ದರ್ಶನ್‌ ಪ್ರಕರಣದ ಬಗ್ಗೆ ವಿಡಿಯೋ ಹಾಕಿ ಡಿಲೀಟ್ ಮಾಡಿದ ಕೆಜಿಎಫ್ ನಟಿ ರೂಪಾ ರಾಯಪ್ಪ; ಟ್ರೋಲಿಗರಿಗೆ ಬುದ್ಧಿ ಪಾಠ!

ಟ್ರೋಲ್‌ ಮಾಡುವವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣ ದೊಡ್ಡ ಪಾಠ. ಇದ್ದಕ್ಕಿದ್ದಂತೆ ವಿಡಿಯೋ ಡಿಲೀಟ್ ಮಾಡಿದ್ದು ಯಾಕೆ?

Kannada actress Roopa rayappa talk on renukaswamy murder case and negative comments vcs

ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವ ಪಡೆಯುತ್ತಿದೆ. 17 ಆರೋಪಿಗಳು ಈಗ ಜೈಲಿನಲ್ಲಿದ್ದಾರೆ. ಅದರಲ್ಲಿ ನಟಿ ಪವಿತ್ರಾ ಗೌಡ ಮತ್ತು ನಟ ದರ್ಶನ್ ಏ1 ಮತ್ತು ಏ2 ಆರೋಪಿಗಳು. ದರ್ಶನ್ ಜೈಲು ಸೇರಿದ ಮೇಲೆ ಒಬ್ಬೊಬ್ಬರೆ ಸೆಲೆಬ್ರಿಟಿಗಳು ಭೇಟಿ ಮಾಡುತ್ತಿದ್ದಾರೆ ಹಾಗೂ ಘಟನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಕೆಜಿಎಫ್ ನಟಿ ರೂಪಾ ರಾಯಪ್ಪ ಕೆಲವು ದಿನಗಳ ಹಿಂದೆ ಈ ಪ್ರಕರಣದ ಬಗ್ಗೆ ಮಾತನಾಡಿ ವಿಡಿಯೋ ಅಪ್ಲೋಡ್ ಮಾಡಿದ್ದರು. ಅಪ್ಲೋಡ್ ಆದ ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಿಬಿಟ್ಟರು. ಹೀಗೆ ಮಾಡಲು ಕಾರಣ ಏನೆಂದು ಹಂಚಿಕೊಂಡಿದ್ದಾರೆ.  

'ದರ್ಶನ್‌ ಅವರ ಕೇಸ್ ಎಲ್ಲರಿಗೂ ಒಂದು ಪಾಠ ಅದರಲ್ಲೂ ಟ್ರೋಲ್ ಮಾಡುವವರಿಗೆ ದೊಡ್ಡ ಪಾಠ. ಟ್ರೋಲ್‌ ಬಗ್ಗೆ ನಾವು ಜಾಸ್ತಿ ಸ್ಟ್ರೆಸ್‌ ತೆಗೆದುಕೊಳ್ಳಬಾರು ಇಂತಹ ಗಟ್ಟಿತವನ್ನು ಎಲ್ಲಾ ಹೆಣ್ಣು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ರೂಪಾ ರಾಯಪ್ಪ ಖಾಸಗಿ ವೆಬ್‌ಸೈಟ್‌ನಲ್ಲಿ ಮಾತನಾಡಿದ್ದಾರೆ. 

ವಿಲ್ಸನ್ ಗಾರ್ಡನ್‌ನಲ್ಲಿ ಭೀಕರ ಹತ್ಯೆ; 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಖ್ಯಾತ ನಿರ್ದೇಶಕ ಗಜೇಂದ್ರ ಅರೆಸ್ಟ್‌!

'ನಾವು ಏನೇ ಮಾಡಿದರೂ ಯಾರಿಗೂ ಗೊತ್ತಾಗುವುದಿಲ್ಲ ಎಂದು ಟ್ರೋಲರ್ಸ್‌ ಅಂದುಕೊಳ್ಳು ಬಿಟ್ಟಿದ್ದಾರೆ ಹೀಗಾಗಿ ಆಶ್ಲೀಲ ಕಾಮೆಂಟ್ಸ್ ಕಳುಹಿಸುತ್ತಾರೆ. ಆದರೆ ಆ ಮೆಸೇಜ್‌ಗಳಿಂದ ಮಾನಸಿಕ ಸ್ಥಿತಿ ಏನಾಗುತ್ತದೆ ಹೇಗಿರುತ್ತದೆ ಅಲ್ಲದೆ ಅವರಿಗೆ ಯಾವ ರೀತಿ anger issue ಇರುತ್ತೆ ಅಂತ ಟ್ರೋಲರ್ಸ್‌ಗೆ ಗೊತ್ತಿರುವುದಿಲ್ಲ. ಹೀಗಾಗಿ ನಿಮ್ಮನ್ನು ನೀವು ಇಂತಹ ಪರಿಸ್ಥಿತಿಗೆ ಸಿಲುಕಿಸಿಕೊಳ್ಳಬೇಡಿ ಅಂತ ಅರಿವು ಮೂಡಿಸುವ ಸಲುವಾಗಿ ನಾನು ಒಂದು ವಿಡಿಯೋ ಹಂಚಿಕೊಂಡಿದ್ದೆ. ಅದಾದ ಮೇಲೆ ನಾನು ಅದನ್ನು ಡಿಲೀಟ್ ಮಾಡಿಬಿಟ್ಟೆ. ಇದು ಸೂಕ್ಷ್ಮ ವಿಚಾರವಾಗಿದ್ದ ಕಾರಣ ಒಂದು ಕೊಲೆ ಆಗಿರುವ ಕಾರಣ ಅದನ್ನು ಡಿಲೀಟ್ ಮಾಡಿದೆ ಎಂದು ರೂಪಾ ರಾಯಪ್ಪ ಹೇಳಿದ್ದಾರೆ.

ಪತ್ನಿ ವಿಜಯಲಕ್ಷ್ಮಿ ಮಾತು ಕೇಳಿ ದರ್ಶನ್ ಶಾಕ್; ನಿಜಕ್ಕೂ ಜಾಮೀನು ಸಿಗಲ್ವಾ?

ಸೋಷಿಯಲ್ ಮೀಡಿಯಾದಲ್ಲಿ ಇರುವ ಕಾರಣ ಎಷ್ಟೋ ಕಾಮೆಂಟ್ಸ್‌ ಬರುತ್ತದೆ ಅದರಲ್ಲಿ ಪಾಸಿಟಿವ್ ಕಾಮೆಂಟ್ಸ್‌ಗಳನ್ನು ಮಾತ್ರ ನಾನು ಸ್ವೀಕರಿಸುತ್ತೀನೆ. ನೆಗೆಟಿವ್ ಆಗಿದ್ದರೆ ಬಿಟ್ಟಾಕುತ್ತೀನಿ. ಟ್ರೋಲ್‌ನಿಂದ ಇದುವರೆಗೂ ನನಗೇನೂ ಅಫೆಕ್ಟ್‌ ಆಗುವುದಿಲ್ಲ ಆಗಿಲ್ಲ. ಟ್ರೋಲರ್ಸ್‌ ಕಡೆಯುಂದ ನಾನು ಯಾವುದೇ ರೀತಿ ಸ್ಟ್ರೆಸ್‌ ತೆಗೆದುಕೊಳ್ಳುವುದಿಲ್ಲ. ನನಗೆ ನನ್ನ ಹತ್ತಿರದವರು ಏನಾಆದರೂ ಹೇಳಿದರೆ ಹರ್ಟ್ ಅಗುತ್ತದೆ. ಯಾರೋ ಮೆಸೇಜ್ ಮಾಡಿದರು ಅಂತ ತಲೆ ಕೆಡಿಸಿಕೊಳ್ಳುವುದಿಲ್ಲ. ಈಈ ತರಹದ ಗಟ್ಟಿತನವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ನಾನು ಹೇಳುತ್ತೇನೆ. ದರ್ಶನ್ ಪ್ರಕರಣದಿಂದ ತುಂಬಾ ಬೇಜಾರಾಗಿದೆ ಆದರೆ ಇದು ಎಲ್ಲರಿಗೂ ಒಂದು ಪಾಠ. ಟ್ರೋಲರ್ಸ್‌ಗೂ ಇದು ಪಾಠ ಎಂದಿದ್ದಾರೆ ರೂಪಾ ರಾಯಪ್ಪ. 

Latest Videos
Follow Us:
Download App:
  • android
  • ios