ಸ್ಯಾಂಡಲ್‌ವುಡ್‌ ಸಂತೂರ್‌ ಮಮ್ಮಿ ರಾಧಿಕಾ ಪಂಡಿತ್‌ ಸೋಷಿಯಲ್ ಮೀಡಿಯಾದಲ್ಲಿ ಏನೇ ಶೇರ್ ಮಾಡಿಕೊಂಡರೂ ವೈರಲ್ ಆಗುತ್ತದೆ. ಅದರಲ್ಲೂ ಸ್ಟಾರ್ ಕಿಡ್ ಐರಾ ಹಾಗೂ ಯಥರ್ವ್ ಇಂಟರ್‌ನೆಟ್‌ ಸ್ಟಾರ್‌ಗಳು. ಕೆಲ ದಿನಗಳ ಹಿಂದೆ ಶೇರ್ ಮಾಡಿಕೊಂಡ ಫೋಟೋ ಇದು...

ನೀವು ಕೊಟ್ಟ ನಗು ಧಿರಿಸಿರುವೆ; ವ್ಯಾಲೆಂಟೈನ್ಸ್ ಡೇ ಆಚರಿಸಿದ ರಾಕಿಂಗ್ ದಂಪತಿ! 

ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳಿರುವ ಕಾರಣ ಮನೆ ತುಂಬಾ ಆಟದ ಸಾಮಾನು ಇರುತ್ತವೆ. ಕೆಲವೊಂದು ಐರಾ ಹಾಗೂ ಯಥರ್ವ್‌ ಶೇರ್ ಮಾಡಿಕೊಂಡರೂ, ಅವರವರೆಗೆ ಒಂದು ಫೇವರೆಟ್‌ ಇದ್ದೇ ಇರುತ್ತದೆ. ಕ್ಯೂಟಿ ಐರಾ ಮಿನ್ನಿ ಮೌಸ್ ಹಿಡಿದುಕೊಂಡು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಗೊಂಬೆ ಉದ್ದಾ ಇದ್ಯಾ? ಅಥವಾ ನಮ್ಮ ಐರಾ ಉದ್ದ ಆಗಿದ್ದಾಳಾ ಎಂದು ಕೇಳುತ್ತಿದ್ದಾರೆ. 

ಇತ್ತೀಚೆಗೆ ರಾಕಿಂಗ್ ದಂಪತಿ ಮಾಲ್ಡೀವ್ಸ್‌ ಪಯಣ ಮಾಡಿದ್ದರು. ಯಥರ್ವ್‌ ಜೊತೆ ಸಮುದ್ರ ನೋಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ರಾಧಿಕಾ ನಗುತ್ತಿದ್ದರೆ, ಯಥರ್ವ್ ಸೀರಿಯಸ್‌ ಲುಕ್‌ ನೀಡಿದ್ದಾರೆ. 'ನಿಮಗೆ ಇಬ್ಬರ ಯಾರು ತುಂಬಾ ಇಷ್ಟ, ಮಮ್ಮಿ ಫೇವರೆಟ್‌ ಕಿಡ್‌ ನೀನಾ? ಯಥರ್ವಾ ಆ?,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಮಕ್ಕಳ ಜೊತೆ ಮೋಜು ಮಸ್ತಿ ಮಾಡುತ್ತಿರುವ ರಾಕಿಂಗ್ ದಂಪತಿ; ಫೋಟೋ ನೋಡಿ!