ದಿನಾ ಒಂದೇ ರೀತಿಯ ಅಡುಗೆ ತಿನ್ನುವುದಕ್ಕೆ ಬೇಸರ ಎನಿಸುತ್ತದೆ. ದಿನೇ ಅದೇ ದೋಸೆ, ಇಡ್ಲಿ, ಉಪ್ಪಿಟ್ಟು, ಚಪಾತಿ ತಿಂದು ತಿಂದು ಬೇಸರ ಎನಿಸುತ್ತಿದೆಯಾ? ಬೇರೆ ಏನಾದ್ರೂ ಹೊರ ರುಚಿ ಮಾಡ್ಬೇಕು ಅಂತ ರೆಸಿಪಿ ಹುಡುಕ್ತಾ ಇದೀರಾ? ಇಲ್ಲಿದೆ ನೋಡಿ. 

ಸೀರಿಯಲ್ ಲೋಕದ ಸೆನ್ಸೇಷನ್ 'ಜೊತೆ ಜೊತೆಯಲಿ' ಯಲ್ಲಿ ಭಾರೀ ಬದಲಾವಣೆ?

ಹೊಸ ಹೊಸ ರೆಸಿಪಿಗಳನ್ನು ಹುಡುಕಿ ಮಾಡುವುದು ಒಂದು ಟಾಸ್ಕ್. ಒಂದು ವೇಳೆ ರೆಸಿಪಿ ಸಿಕ್ಕರೂ ಅದನ್ನು ಮಾಡಲು ಯಾರಿಗೂ ಸಮಯವಿರುವುದಿಲ್ಲ. ಫಟಾಫಟ್ ಅಂತ ಮಾಡುವ ಹಾಗಿರಬೇಕು. ಅಣತಹ ರೆಸಿಪಿಗಳು ಇಷ್ಟವಾಗುತ್ತದೆ.  ಅಂತದ್ದೊಂದು ರೆಸಿಪಿಯನ್ನು ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಹೇಳಿದ್ದಾರೆ ನೋಡಿ.

ನಾಲ್ಕು ಮೊಟ್ಟೆ ಒಡೆದು ಅದಕ್ಕೆ ಈರುಳ್ಳಿ, ಮಸಾಲೆ ಪುಡಿ, ಮೆಣಸಿನಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಈ ಮಿಶ್ರಣವನ್ನು ಚಿಪ್ಸ್ ಪ್ಯಾಕ್‌ಗೆ ಹಾಕಿ. ಕುದಿಯುತ್ತಿರುವ ನೀರೋಳಗೆ ಇಡಿ. ಅದು ಬೆಂದ ಬಳಿಕ ರುಚಿ ರುಚಿಯಾದ ಆಮ್ಲೆಟ್ ರೆಡಿ! ಚಿಪ್ಸ್ ಪ್ರಿಯರು ಈ ರೆಸಿಪಿಯನ್ನು ಟ್ರೈ ಮಾಡಿ ನೋಡಬಹುದು. 

ರಾಗಿಣಿ ದ್ವಿವೇದಿ 'ಅಧ್ಯಕ್ಷ ಇನ್ ಅಮೆರಿಕಾ' ಸಿನಿಮಾದಲ್ಲಿ ಶರಣ್ ಜೊತೆ ನಟಿಸಿದ್ದಾರೆ. ಇದಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡಾ ಬಂದಿದೆ.