'ಗಂಡ ಹೆಂಡತಿ' ಖ್ಯಾತಿಯ ನಟಿ ಸಂಜನಾ ಗರ್ಲಾನಿ ವಿವಾದದಿಂದ ದೂರ ಉಳಿದರೂ, ವಿವಾದಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ದಿನೆ ದಿನೇ ಚಂದನ ವನದಲ್ಲಿ ನಶೆಯ ಘಾಟು ಹೆಚ್ಚಾಗುತ್ತಿದೆ. ನಟಿ ರಾಗಿಣಿ ಹಾಗೂ ಸಂಜನಾ ರಾಖಿ ಬ್ರದರ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ನಂತರ, ಸಂಜನಾ ಸಿಕ್ಕಪಟ್ಟೆ ಸುದ್ದಿಯಲ್ಲಿದ್ದಾರೆ. ಅಲ್ಲದೆ ಮಾಧ್ಯಮದವರ ಮೇಲೆ ರೇಗಾಡಿದ್ದಾರೆ. ಆದರೆ ಸ್ಥಳೀಯರು ಹೇಳುವ ಮಾತು ಕೇಳಿದರೆ ಈ ಮಾದಕ ನಟಿಯ ಅಸಲೀ ಮುಖ ಬಯಲಾಗೋದು ಸುಳ್ಳಲ್ಲ..

'ರಾಖಿ' ಅಣ್ಣ ರಾಹುಲ್ ಜೊತೆ ಸಂಜನಾ ಕ್ಲೋಸ್ ಆಗಿದ್ದಿದ್ದು ಹೀಗೆ!

ಸ್ಥಳೀಯರ ಆರೋಪ:
ಇಂದಿರಾ ನಗರ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಸಂಜನಾ ತುಂಬಾ ಕಿರಿಕ್ ಪಾರ್ಟಿ ಅಂತೆ.  ವೀಕೆಂಡ್ ಆದರೆ ಮನೆಯಲ್ಲಿ ಹಾಗೂ ಕ್ಲಬ್‌ನಲ್ಲಿ ನೈಟ್ ಫುಲ್ ಪಾರ್ಟಿ ಮಾಡುತ್ತಾರಂತೆ. ಮನೆಯಲ್ಲಿ ಮಾಡಿದರೆ ರಾತ್ರಿ  12 ಗಂಟೆ ನಂತರವೂ ಗಾನಾ ಬಜಾನಾ ಶುರು ಮಾಡಿಕೊಳ್ಳುತ್ತಾರೆ. ಸ್ಥಳೀರು ಹೇಳಲು ಹೋದರೆ, ಅವರ ವಿರುದ್ಧವೇ ತಿರುಗಿ ಬೇಳುತ್ತಾರಂತೆ.

ಸಂಜನಾ ಮಾಡುವ ಗಲಾಟೆ ಬಗ್ಗೆ ಅಪಾರ್ಟ್‌ಮೆಂಟ್‌ ನಿವಾಸಿ ಆಡ್ವೋಕೇಟ್‌ ಹಾಗೂ ಇತರೆ ನೆರೆಹೊರೆಯವರು ಈ ನಟಿಯ ರಂಪಾಟದ ಬಗ್ಗೆ ಬಗ್ಗೆ ಮಾಹಿತಿ ನೀಡಿದ್ದಾರೆ. 'ಪಾರ್ಟಿ ಮಾಡುವ ಸಂಜನಾ ಎಲ್ಲನೆರೆ ಹೊರೆಯವರ ಜೊತೆಗೂ ಕಿರಿಕ್ ಮಾಡಿಕೊಂಡಿದ್ದಾರೆ. ರಾತ್ರಿ ಪಾರ್ಟಿ ಮಾಡುವಾಗ ಬಂಧಿತ ರಾಹುಲ್ ಕೂಡ ಬರುತ್ತಾನೆ. ವೀಕೆಂಡ್‌ನಲ್ಲಿ ಅನೇಕರು ಬರುತ್ತಾರೆ. ಸಂಜನಾ ಈ ಮನೆಯಲ್ಲಿ ಅವರ ತಂದೆ ತಾಯಿ ಯಾರೂ ಇಲ್ಲ,' ಎಂದು ಹೇಳಿದ್ದಾರೆ. 

ಡ್ರಗ್ಸ್‌ ಬಗ್ಗೆ ಮಾತನಾಡಲು ಒತ್ತಾಯಿಸಬೇಡಿ; ಇದೇ ನನ್ನ ಕೊನೇ ಉತ್ತರ!

ಸಂಜನಾ ಜೊತೆ ಇರುವ ಡಾಕ್ಟರ್ ಯಾರು?
ಮಾದ್ಯಮದವರ ಮನೆ ಬಳಿ ಹೋದರೆ ವಯಸ್ಸಾದ ತಂದೆ ತಾಯಿ ಇದ್ದಾರೆ ಎಂದು ಹೇಳುವ ಸಂಜನಾ ಸುಳ್ಳು ಹೇಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. 'ಸಂಜನಾ ಜೊತೆ ಯಾರೋ ಡಾಕ್ಟರ್ ಒಬ್ಬರು ಇದ್ದಾರೆ. ಅವರು ಯಾರು ಮನೆಯಲ್ಲಿದ್ದಾರೆ, ಯಾರ ಜೊತೆ ಇದ್ದಾರೆ, ಮದುವೆ ಆಗಿದ್ಯಾ ಎಂಬುದರ ಬಗ್ಗೆ ತನಿಖೆ ಆಗಬೇಕು. ಮನೆಯಲ್ಲಿ ಕಂಸ್ಟ್ರಕ್ಷನ್ ಕೆಲಸವಿತ್ತು ಜಲ್ಲಿ, ಮಣ್ಣನ್ನು ಲೋಡ್‌ ಮಾಡಿದ ಹುಡುಗನಿಗೆ ಸರಿಯಾಗಿ  ಹಣ ಕೊಡದೇ ಸತಾಯಿಸಿದ್ದರು. ಪ್ರಶ್ನಿಸಿದ್ದಕ್ಕೆ ಟ್ರ್ಯಾಕ್ಟರ್‌ ಹುಡುಗನಿಗೆ ಚಪ್ಪಲಿಯಲ್ಲಿ ಹೊಡೆದರು. ಅವನು ಸುಮ್ಮನಿರಲಿಲ್ಲ. ತಿರುಗಿ ಅದೇ ಚಪ್ಪಲಿ ಅವರ ಮೇಲೆ ಎಸೆದ,' ಎಂದು ಸ್ಥಳೀಯರು ಸಂಜನಾ ಮಾಡುವ ರಂಪಾಟದ ಬಗ್ಗೆ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎನ್ನುವಂತೆ ಕೆಲವು ಚಿತ್ರ ನಟ, ನಟಿಯರ ನಡೆ, ನುಡಿ ಹಾಗೂ ಆಂಗಿಕ ಭಾಷೆ ಗಮನಿಸಿದರೆ ಅವರು ಮಾಡುವ ಕೆಲಸಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವುದು ಸುಳ್ಳಲ್ಲ. ಈ ಬಗ್ಗೆ ನಡೆಯುತ್ತಿರುವ ತನಿಖೆ ಜೊತೆ ಜೊತೆಗೇ ಕೆಲವರ ರಕ್ತ ಪರೀಕ್ಷೆ ಮಾಡಿಸಿದರೆ ಅವರ ಮಾದಕ  ವ್ಯಸನದ ಬಗ್ಗೆ ಮಾಹಿತಿ ಸಿಗಬಹುದು ಅಲ್ಲವೇ? ಏನಂತೀರಿ?

"