ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಹೊತ್ತೊಯ್ದ ಸಿನಿಮಾ ಕೆಜಿಎಫ್‌. ಪ್ರಶಾಂತ್ ನೀಲ್ ನಿರ್ದೇಶನ, ರಾಕಿ ಬಾಯ್ ಅಭಿನಯ, ಭುವನ್ ಗೌಸ ಛಾಯಾಗ್ರಹಣ ಎಲ್ಲವೂ ಮ್ಯಾಜಿಕ್ ಮಾಡಿದ್ದವು. ಚಿತ್ರದಲ್ಲಿ ತುಂಬಾ ಸರಳ ಪಾತ್ರದಲ್ಲಿ ಕಾಣಿಸಿಕೊಂಡರುವ ನಟಿ ಶ್ರೀನಿಧಿ ಶೆಟ್ಟಿ ರಾತ್ರೋರಾತ್ರಿ ಸ್ಟೇಟ್‌ ಕ್ರಶ್‌ ಆದರು.

ಕೆಜಿಎಫ್‌ 2 ನಂತರವೇ ಬೇರೆ ಸಿನಿಮಾಗೆ ಒಪ್ಪಿಗೆ: ಶ್ರೀನಿಧಿ ಶೆಟ್ಟಿ 

ಕೆಜಿಎಫ್‌ ಚಾಪ್ಟರ್‌ 1 ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ರೀನಿಧಿಗೆ ಕೈ ತುಂಬಾ ಚಿತ್ರಕಥೆಗಳು ಹುಡುಕಿಕೊಂಡು ಬಂದವು. ಬರೋಬ್ಬರಿ 10ಕ್ಕೂ ಕಥೆಗಳನ್ನು ಕೇಳಿರುವ ಶ್ರೀನಿಧಿ, ಕೆಜಿಎಫ್‌ ಚಾಪ್ಟರ್‌ 2ಗೆ ಮಾತ್ರ ಹೆಚ್ಚಿನ ಪ್ರಮುಖ್ಯತೆ ನೀಡುತ್ತಿದ್ದರು.  ಚಾಪ್ಟರ್‌ 2ನಲ್ಲಿ ತಮ್ಮ ಭಾಗ ಪ್ರಾರಂಭವಾಗುವ ಮುನ್ನ ತಮಿಳು ನಟ ಚಿಯಾನ್‌ ವಿಕ್ರಮ್‌ ಕೊತೆ ಅಭಿನಯಿಸಲು ಕಥೆ ಒಪ್ಪಿಕೊಂಡರು. ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ತೆರೆ ಕಾಣಲು ಸಿದ್ಧವಾಗುತ್ತಿದೆ.

ಆದರೆ ಕೆಜಿಎಫ್‌ ಚಾಪ್ಟರ್‌ 2 ಚಿತ್ರಕ್ಕಾಗಿ 7 ಸಿನಿಮಾಗಳನ್ನು ರಿಜೆಕ್ಟ್‌ ಮಾಡಿದ್ದಾರಂತೆ. ಹೀಗಂತ ಸೋಷಿಯಲ್ ಮೀಡಿಯಾದಲ್ಲಿ ವಿಚಾರ ವೈರಲ್ ಆಗುತ್ತಿದೆ. ಮುಂಬರುವ ದಿನಗಳಲ್ಲಿ ಹೊಸ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿ ಕೊಳ್ಳಬೇಕೆಂದು ನಿರ್ಧಸಿದ್ದಾರಂತೆ. 

ಕೆಜಿಎಫ್‌ ನಟಿ ಶ್ರೀನಿಧಿ ಶೆಟ್ಟಿ ಮದುವೆ; ಪರ ಭಾಷಾ ನಟನಿಗೆ ಜೋಡಿ! 

ಈ ವರ್ಷಾಂತ್ಯದಲ್ಲಿ ರಿಲೀಸ್‌ ಆಗಬೇಕಿದ್ದ ಕೆಜಿಎಫ್‌ ಚಾಪ್ಟರ್‌ 2 ಕೊರೋನಾ ಲಾಕ್‌ಡೌನ್‌ನಿಂದಾಗಿ ಮುಂದೂಡಲ್ಪಟ್ಟಿದೆ. ಆದರೀಗ ಪ್ಲಾನ್ ಬದಲಾಗಿದ್ದು, ಮುಂದಿನ ವರ್ಷ ತೆರೆಕಾಣಲಿದೆ. ಈ ಚಿತ್ರಕ್ಕೆ ಇದೀಗ ಅಧೀರನ ಪಾತ್ರಧಾರಿ ಸಂಜಯ್ ಅನಾರೋಗ್ಯವೂ ತೊಡಕಾಗುವ ಸಾಧ್ಯತೆ ಇದೆ. ಚಿತ್ರದ ಕೆಲವು ದೃಶ್ಯಗಳ ಚಿತ್ರೀಕರಣ ಬಾಕಿ ಇದ್ದು, ಸಂಡಯ್ ದತ್ ಚಿಕಿತ್ಸೆಗೆ ಅಮೆರಿಕಕ್ಕೆ ತೆರಳಿದರೆ ಏನು ಮಾಡುವುದೆಂಬ ಆತಂಕ ಎದುರಾಗಿದೆ. ಮೊದಲಿಂದಲೂ ಈ ಚಿತ್ರಕ್ಕೆ ಸುಮಾರು ವಿಘ್ನಗಳು ಎದುರಾಗಿದ್ದವು, ಇನ್ನೇನು ಚಿತ್ರೀಕರಣ ಮುಗಿಯಿತು ಎನ್ನುವಷ್ಟರಲ್ಲಿ ಕೊರೋನಾ ಹಾವಳಿ, ಲಾಕ್‌ಡೌನ್ ಜಾರಿಯಾಯಿತು. ಅದು ಮುಗಿಯಿತು ಎನ್ನುವಷ್ಟರಲ್ಲಿ ಸಂಜಯ್ ಅನಾರೋಗ್ಯ ಕೈ ಕೊಡುತ್ತಿದೆ.

"