ಕನ್ನಡ ಚಿತ್ರರಂಗದ ಬೋಲ್ಡ್ ಹುಡುಗಿ ಸಂಯುಕ್ತಾ ಹೆಗ್ಡೆ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕಳೆದ ಎರಡು ದಿನಗಳಿಂದ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿರುವ ಸಂಯುಕ್ತಾ, ಮನೆಯಲ್ಲೇ ಹೋಮ್ ಕ್ವಾರಂಟೈನ್ ಆಗಿದ್ದಾರೆ.

ಈ ಬಗ್ಗೆ ಸ್ವತಃ ಸಂಯುಕ್ತಾ ಅವರೇ ಬರೆದುಕೊಂಡಿದ್ದಾರೆ. ‘ಕಳೆದ ತಿಂಗಳು ನಮ್ಮ ಪೋಷಕರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಅವರು ಗುಣಮುಖರಾದ ಮೇಲೆ ನನಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ,’ ಎಂದು ಸಂಯುಕ್ತಾ ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ತಾಯಿ ಜೊತೆ ಡ್ಯಾನ್ಸ್‌ ಮಾಡಿದ ಸಂಯುಕ್ತಾ ಹೆಗ್ಡೆ ವಿಡಿಯೋ ವೈರಲ್! 

ಸಂಯುಕ್ತಾ ಪೋಸ್ಟ್:
ಸಂಯುಕ್ತಾ ಪೋಷಕರಿಗೂ ಕೊರೋನಾ ಸೋಂಕು ತಗುಲಿದ್ದು, ಕಳೆದ 25 ದಿನಗಳಿಂದ ಎದುರಿಸುತ್ತಿರುವ ಪ್ರತಿಯೊಂದು ಕ್ಷಣದ ಬಗ್ಗೆ ಬರೆದುಕೊಂಡಿದ್ದಾರೆ.

'20ನೇ ತಾರೀಕು ತಂದೆಗೆ ಕೊರೋನಾ ಕಾಣಸಿಕೊಂಡಿತ್ತು, 24ರಂದು ತಾಯಿಗೂ ಪಾಸಿಟಿವ್ ಬಂತು. ತಂದೆಗೆ ಸಿಟಿ ಸ್ಕ್ಯಾನ್ ಮಾಡಿಸಿದೆವು 20/25 ಸ್ಕೋರ್ ಕಡಿಮೆ ಆಯ್ತು. ತಕ್ಷಣವೇ ಆಸ್ಪತ್ರೆಗೆ ಸೇರಿಸುವಂತೆ ವೈದ್ಯರು ಹೇಳಿದ್ದರು. ಆದರೆ ಎಲ್ಲಿಯೂ ಬೆಡ್‌ ಸಿಗಲಿಲ್ಲ. ಇನ್‌ಫೆಕ್ಷನ್ ಹೆಚ್ಚಾಗಿತ್ತು. ಕಾಯುವಷ್ಟು ಸಮಯ ನಮಗೆ ಇರಲಿಲ್ಲ ಈ ಕಾರಣಕ್ಕೆ ನಾವು ಮನೆಯಲ್ಲಿಯೇ ಮಿನಿ ICU ಮಾಡಿದೆವು. ನನ್ನ ಸಹೋದರ ನರ್ಸಿಂಗ್ ಮಾಡುತ್ತಿರುವ ಕಾರಣ ಅತ ದಿನಕ್ಕೆ ಎರಡು ಸಲ ಬಂದು ಇಂಜೆಕ್ಷನ್ ನೀಡುತ್ತಿದ್ದ. ಈ ದಿನಗಳು ತುಂಬಾನೇ ಕಷ್ಟಕರವಾಗಿತ್ತು. ಆದರೆ ಅವರಿಬ್ಬರೂ ಸುಧಾರಿಸಿಕೊಳ್ಳುತ್ತಿದ್ದಾರೆ,' ಎಂದು ಬರೆದುಕೊಂಡಿದ್ದಾರೆ. 

'ನನಗೂ ಕೊರೋನಾ ಪಾಸಿಟಿವ್ ದೃಢವಾಗಿದೆ.  ಸೆಲ್ಫ್ ಐಸೋಲೇಟ್ ಆಗಿರುವೆ. ನನಗೆ ರಿಪೋರ್ಟ್ಸ್‌ ಸಿಕ್ಕ ಒಂದು ಗಂಟೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಕರೆ ಮಾಡಿದರು. ನನ್ನ ತಂದೆ, ತಾಯಿಗೆ ಪಾಸಿಟಿವ್ ಬಂದ 11 ದಿನಗಳ ಬಳಿಕ ಬಿಬಿಎಂಪಿ ಅವರು ಕರೆ ಮಾಡಿದ್ದರು. ಹಾಗೆ ನೋಡಿದರೆ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಬಿಬಿಎಂಪಿ ಕಾರ್ಯವೈಖರಿ ಸುಧಾರಣೆ ಕಂಡು ಬಂದಿದೆ. ಪುಣ್ಯಕ್ಕೆ ತಂದೆ-ತಾಯಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಬಳಿಕ ನನಗೆ ಸೋಂಕು ತಗುಲಿದೆ,' ಎಂದಿದ್ದಾರೆ.

 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona