ಕೊರೋನಾ ದೂರ ಮಾಡಲು ಮಾಸ್ಕ್ ಬೇಡ, ಗ್ಲೌಸ್ ಬೇಕು: ರಾಗಿಣಿ ಹೊಸ ಟಿಪ್!
ಕೊರೋನಾ ವೈರಸ್ ಭಾರತದಲ್ಲಿ ಈಗಾಗಲೇ ಎರಡು ಬಲಿ ತೆಗೆದುಕೊಂಡಿದ್ದು, ಇದನ್ನು ತಡೆಯುವ ಸಂಬಂಧ ಎಲ್ಲೆಡೆ ಸುದ್ದಿಯಾಗುತ್ತಲೇ ಇದೆ. ಇದನ್ನು ಎದುರಿಸಲು ತುಪ್ಪದ ಬೆಡಗಿ ಕೊಟ್ಟ ಹೊಸ ಸಲಹೆ ಏನು ಕೇಳಿ...
ವಿಶ್ವದ್ಯಾಂತ ತೀವ್ರ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ಸೋಂಕು ಜನರನ್ನು ಆತಂಕಕ್ಕೆ ಗುರಿ ಮಾಡಿದೆ. ಈಗಾಗಲೇ ಮುಖ್ಯಮಂತ್ರಿ ಆದೇಶದಂತೆ ಕರ್ನಾಟಕದಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಒಟ್ಟಿಗೆ ಕಾಣಿಸುವ ಮಾಲ್, ಚಿತ್ರಮಂದಿರಗಳು, ಶಾಲಾ-ಕಾಲೇಜುಗಳನ್ನು ವಾರದ ಮಟ್ಟಿಗೆ ಮುಚ್ಚಲಾಗಿದೆ.
ಮದುವೆ ಸಂಭ್ರಮದಲ್ಲಿ ರಾಗಿಣಿ.. ಮೆಹಂದಿಯುಲ್ಲಿ ಮಿಂಚಿಂಗ್ ತುಪ್ಪದ ರಾಣಿ!
ಜನ ಸಾಮಾನ್ಯರಂತೆ ಮಾಸ್ಕ್ ಧರಿಸಿ ಓಡಾಡುತ್ತಿರುವ ಸಿನಿ ತಾರೆಯರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ತುಪ್ಪದ ಹುಡುಗಿ ರಾಗಿಣಿ ಕೊರೋನಾ ವೈರಸ್ ಬಾರದಂತೆ ಎಚ್ಚರವಾಗಿರಲು ಸಲಹೆ ನೀಡಿದ್ದಾರೆ.
'ಮಾಸ್ಕ್ ಬದಲು ಗ್ಲೌಸ್ ಬಳಸಿ. ಆರೋಗ್ಯವಾಗಿಲ್ಲದವರು ಮಾತ್ರ ಮಾಸ್ಕ್ ಬಳಸುತ್ತಾರೆ ಅಥವಾ ತುಂಬಾ ಅಗತ್ಯವಿದ್ದರೆ ಮಾತ್ರ ಬಳಸಿ. ನಾವು ನಮ್ಮ ಕೈಗಳನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳಬೇಕು #UseGlovesnotmasks #CoronaAlert' ಎಂದು ಟ್ಟೀಟ್ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಕೊರೋನಾ ವೈರಸ್ ಆತಂಕ ಸಿನಿ ಪ್ರೇಮಿಗಳಲ್ಲಿ ಹೆಚ್ಚಾದ ಕಾರಣ ಚಿತ್ರಮಂದಿರಗಳಲ್ಲಿ ಜನರು ಕಮ್ಮಿಯಾಗಿದ್ದರು. ಇದೀಗ ಪೂರ್ತಿ ಚಿತ್ರ ಮಂದಿರಗಳನ್ನೇ ಮುಚ್ಚಿರುವುದರಿಂದ, ಚಿತ್ರೋದ್ಯಮ ಫುಲ್ ಬಂದ್ ಆಗಿದೆ. ಈ ಕಾರಣಕ್ಕೆ ಸಿನಿಮಾ ರಿಲೀಸ್ ಮಾಡುವುದನ್ನೂ ಮುಂದೂಡಲಾಗಿದೆ. ಮಾರ್ಚ್ 14ರಿಂದ 1 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗಳನ್ನು ನಿಷೇಧಿಸಲಾಗಿದೆ.
ಹೊಸ ಕ್ರಿಸ್ಪಿ ರೆಸಿಪಿ ಬೇಕಾ? ರಾಗಿಣಿ ಹೇಳಿಕೊಡ್ತಾರೆ ನೋಡಿ!