ಬಿಗ್‌ಬಾಸ್‌ ನಂತರ ಶುಭಾ ಪೂಂಜಾ ಸಿನಿಮಾಗಳಲ್ಲಿ ಬ್ಯುಸಿ, ಜೊತೆಗೆ ಮದುವೆ ಸಿದ್ಧತೆಯೂ ನಡೀತಿದೆ. ಸದ್ಯ ಅಜಿತ್‌ ಕುಮಾರ್‌ ನಿರ್ದೇಶನದ ‘ರೈಮ್ಸ್‌ ’ ಚಿತ್ರ ಡಿ.10ಕ್ಕೆ ತೆರೆ ಕಾಣಲಿದೆ. ಇದರಲ್ಲಿ ಕ್ರೈಮ್‌ ರಿಪೋರ್ಟರ್‌ ಆವಂತಿಕಾ ಪಾತ್ರದಲ್ಲಿ ಶುಭಾ ಕಾಣಿಸಿಕೊಂಡಿದ್ದಾರೆ. ಪಾತ್ರದ ಬಗ್ಗೆ, ಮದುವೆ ಬಗ್ಗೆ ಶುಭಾ ಮಾತಾಡಿದ್ದಾರೆ.

ಪ್ರಿಯಾ ಕೆರ್ವಾಶೆ

ಕ್ರೈಮ್‌ ರಿಪೋರ್ಟರ್‌ ಆವಂತಿಕಾ ಆದ ಅನುಭವ ಹೇಗಿತ್ತು?

ಪತ್ರಕರ್ತರ ಲೈಫು ಎಷ್ಟುಕಷ್ಟ ಅನ್ನೋದರ ಅರಿವಾಯ್ತು. ಈ ಪಾತ್ರ ಮಾಡುವಾಗ ಒಂಚೂರು ನಕ್ಕರೂ ತುಂಬ ಸೀರಿಯಸ್‌ ಆಗಿರಬೇಕು, ನಗೋ ಹಾಗಿಲ್ಲ ಅಂತಿದ್ರು ಡೈರೆಕ್ಟರ್‌. ಅರೆ, ಪತ್ರಕರ್ತರಾರ‍ಯರೂ ನಗಲ್ವಾ ಅಂತ ರೇಗಿಸ್ತಿದ್ದೆ. ನ್ಯೂಸ್‌ ಕಂಪೋಸ್‌ ಮಾಡೋವಾಗ ಕೀಬೋರ್ಡ್‌ ಮೇಲೆ ಪಿಯಾನೋ ನುಡಿಸೋ ಥರ ಕೈಯಾಡಿಸ್ತಿದ್ದೆ. ಒಂಚೂರು ಜರ್ನಲಿಸ್ಟ್‌ ಥರ ಬಿಹೇವ್‌ ಮಾಡಿ ಮ್ಯಾಡಂ ಅಂತ ಗೋಗರೀತಿದ್ರು. ನಂಗೆ ಬಹಳ ಜನ ಜರ್ನಲಿಸ್ಟ್‌ ಫ್ರೆಂಡ್ಸ್‌ ಇರೋ ಕಾರಣ ಪಾತ್ರದ ನಿರ್ವಹಣೆ ಕಷ್ಟಆಗಲಿಲ್ಲ.

Ambuja: ಗಟ್ಟಿಗಿತ್ತಿ ಹೆಂಗಸಿನ ಪಾತ್ರದಲ್ಲಿ ಶುಭಾ ಪೂಂಜಾ ಜೊತೆಯಾದ ರಜಿನಿ

ಇತ್ತೀಚೆಗೆ ಹೆಚ್ಚೆಚ್ಚು ಸ್ತ್ರೀ ಪ್ರಧಾನ ಪಾತ್ರಗಳಲ್ಲಿ ಕಾಣಿಸ್ತಿದ್ದೀರ?

ಒಳ್ಳೆ ಪಾತ್ರ ಯಾವುದು ಸಿಕ್ಕರೂ ಮಾಡ್ತೀನಿ. ನಾನು ಈ ಸಿನಿಮಾ ಒಪ್ಪಿಕೊಳ್ಳುವ ಮೊದಲು ಆರು ತಿಂಗಳು ಬ್ರೇಕ್‌ ತಗೊಂಡಿದ್ದೆ. ಈಗಾಗಲೇ ನನ್ನ ಒಂದೇ ಬಗೆಯ ಪಾತ್ರಕ್ಕೆ ಬ್ರಾಂಡ್‌ ಮಾಡಿದ್ದಾರೆ, ಅದರಿಂದ ಹೊರಬರಬೇಕು ಅಂದುಕೊಂಡಿದ್ದೆ. ಆಪ್ತರೂ ಆ ಬಗ್ಗೆ ಹೇಳಿದ್ದರು. ಇದಾಗಿ ತ್ರಿದೇವಿ ಎಂಬ ಪ್ರಾಜೆಕ್ಟ್ಗೆ ಎಕ್ಸಿಕ್ಯುಟಿವ್‌ ಪ್ರೊಡ್ಯೂಸರ್‌ ಆಗಿ ಕೆಲಸ ಮಾಡ್ತಿದ್ದೆ. ಅದರಲ್ಲಿ ಮುಖ್ಯ ಪಾತ್ರವನ್ನೂ ಮಾಡುತ್ತಿದ್ದೆ. ಆ ಹೊತ್ತಿಗೆ ’ರೈಮ್ಸ್‌’ ಆಫರ್‌ ಸಿಕ್ಕಿತು. ಇದಾಗಿ ಅಂಬುಜಾ ಅನ್ನೋ ಸಿನಿಮಾದಲ್ಲೂ ನಟಿಸುತ್ತಿದ್ದೇನೆ.

ಹೇಗಿದೆ ಲೈಫು?

ಸಖತ್ತಾಗಿದೆ. ನನ್ನ ಫಿಯಾನ್ಸಿ ಯಾವತ್ತೂ ನನಗೆ ಸಪೋರ್ಟಿವ್‌ ಆಗಿರೋದು ನನಗೆ ಖುಷಿ. ಬಿಗ್‌ಬಾಸ್‌ಗೆ ನನ್ನ ಕಳಿಸಿದ್ದೂ ಅವನೇ. ವಿಭಿನ್ನ ಪಾತ್ರಗಳಲ್ಲಿ ನಟಿಸುವಂತೆ ಪ್ರೋತ್ಸಾಹಿಸೋದು ಆತನೇ. ತ್ರಿದೇವಿಯಲ್ಲಿ ಪ್ರೊಡ್ಯೂಸರ್‌ ಕೆಲಸ ಮಾಡುವಂತೆ ಹೇಳಿದ್ದೂ ಅವನೇ.

ಶುಭಾ ಪೂಂಜಾ ಮನೆಯಲ್ಲಿ ನಿಧಿ ಸುಬ್ಬಯ್ಯ: ಗೆಳತಿಯರ ಸರ್‌ಪ್ರೈಸ್ ಭೇಟಿ

    ಮದುವೆ ಯಾವಾಗ?

    ಈ ತಿಂಗಳ ಕೊನೆ ಅಥವಾ ಜನವರಿ ಮೊದಲ ವಾರ. ನಮ್ಮಿಬ್ಬರ ಊರೂ ಮಂಗಳೂರು ಸಮೀಪ. ನಮ್ಮ ಕುಟುಂಬದ ಹಿರಿಯರೆಲ್ಲ ಅಲ್ಲೇ ಇದ್ದಾರೆ. ನಮ್ಮ ಮನೆ ದೇವರ ದೇವಸ್ಥಾನವೂ ಅಲ್ಲೇ ಇದೆ. ಆ ದೇವಸ್ಥಾನದಲ್ಲೇ ಮದುವೆ ಆಗುವ ಪ್ಲಾನ್‌ ಇದೆ. ನಾವಿಬ್ಬರೂ ಅದ್ದೂರಿತನಕ್ಕಿಂತ ಸರಳತನವನ್ನು ಹೆಚ್ಚು ಇಷ್ಟಪಟ್ಟವರು. ಹೀಗಾಗಿ ಸರಳವಾಗಿ ದೇವಸ್ಥಾನದಲ್ಲಿ ಮದುವೆ ಆಗ್ತೀವಿ.

    View post on Instagram