ಸ್ಯಾಂಡಲ್‌ವುಡ್‌ ಸ್ಟಾರ್ ಕಪಲ್‌ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಪ್ರತಿಯೊಂದೂ ಫೋಟೋ ಹಾಗೂ ವಿಡಿಯೋದಲ್ಲಿಯೂ ಏನಾದರೂ ಸ್ಪೆಷಾಲಿಟಿ ಇದ್ದೇ ಇರುತ್ತದೆ. ಉರಿ ಬಿಸಿಲು ಶುರುವಾಗಿದ್ದೇ ಆಗಿದ್ದು, ಐರಾ ಕೂಲಿಂಗ್ ಗ್ಲಾಸ್‌ ಧರಿಸಿ ತಾಯಿ ಜೊತೆ ಹೊರಗೆ ಕಾಣಿಸಿ ಕೊಂಡಿದ್ದಾಳೆ.

ಮಿಕ್ಕಿ ಮೌಸ್‌ ಜೊತೆ ಪೋಸ್‌ ಕೊಟ್ಟ ಐರಾ; ತಾಯಿ ಜೊತೆ ಬೀಚ್‌ನಲ್ಲಿ ಯಥರ್ವ್! 

ಇನ್‌ಸ್ಟಾಗ್ರಾಂನಲ್ಲಿ ಮಾತ್ರ ರಾಧಿಕಾ ಪಂಡಿತ್ ಸಖತ್ ಆ್ಯಕ್ಟೀವ್ ಆಗಿರುವುದು. ಹೀಗಾಗಿ ಇನ್‌ಸ್ಟಾ ಸ್ಟೋರಿಯಲ್ಲಿ ಮಗಳು ಲೈಟ್‌ ಕಲರ್‌ ಫ್ಲೋರಲ್‌ ಫ್ರಾಕ್‌ಗೆ ಎರಡು ಜುಟ್ಟು ಹಾಗೂ ಕೂಲಿಂಗ್ ಗ್ಲಾಸ್ ಧರಿಸಿರುವ ಫೋಟೋ ಹಂಚಿಕೊಂಡಿದ್ದಾರೆ. ನೀವು ಗಮನಿಸಲೇ ಬೇಕಾದದ್ದು ಐರಾ ಕೂಲಿಂಗ್ ಗ್ಲಾನ್‌ನಲ್ಲಿ ತೆಂಗಿನ ಮರವಿರುವುದು. ಫ್ರಾಕ್‌ಗೆ ಮ್ಯಾಚಿಂಗ್ ಶೋ ಧರಿಸಿರುವ ಐರಾ ಕೆಲವೇ ದಿನಗಳಲ್ಲಿ ಸಮ್ಮರ್ ವೆಕೇಷನ್ ಶುರು ಮಾಡುವುದರಲ್ಲಿ ಅನುಮಾವಿಲ್ಲ. 

ರಾಧಿಕಾ ಪಂಡಿತ್‌ಗಿಂತ ಹೆಚ್ಚಾಗಿ ವೈರಲ್ ಆಗುತ್ತಿದೆ ಐರಾ ಫೋಟೋಗಳು; ಅಭಿಮಾನಿ ಬಳಗ ದೊಡ್ಡದು!

ಈ ಹಿಂದೆ ಫ್ಯಾಮಿಲಿ ಜೊತೆ ಮಾಲ್ಡೀವ್ಸ್ ಟ್ರಿಪ್ ತೆರಳಿದ್ದಾಗಲೂ ಐರಾ ತುಂಬಾನೇ ಕ್ಯೂಟ್ ಆಗಿ ರೆಡಿಯಾಗಿದ್ದಳು.  ಕಳೆದ ವರ್ಷ ಏಪ್ರಿಲ್‌ನಲ್ಲಿ ಐರಾ ಸಮ್ಮರ್ ಹೆಚ್ಚಾಗುತ್ತಿದೆ ಎಂದು ಹೇಳಿ ಮನೆಯಲ್ಲಿಯೇ ತಯಾರಿಸಿದ್ದ ಕಲ್ಲಂಗಡಿ ಹಣ್ಣಿನ ಐಸ್‌ ಕ್ರೀಮ್‌ ಸವಿಯುತ್ತಿದ್ದ ಫೋಟೋ ಶೇರ್ ಮಾಡಿಕೊಂಡು, 'ಸಮ್ಮರ್ ಹೀಟ್ ತಡೆಯಲಾಗದೇ ಅಮ್ಮ ನನಗಾಗಿ ಮಾಡಿಕೊಟ್ಟ ವಾಟರ್‌ಮೆಲನ್‌ ಪಾಪ್‌ ಸಿಕಲ್‌' ಎಂಬ ಕ್ಯಾಪ್ಷನ್ ನೀಡಿ ರಾಧಿಕಾ ಫೋಟೋ ಪೋಸ್ಟ್‌ ಮಾಡಿದ್ದರು.