ಸ್ಯಾಂಡಲ್‌ವುಡ್‌ ಎವರ್‌ಗ್ರೀನ್‌ ಮೋಹಕತಾರೆ ನಟಿ ರಮ್ಯಾ ಕೆಲವು ತಿಂಗಳಿನಿಂದ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ಏನಾದರೂ ಫೋಸ್ಟ್‌ ಮಾಡುತ್ತಲೇ ಇರುತ್ತಾರೆ. ನಟಿ ಹಾಕುವ ಪೋಸ್ಟ್ ಹಾಗೂ ಸ್ಟೋರಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಆದರೀಗ ಅವರ ಅಕೌಂಟ್ ಹ್ಯಾಕ್‌ ಆಗಿದೆ ಎನ್ನಲಾಗುತ್ತಿದೆ.

ಹಬ್ಬದ ದಿನವೇ ಮೋಹಕತಾರೆ ಕೊಟ್ರು ಶಾಕಿಂಗ್ ನ್ಯೂಸ್?

ರಮ್ಯಾ ಅಕೌಂಟ್‌ನಲ್ಲಿ ಆಗಿದ್ದೇನು?:
ಅಗಸ್ಟ್‌ 26ರಂದು  ವಿಶ್ವ ಶ್ವಾನಗಳ ದಿನದಂದು ತಮ್ಮ ಮುದ್ದಿನ ಸಾಕು ನಾಯಿಗಳ ಪೋಟೋ ಶೇರ್ ಮಾಡಿಕೊಂಡ ನಂತರ ರಮ್ಯಾ ಅಕೌಂಟ್‌ನಲ್ಲಿ ಏನೋ ಸಮಸ್ಯೆ ಸೃಷ್ಟಿಯಾಗಿದೆ. ಈ ಹಿಂದೆ ಶೇರ್ ಮಾಡಲಾಗಿದ್ದ ಪೋಟೋಗಳೂ ಕಾಣಿಸುತ್ತಿಲ್ಲ. ಆದರೆ ಇನ್‌ಸ್ಟಾಗ್ರಾಂ ಸ್ಟೋರಿ ಮಾತ್ರ ಎಲ್ಲರಿಗೂ ಕಾಣಿಸುತ್ತಿದೆ. ಈ ಸಮಸ್ಯೆಯನ್ನು ಬಗೆ ಹರಿಸಲು ದಿನವಿಡೀ ಶ್ರಮಿಸಿದರೂ ಫಲ ಸಿಗಲಿಲ್ಲವೆಂದು ಅಭಿಮಾನಿಗಳಲ್ಲಿ ನೋವು ತೋಡಿಕೊಂಡಿದ್ದಾರೆ.

'ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈಗಾಗಲೆ ಅನೇಕ ಬಾರಿ ಅನ್‌ಇನ್‌ಸ್ಟಾಲ್‌ ಮಾಡಿ ರೀ-ಫ್ರೆಶ್ ಮಾಡಿದ್ದರೂ ಏನೂ ವ್ಯತ್ಯಾಸ ಕಾಣುತ್ತಿಲ್ಲ, ' ಎಂದು ಅಕೌಂಟ್ ಸ್ಕ್ರೀನ್‌ ಶಾಟ್ ಶೇರ್ ಮಾಡಿದ್ದಾರೆ. ' ನನ್ನ ಅಕೌಂಟ್‌ನಲ್ಲಿ ಏನೋ ಸಮಸ್ಯೆ ಎದುರಾಗಿದೆ. ನಿಮಗೆ ನಾನು ಹಾಕಿರುವ ಫೋಸ್ಟ್‌ಗಳು ಕಾಣಿಸುತ್ತಿದ್ಯಾ? Yes or No' ಎಂದು ಕೇಳಿದ್ದಾರೆ. ಕೆಲವರು ಕಾಣಿಸುತ್ತಿದೆ, ಮತ್ತೆ ಕೆಲವರು NO ಎಂದು ಉತ್ತರಿಸಿದ್ದಾರೆ.

ರಮ್ಯಾ ಅಕೌಂಟ್‌ ಹ್ಯಾಕ್‌ ಆಗಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇನ್‌ಸ್ಟಾಗ್ರಾಂ ಖಾತೆ ಬ್ಯಾಗ್ರೌಂಡ್‌ನಲ್ಲಿಏನೋ ಸಮಸ್ಯೆ ಆಗಿದೆ, ಸರಿ ಹೋಗುತ್ತದೆ ಎಂದು ಹೇಳುತ್ತಿದ್ದಾರೆ. ಇತ್ತೀಚಿಗೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆದ ಕಾರಣ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ರಮ್ಯಾ ಮತ್ತೆ ಫೋಸ್ಟ್‌ ಮಾಡುವಂತಾಗಲಿ ಎಂದು ಫ್ಯಾನ್‌ ಪೇಜ್‌ಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಬ್ಯುಸಿನೆಸ್‌ಗೆ ಸಾಥ್‌ ಕೊಟ್ಟ ರಮ್ಯಾ!

2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಜಯಭೇರಿ ಸಾಧಿಸಿದ ನಂತರ, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದ ರಮ್ಯಾ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಷ್ಟೇ ಅಲ್ಲ ವೈಯಕ್ತಿಕವಾಗಿಯೂ ಸೋಷಿಯಲ್ ಮೀಡಿಯಾದಿಂದ ದೂರವಾಗಿದ್ದರು. ಒಮ್ಮೆ ಮದುವೆಯಾಗುತ್ತಿದ್ದಾರೆ ಎಂಬ ಗಾಳಿ ಸುದ್ದಿಯೂ ಹಬ್ಬಿತ್ತು. ಇದ್ದಕ್ಕಿದ್ದಂತೆ ಮತ್ತೆ ಪ್ರತ್ಯಕ್ಷರಾದ ರಮ್ಯಾ, ಇದೀಗ ಇನ್‌ಸ್ಟಾಗ್ರಾಮ್, ಟ್ವೀಟರ್ ಹಾಗೂ ಫೇಸ್‌ಬುಕ್ ಮೂರೂ ಕಡೆಯೂ ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅಲ್ಲದೇ ಸ್ಯಾಂಡಲ್‌ವುಡ್ ನಟಿಯರಾದ ರಕ್ಷಿತಾ, ರಾಧಿಕಾ ಹಾಗೂ ರಶ್ಮಿಕಾ ಪೋಸ್ಟ್‌ಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ, ಸ್ಯಾಂಡಲ್‌ವುಡ್ ಜೊತೆ ಮತ್ತೊಮ್ಮೆ ಬಾಂಧವ್ಯ ವೃದ್ಧಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆ ಮೂಲಕ ಮತ್ತೆ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾರೆಂಬ ಸುದ್ದಿಯೂ ಕೇಳಿ ಬರುತ್ತಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ. 

ಮೋದಿಗೆ ಸೋಷಿಯಲ್ ಮೀಡಿಯಾ ಮೂಲಕ ಕಾಲೆಳೆಯುತ್ತಿದ್ದ ರಮ್ಯಾ, ಕೆಲವು ದಿನಗಳ ಕಾಲ ತಮ್ಮ ವೈಯಕ್ತಿಕ ಪೋಸ್ಟ್ ಹಾಕುತ್ತಿದ್ದರಷ್ಟೇ. ಆದರೆ, ಮತ್ತೀಗ ರಾಮಮಂದಿರಕ್ಕೆ ಅಯೋಧ್ಯೆಯಲ್ಲಿ ಮೋದಿ ಶಂಕು ಸ್ಥಾಪನೆ ನೆರವೇರಿಸಿದ ನಂತರ ಬೇರೆ ಬೇರೆ ವಿಷಯಗಳಿಗೆ ಮೋದಿ ಕಾಲೆಳೆದು ಮತ್ತೊಮ್ಮೆ ಸುದ್ದಿಯಾಗಿದ್ದರು. ಒಟ್ಟಿನಲ್ಲಿ ರಮ್ಯಾ ಮತ್ತೆ ರಾಜಕೀಯಕ್ಕೆ ಮರಳುತ್ತಾರಾ, ಮದುವೆಯಾಗುತ್ತಾರಾ ಅಥವಾ ಚಿತ್ರರಂಗಕ್ಕೆ ಮರಳುತ್ತಾರಾ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ, ಈ ಮೋಹಕ ತಾರೆಯನ್ನು ಮತ್ತೊಮ್ಮೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿರುವುದು ಮಾತ್ರ ಸುಳ್ಳಲ್ಲ.