Asianet Suvarna News Asianet Suvarna News

ಶುಭಾ ಪೂಂಜಾ ಮನೆಯಲ್ಲಿ ನಿಧಿ ಸುಬ್ಬಯ್ಯ: ಗೆಳತಿಯರ ಸರ್‌ಪ್ರೈಸ್ ಭೇಟಿ

  • ಆಕಸ್ಮಿಕ ಭೇಟಿ ನೀಡಿದ ನಿಧಿ ಸುಬ್ಬಯ್ಯ
  • ಇನ್‍ಸ್ಟಾಗ್ರಾಮ್ ಖಾತೆ ಪೋಟೋ ವೈರಲ್
  • ಶುಭಾ ತಂದೆ ಸೆಲ್ಫಿಗೆ ಪೋಸ್
Nidhi Subbayya visits Shubha Poonja house
Author
Bangalore, First Published Oct 17, 2021, 6:58 PM IST
  • Facebook
  • Twitter
  • Whatsapp

ಕನ್ನಡದ ಬಿಗ್‍ಬಾಸ್ (Bigboss) ಸೀಸನ್ 8 ಕಾರ್ಯಕ್ರಮದ ನಂತರ ನಟಿ ಶುಭಾ ಪೂಂಜಾ (Shubha Poonja) ಮನೆಗೆ ಮೊದಲ ಬಾರಿಗೆ ನಟಿ ನಿಧಿ ಸುಬ್ಬಯ್ಯ (Nidhi Subbaiah) ಸರ್‌ಪ್ರೈಸ್ ಭೇಟಿ (Surprise Visit) ನೀಡಿದ್ದಾರೆ. ಹೌದು! ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ನಿಧಿ ಹಾಗೂ ಶುಭಾ ಒಳ್ಳೆಯ ಗೆಳತಿಯರಾಗಿ ಸದಾ ತರ್ಲೆ, ಚೇಷ್ಟೆ ಮಾಡಿಕೊಂಡು ಟಾಸ್ಕ್‌ಗಳಲ್ಲಿ ಭಾಗವಹಿಸುತ್ತಿದ್ದರು. ಬಿಗ್‌ಬಾಸ್‌ನಿಂದ ಇವರಿಬ್ಬರು ಹೊರಗೆ ಬಂದ ನಂತರ ವೈಯಕ್ತಿಕವಾಗಿ ಎಲ್ಲಿಯೂ ಭೇಟಿ ಮಾಡಿರಲಿಲ್ಲ. 

ಹೀಗಾಗಿ  ಶುಭ ಪೂಂಜಾ ಮನೆಗೆ ನಿಧಿ ಸುಬ್ಬಯ್ಯ ಹಾಗೂ ಅವರ ತಾಯಿ ಆಕಸ್ಮಿಕವಾಗಿ ಭೇಟಿ ನೀಡಿ ಎಂಜಾಯ್ (Enjoy) ಮಾಡಿದ್ದಾರೆ. ಈ ಬಗ್ಗೆ ಕೆಲವು ಫೋಟೋಗಳನ್ನು ಶುಭಾ ಪೂಂಜಾ ತಮ್ಮ ಇನ್‍ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಶುಭಾ ಪೂಂಜಾ ಹಾಗೂ ಅವರ ತಂದೆ, ತಾಯಿ ಸೇರಿದಂತೆ ನಿಧಿ ಸುಬ್ಬಯ್ಯ ಹಾಗೂ ಅವರ ತಾಯಿ ಪೋಸ್ ಕೊಟ್ಟಿದ್ದಾರೆ.

ಪನ್ನಗಾ ಅವರಿಗೆ ನಾನು ತಲೆ ತಿಂದಷ್ಟು ಯಾರೂ ತಿಂದಿರುವುದಿಲ್ಲ: ವಾಸುಕಿ ವೈಭವ್

ಜೊತೆಗೆ  'ಕೊನೆಗೂ ನನ್ನ ತಾಯಿ ಹಾಗೂ ನಿಧಿ ಸುಬ್ಬಯ್ಯ ಅವರ ಅಮ್ಮ ಭೇಟಿಯಾದರು ಮತ್ತು ಇತಿಹಾಸದಲ್ಲಿಯೇ ಮೊದಲ ಬಾರಿಗೆ ನನ್ನ ಅಪ್ಪ ಸೆಲ್ಫಿಗೆ ಪೋಸ್ ನೀಡಿದ್ದಾರೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ಪೋಸ್ಟ್‌ಗೆ ನಿಧಿ ಸುಬ್ಬಯ್ಯ 'ನನ್ನನ್ನು ಕ್ರಾಪ್ ಮಾಡದೇ ಫೋಟೋ ಹಾಕಿದ್ದಕ್ಕೆ ಧನ್ಯವಾದಗಳು' ಎಂದು ಕಾಮೆಂಟ್ ಮಾಡಿದ್ದಾರೆ.

ಕೊಡಗಿನ ಬೆಡಗಿ, ಪಂಚರಂಗಿ ಚೆಲುವೆ, ನಿಧಿ ಬಿಗ್‍ಬಾಸ್ ಸೀಸನ್ 8ರ ಕಾರ್ಯಕ್ರಮದಲ್ಲಿ ಎರಡನೇ ಇನಿಂಗ್ಸ್ ನ ಮೊದಲ ಎಲಿಮಿನೇಶನ್‌ನಲ್ಲಿ ತಮ್ಮ ಪ್ರಯಾಣವನ್ನು ಮುಗಿಸಿದಿದ್ದರು. ಆಗ ಶುಭಾ ಕಣ್ಣೀರು ಹಾಕಿದ್ದರು.  ನಿಧಿ 'ಆಯುಷ್ಮಾನ್ ಭವ' ಚಿತ್ರದ ನಂತರ 'ಮೈಲಾಪುರ' (Mylapura) ಎಂಬ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೈಲಾಪುರ ಎನ್ನುವ ಹಳ್ಳಿಯಲ್ಲಿ ನಡೆಯುವ ಕತೆ ಇದಾಗಿದ್ದು, ರಿಯಾಲಿಟಿ ಶೋ ಹಿಂದಿನ ತಂತ್ರ, ಕುತಂತ್ರ, ರೋಚಕತೆ, ಸಾಹಸಗಳನ್ನು ಈ ಚಿತ್ರ ಒಳಗೊಂಡಿದೆ ಎಂದು ಚಿತ್ರದ  ನಿರ್ದೇಶಕ ಫಣೀಶ್‌ ಭಾರದ್ವಾಜ್‌ ತಿಳಿಸಿದ್ದಾರೆ.

ಇನ್ನು ಶುಭ ಪೂಂಜಾ ಶ್ರೀನಿ ಹನುಮಂತರಾಜು ಆಕ್ಷನ್ ಕಟ್ ಹೇಳಿರುವ 'ಅಂಬುಜ' (Ambuja) ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಅವರ ವಿಶೇಷವಾದ ಗೆಟಪ್‌ನ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಇದೊಂದು ಮಹಿಳಾ ಪ್ರಧಾನ ಹಾಗೂ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಈ ಚಿತ್ರದಲ್ಲಿ 20 ಕೆಜಿ ತೂಕದ ಲಂಬಾಣಿ ವಸ್ತ್ರ ಹಾಗೂ ಆಭರಣಗಳನ್ನು ಧರಿಸಿ ಶುಭಾ ಪೂಂಜಾ ನಟಿಸಿದ್ದಾರೆ.

Follow Us:
Download App:
  • android
  • ios