ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ದಿನೇಶ್‌ ಬಾಬು ತಮ್ಮ 50ನೇ ಚಿತ್ರ ಗಾಂಧಿ ನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲಾಕ್‌ಡೌನ್‌ ಸಡಲಿಕೆ ಆಗಿದ ತಕ್ಷಣವೇ ಚಿತ್ರದ ಮುಹೂರ್ತ ಕಾರ್ಯಕ್ರಮ ಮಾಡಿ 'ಕಸ್ತೂರಿ ನಿವಾಸ' ಎಂದು ಹೆಸರಿಟ್ಟರು. ನಟಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್‌ ವಿತ್ ಬಿಗ್ ಬಾಸ್‌ ಫೇಮ್‌ ಶೃತಿ ಪ್ರಕಾಶ್ ಹಾಗೂ ರಾಧಾ ರಮಣ ಖ್ಯಾತಿಯಾ ಸ್ಕಂದ ಅಶೋಕ್‌ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರ ಕನ್ಫರ್ಮ್‌ ಆಗಿತ್ತು. ಆದರೀಗ ರಚ್ಚು ಬದಲು ಶಾನ್ವಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಶಾನ್ವಿ ಯಾಕೆ?
ಹೆಸರು ಕೇಳಿ ಥ್ರಿಲ್ ಆದ ರಚ್ಚು, ತುಂಬಾ ಲವಲವಿಕೆಯಿಂದ ಸಿನಿಮಾ ಒಪ್ಪಿಕೊಂಡಿದ್ದರು. ಅಕ್ಟೋಬರ್ 5ರಂದು ಚಿತ್ರೀಕರಣ ಪ್ರಾರಂಭಿಸುವ ಪ್ಲಾನ್ ಮಾಡಿದ ತಂಡಕ್ಕೆ ರಚ್ಚು ಶೂಟಿಂಗ್ ಡೇಟ್ ಕ್ಲಾಶ್ ಆಗಿದೆ. ಡೇಟ್ಸ್ ಹೊಂದಾಣಿಕೆ ಆಗದ ಈ ಕಾರಣ ತಂಡದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.

 

ನಿವಾಸ ಅಲ್ಲ ಮಹಾಲ್:
ಚಿತ್ರಕ್ಕೆ 'ಕಸ್ತೂರಿ ನಿವಾಸ' ಎಂದು ಶೀರ್ಷಿಕೆ ಘೋಷಣೆ ಮಾಡಲಾಗಿತ್ತು. ಈ ಹೆಸರನ್ನು ಕೇಳಿದರೆ ಡಾ.ರಾಜ್‌ಕುಮಾರ್ ನೆನಪಾಗುತ್ತಾರೆ ಅಲ್ಲದೆ ದೊರೈ ಭಗವಾನ್‌ ಇದಕ್ಕೆ ಅನುಮತಿ ಪಡೆದುಕೊಂಡಿಲ್ಲ ಎಂದು ಹೇಳಿದ ಕಾರಣ ಚಿತ್ರದ ಹೆಸರನ್ನು 'ಕಸ್ತೂರಿ ಮಹಲ್' ಎಂದು ಬದಲಾಯಿಸಿದ್ದಾರೆ. 

ಏಪ್ರಿಲ್, ಏಕ್‌ ಲವ್‌ ಯಾ, ಲಿಲ್ಲಿ, ವೀರಂ, ಡಾಲಿ, 100 ಸೇರಿದಂತೆ ಅನೇಕ ಚಿತ್ರಕಥೆಗಳನ್ನು ಒಪ್ಪಿಕೊಂಡು ಬ್ಯುಸಿಯಾಗಿರುವ ರಚಿತಾ ರಾಮ್‌ ತೆಲಗು 'ಸೂಪರ್ ಮಚಿ' ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ ಈ ಕಾರಣಕ್ಕೆ ಡೇಟ್ಸ್ ಕ್ಲಾಶ್‌ ಆಗಿರಬಹುದು.