ಈ ಸಂಬಂಧ ಅಗರ ಕೆರೆ ಸಮಿತಿ ಸದಸ್ಯೆ ಕವಿತಾ ರೆಡ್ಡಿ ಹಾಗೂ ಅನಿಲ್‌ ರೆಡ್ಡಿ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಕ್ರೇಜಿ ಬೈಕ್‌ ಸಾಹಸ ಮಾಡಿದ ಸಂಯುಕ್ತಾ; ಬೆಚ್ಚಿಬಿದ್ದ ನೆಟ್ಟಿಗರು! 

ಶುಕ್ರವಾರ ಸಂಯುಕ್ತ ಹೆಗಡೆ ಅಗರ ಕೆರೆಯ ಪಾರ್ಕ್ನಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಕವಿತಾ ರೆಡ್ಡಿ ತುಂಡು ಬಟ್ಟೆತೊಟ್ಟು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದೀರಾ ಎಂದು ಸಂಯುಕ್ತ ಹೆಗಡೆ ಬಳಿ ಜಗಳ ತೆಗೆದಿದ್ದರು. ಈ ವೇಳೆ ಕೆಲವರು ಸಂಯುಕ್ತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸಂಪೂರ್ಣ ಘಟನೆಯನ್ನು ತೊಟ್ಟಬಟ್ಟೆಯಲ್ಲೇ ಸಂಯುಕ್ತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.

"

ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನು ಕಳುಹಿಸಿದ್ದರು. ಇದೀಗ ಸಂಯುಕ್ತ ಹೆಗಡೆ ಪರವಾಗಿ ಟ್ವಿಟರ್‌ ಹ್ಯಾಷ್‌ ಟ್ಯಾಗ್‌ ಟ್ರೇಡಿಂಗ್‌ ಪ್ರಾರಂಭಗೊಂಡಿದೆ. ಸೆಲೆಬ್ರಿಟಿಗಳು ಸಂಯುಕ್ತ ಹೆಗಡೆ ಪರವಾಗಿ ಪ್ರತಿಕ್ರಿಯಿಸಿ ಟ್ವಿಟ್‌ ಮಾಡುತ್ತಿದ್ದಾರೆ. ಸುಖ-ಸುಮ್ಮನೆ ಸಂಯುಕ್ತ ವಿರುದ್ಧ ಈ ರೀತಿ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಸಂಯುಕ್ತಾ ಹೆಗ್ಡೆ ವಿಚಿತ್ರ ಫೋಟೋ; 10 ಲಕ್ಷ ಜನರ ಪ್ರೀತಿ ಪಡೆದ ತುಂಟಿ!

ದೂರು ನೀಡಿದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಸಂಯುಕ್ತ ಹೆಗಡೆ, ನನಗೆ ಆದ ರೀತಿಯಲ್ಲಿ ಯಾರಿಗೂ ಕಿರುಕುಳ ನೀಡಬಾರದು. ಈ ಸಂಬಂಧ ಕವಿತಾ ರೆಡ್ಡಿ ಹಾಗೂ ಅನಿಲ್‌ ರೆಡ್ಡಿ ಎಂಬುವರ ವಿರುದ್ಧ ದೂರು ದಾಖಲಿಸಿದ್ದೇನೆ. ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ. ಎಲ್ಲಾ ವಿಡಿಯೋ ರೆಕಾರ್ಡಿಂಗನ್ನು ಪೊಲೀಸರಿಗೆ ಸಾಕ್ಷ್ಯ ಸಮೇತ ನೀಡಿದ್ದೇನೆ ಎಂದು ತಿಳಿಸಿದರು.