Doctorate to Sudharani: ಕಲಾ ಕ್ಷೇತ್ರದ ಸೇವೆಗೆ ಗೌರವ ಪ್ರಶಸ್ತಿ ಪಡೆದ ನಟಿ

ನಿಮ್ಮೆಲ್ಲರೊಂದಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನಿಂದ ನನಗೆ ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಿದೆ ಎಂದು ನಟಿ ಸುಧಾರಾಣಿ ತಿಳಿಸಿದ್ದಾರೆ.

Kannada Actress Sudharani Awarded Honorary Doctorate In Arts gvd
Author
Bangalore, First Published Dec 2, 2021, 7:51 PM IST

12ನೇ ವಯಸ್ಸಿನಲ್ಲಿಯೇ 'ಆನಂದ್‌' (Anand) ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ದಶಕಗಳ ಕಾಲ ಚಿತ್ರರಂಗವನ್ನು ಆಳಿದ ನಟಿ ಸುಧಾರಾಣಿಯವರಿಗೆ (Sudharani) ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂತೋಷವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ 'ನಿಮ್ಮೆಲ್ಲರೊಂದಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನಿಂದ ನನಗೆ ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ( Honorary Doctorate) ನೀಡಿದೆ' ಎಂದು ಬರೆದುಕೊಂಡು ಡಾಕ್ಟರೇಟ್ ಸ್ವೀಕರಿಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಸ್ಯಾಂಡಲ್‍ವುಡ್‍ನ ಎವರ್ ಗ್ರೀನ್ ಹೀರೋಯಿನ್ ಸುಧಾರಾಣಿ ಅವರು 1978ರಲ್ಲಿ ಬಿಡುಗಡೆಯಾದ 'ಕಿಲಾಡಿ ಕಿಟ್ಟು' (Kiladi Kittu) ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿರಂಗಕ್ಕೆ ಪಾದರ್ಪಣೆ ಮಾಡಿದರು. ಹಾಗೂ ಹಲವಾರು ಜಾಹಿರಾತುಗಳಲ್ಲಿ ಸುಧಾರಾಣಿ ಕಾಣಿಸಿಕೊಂಡಿದ್ದರು. 12ನೇ ವಯಸ್ಸಿನಲ್ಲಿ ಸಿಂಗೀತಂ ಶ್ರೀನಿವಾಸ ರಾವ್ (Singeetam Srinivasa Rao) ನಿರ್ದೇಶನದ ಶಿವರಾಜ್‍ಕುಮಾರ್ (ShivaRajkumar) ಅವರ ಮೊದಲ ಸಿನಿಮಾ 'ಆನಂದ್‍' ಚಿತ್ರಕ್ಕೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 1986ರಲ್ಲಿ ಬಿಡುಗಡೆಯಾದ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತ್ತು.

ಕನ್ನಡ ಚಿತ್ರರಂಗದ ಗಾರ್ಡಿಯನ್ ಏಂಜಲ್‌ ಲಕ್ಷ್ಮಿದೇವಿ ಭೇಟಿ ಮಾಡಿದ 3 ಬೆಸ್ಟ್‌ ಫ್ರೆಂಡ್ಸ್!

'ಆನಂದ್' ಸಿನಿಮಾ ಯಶಸ್ವಿಯಾದ ಬಳಿಕ ಶಿವರಾಜ್ ಕುಮಾರ್ ಜೊತೆಗೆ 'ಮನಮೆಚ್ಚಿದ ಹುಡುಗಿ', 'ಸಮರ', 'ರಣರಂಗ', 'ಆಸೆಗೊಬ್ಬ ಮೀಸೆಗೊಬ್ಬ' ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದರು. ಆ ಬಳಿಕ ನಟ ರಮೇಶ್‌ ಅರವಿಂದ್ (Ramesh Aravind) ಜೊತೆಗೂ ಸುಮಾರು ಎಂಟು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳಿಂದ ಜನಪ್ರಿಯ ಜೋಡಿ ಎನಿಸಿಕೊಂಡಿತು. ಹಾಗೂ ತಮಿಳಿನಲ್ಲಿ ಶಾಲಿ ಹೆಸರಿನಲ್ಲಿ ಸುಮಾರು 10 ಸಿನಿಮಾಗಳಲ್ಲಿ ಸುಧಾರಾಣಿ ನಟಿಸಿದ್ದಾರೆ. ನೂರಾರು ಸಿನಿಮಾಗಳಲ್ಲಿ ಈವರೆಗೆ ನಟಿಸಿರುವ ಸುಧಾರಾಣಿ ಈಗಲೂ ತಮ್ಮ ನಟನೆಯನ್ನು ಮುಂದುವರೆಸಿದ್ದಾರೆ. ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 'ಯುವರತ್ನ' (Yuvarathnaa) ಚಿತ್ರದಲ್ಲಿ ಪ್ರೊಫೆಸರ್ ಆಗಿ ಸುಧಾರಾಣಿ ಅಭಿನಯಿಸಿದ್ದರು. ಇದೀಗ ಶರಣ್ (Sharan) ಅಭಿನಯದ 'ಅವತಾರ ಪುರುಷ' (Avatar Purusha) ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

35 ವರ್ಷ ಚಿತ್ರರಂಗದಲ್ಲಿ ಇದ್ದೀನಿ ಅನ್ನೋದು ಖುಷಿ: ಸುಧಾರಾಣಿ

ಇನ್ನು, 'ಪಂಚಮ ವೇದ' ಮತ್ತು 'ಮೈಸೂರು ಮಲ್ಲಿಗೆ' ಚಿತ್ರಕ್ಕಾಗಿ ಸುಧಾರಾಣಿಯವರಿಗೆ ಎರಡು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ (Karnataka State Award) ಸಿಕ್ಕಿದೆ. 2000ನೇ ಸಾಲಿನಲ್ಲಿ 'ಸ್ಪರ್ಶ' (Sparsha) ಚಿತ್ರಕ್ಕೆ ಅತ್ಯುತ್ತಮ ನಟಿ ಫಿಲ್ಮ್‌ಫೇರ್‌ ಪ್ರಶಸ್ತಿ (Filmfare Award) ಪಡೆದುಕೊಂಡಿದ್ದಾರೆ. 2015ರಲ್ಲಿ 'ವಾಸ್ತು ಪ್ರಕಾರ' (Vastu Prakara) ಸಿನಿಮಾಗೆ ಅತ್ಯುತ್ತಮ ಪೋಷಕ ನಟಿಯಾಗಿ ಫಿಲ್ಮ್‌ಫೇರ್‌ ಪ್ರಶಸ್ತಿ (Filmfare Award) ಸಿಕ್ಕಿದೆ. ವಿಶೇಷವಾಗಿ ಸುಧಾರಾಣಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಹಲವಾರು ಫೋಟೋ ಮತ್ತು ವೀಡಿಯೋಗಳನ್ನು ಪೋಸ್ಟ್‌ ಮಾಡುತ್ತಿದ್ದು, ಇದೀಗ ಅವರಿಗೆ ಗೌರವ ಡಾಕ್ಟರೇಟ್ ಬಂದಿರುವ ಕುರಿತಾಗಿ ಸಂತಸವನ್ನು ಹಂಚಿಕೊಂಡಿದ್ದಾರೆ.
 

Follow Us:
Download App:
  • android
  • ios