ಸ್ಯಾಂಡಲ್‌ವುಡ್‌ ಮೂಗುತಿ ಸುಂದರಿ ನಟಿ ಶ್ರುತಿ ಹರಿಹರನ್‌ ಬಹಳ ದಿನಗಳ ನಂತರ ಬಣ್ಣದ ಲೋಕಕ್ಕೆ ಕಮ್‌ ಬ್ಯಾಕ್ ಮಾಡಿದ್ದಾರೆ. 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಶ್ರುತಿ  ತನ್ನ ಪ್ರತಿಭೆಯನ್ನು ಬೆಳ್ಳಿ ತೆರೆಗೆ ಮಾತ್ರ ಮೀಸಲಿಡದೆ ಸಾಕಷ್ಟು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

'ಮಗಳು ಜಾನಕಿ' ಫೋಟೋ ರಿವೀಲ್, ಹೀಗ್ ಕಾಣಿಸ್ತಾರೆ ಜೂ. ಶ್ರುತಿ!

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತಮ್ಮ ಕಿರುಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ.  'ಶೇಡ್ಸ್‌ ಆಫ್‌ ಎ ಕೈಟ್‌' ಎಂಬ ಶೀರ್ಷಿಕೆ ಇರುವ ಚಿತ್ರದ ಪೋಸ್ಟರ್ ಸಾಕಷ್ಟು ಕುತೂಹಲ ಹುಟ್ಟಿಸಿದೆ. ವಿವೇಕ್‌ ಜೋಸೆಫ್‌ ವರ್ಗೀಸ್‌ ಕಥೆಗೆ ಮೊಹಮ್ಮದ್‌ ನಿರ್ದೇಶನ ಮಾಡಲಿದ್ದಾರೆ.  ಚಿತ್ರದಲ್ಲಿ ಶ್ರುತಿ ಹರಿಹರನ್‌ ಜೊತೆ ಅವನಿ ಐಯ್ಯರ್‌, ವೀಣಾ ನಾಯರ್‌ ಹಾಗೂ ಗಿಲು ಕಾಣಿಸಿಕೊಳ್ಳಲಿದ್ದಾರೆ. ಕ್ರಿಸ್ಟಲ್‌ ಕ್ಲಿಯರ್ ಪಿಕ್ಚರ್ಸ್‌ ನಿರ್ಮಾಣದ ಈ ಕಿರುಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.

 

'ನಾತಿಚರಾಮಿ,'ಮನೆ ಮಾರಾಟಕಿದೆ' ಹಾಗೂ 'ಆದ್ಯಾ' ಶ್ರುತಿ ಅಭಿನಯಿಸಿದ ಕೊನೆ ಸಿನಿಮಾಗಳು. ಇದಾದ ನಂತರ ಮದುವೆ, ಮಗಳು ಎಂದು ಪರ್ಸನಲ್ ಲೈಫ್‌ನಲ್ಲಿ ತುಂಬಾನೇ ಬ್ಯುಸಿಯಾದರು.  ಶ್ರುತಿ ಅಭಿನಯಿಸಿದ್ದು ಕೆಲವೇ ಸಿನಿಮಾಗಳಾದರೂ ಸಾಕಷ್ಟು ಬೆಸ್ಟ್‌ ನಟಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.