ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್‌ ರಚಿತಾ ರಾಮ್‌ ದಿನೇ ದಿನೇ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಗುಳಿ ಕೆನ್ನೆ ಹುಡುಗಿ ಬೆಳ್ಳಿ ಪರದೆ ಮೇಲೆ ನಟಿಯಾಗಿ ಮಾತ್ರವಲ್ಲದೆ, ಕಿರುತೆರೆಯಲ್ಲಿಯೂ ಕಾಮಿಡಿ ರಿಯಾಲಿಟಿ ಶೋನಲ್ಲಿ ಜಡ್ಜ್‌ ಆಗಿಯೂ ಮಿಂಚುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಚಾರ ಪೋಸ್ಟ್ ಮಾಡಿದ ರಚಿತಾ ರಾಮ್

ಸಾಮಾಜಿಕ ಜಾಲತಾಣದಲ್ಲಿಯೂ ಸದಾ ಆ್ಯಕ್ಟಿವ್ ಇರುವ ರಚಿತಾ ತಮ್ಮ ಮೋಸ್ಟ್‌ ಮೆಮೋರಬಲ್‌ ಕ್ಷಣಗಳನ್ನು ಇನ್‌ಸ್ಟಾಗ್ರಾಂ ಹಾಗೂ ಫೇಸ್‌‌ಬುಕ್‌ನಲ್ಲಿ ಆಗಾಗ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ರಚಿತಾ ರಾಮ್ ಹೆಸರಿನ ಟ್ವಿಟ್ಟರ್ ಖಾತೆಗೂ ಸುಮಾರು 62,600 ಮಂದಿ ಫಾಲೋಯರ್ಸ್ ಇದಾರೆ. ಆದರೆ, ವಿಷ್ಯ ಗೊತ್ತಾ, ಇದು ಅವರ ಪಕ್ಕಾ ಅಫಿಷಿಯಲ್ ಖಾತೆಯಂತೆ ಕಂಡರೂ, ಫೇಕ್ ಅಂತೆ! ಇದನ್ನು ಹಿಂದೆಯೇ ರಚಿತಾ ಕನ್ಫರ್ಮ್ ಮಾಡಿದ್ದರು. ನ.1ರಂದು ಕನ್ನಡ ರಾಜ್ಯೋತ್ಸವಕ್ಕೆ ವಿಶ್ ಮಾಡಿದ ಪೋಸ್ಟ್ ಒಂದನ್ನು ಪಿನ್ ಮಾಡಿದ್ದು, ಜನವರಿ 24ಕ್ಕೆ ಮತ್ತೊಂದು ಸ್ಟೇಟಸ್ ಹಾಕಲಾಗಿದೆ. ಡಿಟ್ಟೋ ರಚಿತಾ ಅವರದ್ದೇ ಪೋಸ್ಟ್ ಎನ್ನುವಂತಿದ್ದು, ಇದು ಫೇಕ್ ಎಂದು ರಚಿತಾ ಸ್ಪಷ್ಟಪಡಿಸಿದ್ದನ್ನು ಜನರು ಮರೆತಿದ್ದಾರೆ ಎನಿಸುತ್ತೆ.

ರಚಿತಾ ರಾಮ್ ಅವರ ಹೆಸರಿನಲ್ಲಿ ಟ್ಟಿಟರ್‌ನ ಖಾತೆ ತೆರೆದು, ಯಾರೋ ಎಲ್ಲ ವಿಚಾರಗಳನ್ನೂ ರಚಿತಾನೇ ಹೇಳುತ್ತಿರುವ ಹಾಗೆ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಅಭಿಮಾನಿಗಳಿಗೆ ತಪ್ಪು ಮಾಹಿತಿ ತಲುಪುತ್ತದೆ. ಇಂಥ ಫೇಕ್ ಅಕೌಂಟ್ ಮಾಡೋರಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದೂ ಈ ನಟಿ ಹೇಳಿದ್ದಾರೆ. 

'ಏಪ್ರಿಲ್‌ ಡಿಸೋಜಾ' ಎಂದು ಹೆಸರು ಬದಲಾಯಿಸಿಕೊಂಡ ರಚಿತಾ ರಾಮ್!

ಸ್ಟಾರ್ ನಟರು ಅಭಿಮಾನಿಗಳು ಫ್ಯಾನ್‌ ಪೇಜ್‌ ತೆರೆದು ತಮ್ಮ ನೆಚ್ಚಿನ ನಟ-ನಟಿಯರ ಬಗ್ಗೆ ಅಪ್ಡೇಟ್‌ ಮಾಡುತ್ತಾರೆ. ಆದರೆ ಅವರೇ ಖಾತೆ ಮೆಂಟೈನ್ ಮಾಡುವಂತೆ ಮಾಡುವುದು ಕಾನೂನು ಬಾಹಿರವೂ ಹೌದು. ಇದರಿಂದ ವಂಚನೆ ನಡೆಯುವ ಸಾಧ್ಯತೆಯನ್ನೂ ತಳ್ಳಿ ಹಾಕಲಾಗುವುದಿಲ್ಲ. ಹಾಗಾಗಿ ಇಂಥ ಅಕೌಂಟ್ ಮೇಲೆ ಹದ್ದಿನ ಕಣ್ಣಿಡುವ ಅಗತ್ಯವಿದೆ.